2001ರಿಂದ ಎದುರಾಳಿಗಳ ವಿರುದ್ಧ ಹೋರಾಡುವ ಶಕ್ತಿ ತುಂಬಿದೆ: ಮೋದಿ

ವರದಿಗಾರ: ಎದುರಾಳಿಗಳನ್ನು ಬಗ್ಗು ಬಡಿಯುವ ಶಕ್ತಿಯನ್ನು ಶಿವ ನನಗೆ ಕರುಣಿಸಿದ್ದಾನೆ. ಭೋಲೆ ಬಾಬಾ ಆಶೀರ್ವಾದ ನನಗೆ 2001ರಿಂದಲೂ ಎದುರಾಳಿಗಳ ವಿರುದ್ಧ ಹೋರಾಡುವ ಶಕ್ತಿಯನ್ನು ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಅವರು ಪ್ರಧಾನಿಯಾದ ಬಳಿಕ ಮೊಟ್ಟ ಮೊದಲ ಬಾರಿಗೆ ಹುಟ್ಟೂರಿಗೆ ಭೇಟಿ, ಹಠಕೇಶ್ವರ ಮಹಾದೇವ ಮಂದಿರದಲ್ಲಿ ಪೂಜೆ ಸಲ್ಲಿಸಿದ ಬಳಿಕ ಹೇಳಿದ್ದಾರೆ.

ಭೋಲೆ ಬಾಬಾ ಆಶೀರ್ವಾದ ವಿಷವನ್ನೂ ಸೇವಿಸಿ ಜೀರ್ಣಿಸಿಕೊಳ್ಳುವ ಶಕ್ತಿಯನ್ನು ನೀಡಿದೆ. ಇದೇ ಕಾರಣದಿಂದ 2001ರಿಂದ ನನಗೆ ಕೆಡಕು ಬಗೆಯುವವರ ವಿರುದ್ಧ ಹೋರಾಟ ನಡೆಸಲು ಸಾಧ್ಯವಾಗಿದೆ.

ಮಾತು ಮುಂದುವರಿಸುತ್ತಾ, ನನ್ನ ವಿರುದ್ಧ ಸಂಚು ನಡೆಸಿದವರು ಮಣ್ಣು ಮುಕ್ಕುತ್ತಾರೆ. ನಾನು ಮೋದಿ. ಗಾಂಧಿ ಮತ್ತು ಸರ್ದಾರ್ ನಾಡಿನಲ್ಲಿ ಬೆಳೆದವನು. ಎಷ್ಟು ಕಳ್ಳರು ಬಂದು ಹೋದರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಅಂತಿಮವಾಗಿ ಸತ್ಯ ಮತ್ತು ಪ್ರಾಮಾಣಿಕತೆ ಗೆಲ್ಲುತ್ತದೆ ಎಂದು ಹೇಳಿದ್ದಾರೆ.

error: Content is protected !!
%d bloggers like this:
Inline
Inline