ವರದಿಗಾರ ವಿಶೇಷ

ಸ್ವಾತಂತ್ರ್ಯದ ಸವಿನೆನಪಿನೊಂದಿಗೆ ವರದಿಗಾರನ ಸಮರ್ಪಣೆ

ವರದಿಗಾರ: ಸರ್ವ ಹೃದಯಗಳಿಗೂ ವಿವಿಧತೆಯಲ್ಲಿ ಏಕತೆಯನ್ನು ಸಾರಿದ ಭವ್ಯ ಭಾರತದ 71ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳೊಂದಿಗೆ, ”ವರದಿಗಾರ” ‘ತೆರೆಮರೆಯ ಸತ್ಯ’ ಅಂತರ್ಜಾಲ ಸುದ್ದಿ ಮಾಧ್ಯಮವನ್ನು ಜನತೆಯ ಶಾಂತಿ, ನೆಮ್ಮದಿಗಾಗಿ ಮತ್ತು ಸ್ವತಂತ್ರರಾಗಿ ಬಾಳುವುದಕ್ಕಾಗಿ ಸಮರ್ಪಿಸುತ್ತಿದ್ದೇವೆ.
ಸರ್ವ ಜನಾಂಗದ ಶಾಂತಿಯ ತೋಟವನ್ನು ಪುನರ್ ನಿರ್ಮಿಸಲು ಹೆಜ್ಜೆಯನ್ನಿಡುತ್ತಿರುವ ತಮ್ಮ ಪ್ರಯತ್ನಕ್ಕೆ ಧ್ವನಿಯಾಗಿ ‘ವರದಿಗಾರ’ ನನ್ನು ನಿಮ್ಮ ಮುಂದೆ ತಂದಿದ್ದೇವೆ. ಇದು ಖಂಡಿತವಾಗಿವಾಗಿಯೂ ನಿಮ್ಮದೇ ‘ವರದಿಗಾರ’. ಜನಸಾಮಾನ್ಯರ ಧ್ವನಿಯಾಗಬೇಕು, ಅವರ ವೇದಿಕೆಯಾಗಬೇಕೆಂಬ ಬಹುದೊಡ್ಡ ಕನಸಿನಲ್ಲಿ ಹೆಜ್ಜೆಯನ್ನಿಟ್ಟಿದ್ದೇವೆ. ಮೇಲು ಧ್ವನಿಯಲ್ಲಿ ರಾರಾಜಿಸುತ್ತಿರುವ ಮಾಧ್ಯಮಗಳ ಕಾಲದಲ್ಲಿ ನಮ್ಮ ಧ್ವನಿ ನಿಮ್ಮ ಬಳಿಗೆ ತಲುಪಲು ಬಹಳಷ್ಟು ಸಮಯಗಳು ಬೇಕಾಗಬಹುದು. ಆದರೆ ನಮ್ಮಲ್ಲಿ ನಿರೀಕ್ಷೆಗಳಿವೆ. ಒಂದಲ್ಲಾ ಒಂದಿನ ನಿಮ್ಮ ಬಳಿಗೆ ತಲುಪಲಿದ್ದೇವೆ. ಶಾಂತಿ, ಸೌಹಾರ್ಧ, ಸಹೋದರತೆ ಮತ್ತು ಸಹಬಾಳ್ವೆಯನ್ನು ಕಟ್ಟಿ ಬೆಳೆಸುವುದಕ್ಕಾಗಿಯೇ ಸ್ವಾರ್ಥ ಹಿತಾಸಕ್ತಿಯಿಲ್ಲದ ಮತ್ತು ವ್ಯಾಪಾರಕ್ಕಿಲ್ಲದ ವರದಿಗಾರ ನಿಮ್ಮ ಮುಂದೆ ಬಂದಿದ್ದಾನೆ. ಅಸತ್ಯ, ಅನ್ಯಾಯ, ಅಧರ್ಮಗಳ ವಿರುದ್ಧ ನಮ್ಮ ಪತ್ರಿಕೆ ಯಾರೊಂದಿಗೂ ಹಸ್ತಕ್ಷೇಪವನ್ನು ನಡೆಸುವುದಿಲ್ಲ. ಸತ್ಯ, ನ್ಯಾಯ, ಪ್ರಮಾಣಿಕೆತೆಯು ವರದಿಗಾರನ ಪ್ರಮುಖ ಅಸ್ತ್ರವಾಗಿದೆ. ತಮಗಿಂದೂ ನಿರ್ಭೀತಿಯಿಂದ ಮಾತನಾಡುವ, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ, ತರೆಮರೆಯಲ್ಲಿ ಅಡಗಿ ಹೋದ ಮತ್ತು ಅಡಗಿ ಹೋಗಲಿರುವ ಸತ್ಯಾಂಶಗಳನ್ನು ಸಮಾಜದ ಮುಂದಿಡುವ ವೇದಿಕೆ, ಧ್ವನಿಯಾಗಿ ‘ವರದಿಗಾರ’ ನನ್ನು ನಿಮ್ಮ ಮುಂದೆ ಬಂದಿದ್ದಾನೆ. ಪ್ರಜಾಪ್ರಭುತ್ವ ದೇಶದಲ್ಲಿ ಸರ್ವರೂ ಸ್ವಾತಂತ್ರ್ಯವಾಗಿ ಬಾಳಿ ಜೀವನ ಸಾಗಿಸಬೇಕೆಂಬ ಕನಸನು ಹೊತ್ತು ವರದಿಗಾರ ಮಾಧ್ಯಮ ರಂಗಕ್ಕೆ ಬಂದಿದ್ದಾನೆ. ನಿನ್ನೆ ವರದಿಗಾರನೆಂಬ ಹೆಸರು ಮಾತ್ರವಿತ್ತು, ಆ ಹೆಸರಿನೊಂದಿಗೆ ಇಂದು ಜವಾಬ್ದಾರಿ ಮತ್ತು ಹೊಣೆಗಾರಿಕೆಯಿದೆ. ಆ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಬೇಕಾಗಿದೆ. ಅದಕ್ಕೆ ತಮ್ಮ ಸಹಕಾರವೂ ಅತೀ ಮುಖ್ಯವಾಗಿದೆ.  ಇಲ್ಲಿ ಯಾರೊಂದಿಗೂ ಪೈಪೋಟಿಯನ್ನು ನೀಡಲು ನಾವು ಈ ಪತ್ರಿಕೆಯನ್ನು ಹೊರ ತಂದಿಲ್ಲ. ಬದಲಾಗಿ ವರದಿಗಾರ ತನ್ನ ಸತ್ಯ ಮತ್ತು ಪ್ರಾಮಾಣಿಕತೆಯಿಂದ ಕೂಡಿದ ವರದಿಯನ್ನು ನಿಮ್ಮ ಹೃದಯಕ್ಕೆ ನೀಡಲು ಹೊರ ತಂದಿದ್ದೇವೆ.

ಪತ್ರಿಕೆ ಲೋಕಾರ್ಪಣೆ ಪ್ರಯುಕ್ತ ‘ನಮ್ಮ ಹೆಜ್ಜೆಗೆ, ನಿಮ್ಮ ನುಡಿ’  ಎಂಬ ಶೀರ್ಷಿಕೆಯಡಿಯಲ್ಲಿ ಸಮಾಜದಲ್ಲಿ ಗುರುತಿಸಲ್ಪಟ್ಟ ಗೌರವಾನ್ವಿತ ವ್ಯಕ್ತಿಗಳು ತಮ್ಮ ಮನದಾಳದ ಅಭಿಪ್ರಾಯವನ್ನು ನಮ್ಮ ಮುಂದಿಟ್ಟಿದ್ದಾರೆ. ಹಲವರು ಪ್ರೋತ್ಸಾಹಿಸಿದ್ದಾರೆ ಎಲ್ಲರಿಗೂ ‘ವರದಿಗಾರ’ ಕೃತಜ್ಞ ಸಲ್ಲಿಸುತ್ತದೆ ಮತ್ತು ತಮ್ಮ ಮುಕ್ತ ಅಭಿಪ್ರಾಯವನ್ನು ಗಂಭೀರವಾಗಿ ಪರಿಗಣನೆಗೆ ಪಡೆದುಕೊಂಡು ತಮ್ಮೆಲ್ಲರ ಕನಸಿನ ಮಾಧ್ಯಮದಂತೆ ಮುಂದಕ್ಕೆ ಕೊಂಡೊಯ್ಯಲು ಶಕ್ತಿ ಮೀರಿ ಪ್ರಯತ್ನಿಸುತ್ತದೆ.

ತಮಗಾಗಿ ಹಲವು ವಿಭಾಗಗಳನ್ನು ತೆರೆದಿದ್ದೇವೆ. ಸದುಪಯೋಗಪಡಿಸುವ ವಿಶ್ವಾಸವೂ ಇದೆ. ಯಾರದೇ ತೇಜೋವಧೆಗಳಿಲ್ಲದ ನಿಮ್ಮ ಲೇಖನ, ಬರಹ, ಅಭಿಪ್ರಾಯ ಹಾಗೂ ಸತ್ಯ, ನ್ಯಾಯ, ಪ್ರಾಮಾಣಿಕತೆಯಿಂದ ಕೂಡಿರುವ ಸುದ್ದಿಗಳನ್ನು ನಮ್ಮೊಂದಿಗೆ ಮುಕ್ತವಾಗಿ ಹಂಚಿಕೊಳ್ಳಬಹುದು. ನಿಮ್ಮ ಗ್ರಾಮ, ತಾಲೂಕು, ಜಿಲ್ಲೆಯಲ್ಲಿರುವ ಪ್ರತಿಭೆಗಳನ್ನು ಸಮಾಜಕ್ಕೆ ತೋರ್ಪಡಿಸಲು ಮತ್ತು ಅವರ ಪ್ರತಿಭೆಗಳನ್ನು ಗುರುತಿಸಿಕೊಳ್ಳಲು ‘ವರದಿಗಾರ’ ಮುಕ್ತ ವೇದಿಕೆಯಾಗಿದೆ.  ಪ್ರೀತಿಯಿಂದ ಬದುಕೋಣ, ಸಹಬಾಳ್ವೆಯಿಂದ ಬಾಳೋಣ, ಸೌಹಾರ್ಧತೆಯಿಂದ ಕೂಡಿದ ಸಮಾಜವನ್ನು ಕಟ್ಟೋಣ. ಸ್ವಾತಂತ್ರ್ಯ ದಿನದಲ್ಲಿ ಸ್ವಾತಂತ್ರ್ಯವಾದ ಮಾಧ್ಯಮವನ್ನು ನಿಮ್ಮ ಮುಂದಿಟ್ಟಿದ್ದೇವೆ. ಎಲ್ಲರಿಗೂ ಒಳ್ಳೆಯದಾಗಲಿ.

ಭದ್ರತೆಯ ಸಮಾಜಕ್ಕಾಗಿ, ಭರವಸೆ ವರದಿಗಾರ…

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group