ಚಾನೆಲ್ ಗಳಲ್ಲಿ ಮೋದಿ ಭಾಷಣ ಆರಂಭವಾದರೆ ಜನರು ನೋಡುವುದನ್ನು ನಿಲ್ಲಿಸಲು ಆರಂಭಿಸಿದ್ದಾರೆ: ರಾಜ್‌ ಠಾಕ್ರೆ

ವರದಿಗಾರ: ಟಿ.ವಿ ಚಾನೆಲ್‌ಗಳಲ್ಲಿ ಮೋದಿ ಭಾಷಣ ಆರಂಭವಾದರೆ ಜನ ಆ ಚಾನೆಲ್‌ ನೋಡುವುದನ್ನು ನಿಲ್ಲಿಸಲು ಆರಂಭಿಸಿದ್ದಾರೆ. ನೀವು ಟಿ.ವಿ ಚಾನೆಲ್‌ ನೋಡುವುದನ್ನು ನಿಲ್ಲಿಸಿ ರೇಡಿಯೊ ಕೇಳಲು ಆರಂಭಿಸಿದರೆ ಅಲ್ಲಿಯೂ ‘ಮನ್‌ ಕಿ ಬಾತ್‌’ ಕಾರ್ಯಕ್ರಮವಿದೆ. ಏನಿದು? ಪ್ರಧಾನಿ ಎಷ್ಟು ಮಾತನಾಡುತ್ತಾರೆ?’ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಅಧ್ಯಕ್ಷ ರಾಜ್‌ ಠಾಕ್ರೆ ಗುರುವಾರ ಪ್ರಶ್ನಿಸಿದ್ದಾರೆ.

ಮುಂಬೈ ರೈಲು ನಿಲ್ದಾಣದ ಪಾದಚಾರಿ ಸೇತುವೆ ಮೇಲೆ ಕಳೆದವಾರ ಕಾಲ್ತುಳಿತ ಮತ್ತು ನೂಕುನುಗ್ಗಲಿನಿಂದ 23 ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ಪಶ್ಚಿಮ ರೈಲ್ವೆಯ ಪ್ರಧಾನ ವ್ಯವಸ್ಥಾಪಕರೊಂದಿಗೆ ನಡೆದ ಚರ್ಚೆ ಬಳಿಕ ಬೃಹತ್‌ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಡಳಿತವು ಜನಸಾಮಾನ್ಯರ ನಿರೀಕ್ಷೆಗಳು ಮತ್ತು ಆಶೋತ್ತರಗಳನ್ನು ಈಡೇರಿಸಿಲ್ಲ. ಪ್ರಧಾನಿ ಮೇಲೆ ಜನ ಭಾರೀ ಭರವಸೆಯನ್ನಿಟ್ಟುಕೊಂಡಿದ್ದರು. ಆದರೆ ಏನಾಯಿತು? ಆರ್ಥಿಕತೆ, ಬುಲೆಟ್‌ ರೈಲು, ಪೆಟ್ರೋಲಿಯಂ ಬೆಲೆ ಎಲ್ಲವುಗಳ ಬಗ್ಗೆ ಮೋದಿ ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಏನು ಹೇಳಿದ್ದರು ಹಾಗೂ ಈಗ ಏನು ಹೇಳುತ್ತಿದ್ದಾರೆ ಎಂಬ ವಿಡಿಯೊಗಳು ವೈರಲ್‌ ಆಗಿವೆ. ಇವುಗಳ ವಿಷಯದಲ್ಲಿ ಈಗ ಎಂತಹ ಸ್ಥಿತಿ ಇದೆ ಎಂಬುದು ಸಹ ಜನರಿಗೆ ತಿಳಿದಿದೆ. ಆಡಳಿತ ವ್ಯವಸ್ಥೆಯ ವಿರುದ್ಧ ಜನ ನಿಧಾನವಾಗಿ ಮಾತನಾಡಲಾರಂಭಿಸಿದ್ದಾರೆ ಎಂದಿದ್ದಾರೆ.

ಅಹಮದಾಬಾದ್‌– ಮುಂಬೈ ಬುಲೆಟ್‌ ರೈಲು ಯೋಜನೆಯು ನಗರಗಳಲ್ಲಿರುವ ಬೆರಳೆಣಿಕೆಯಷ್ಟು ಗುಜರಾತಿಯರಿಗಾಗಿ ರೂಪಿಸಿರುವ ಯೋಜನೆಯಾಗಿದೆ. ಯೋಜನೆಯನ್ನು ವಿರೋಧಿಸಿದ ಕಾರಣಕ್ಕಾಗಿ ರೈಲ್ವೆ ಸಚಿವ ಸ್ಥಾನಕ್ಕೆ ಸುರೇಶ್‌ ಪ್ರಭು ಅವರನ್ನು ತೆಗೆದುಹಾಕಿ ಪೀಯೂಷ್‌ ಗೋಯಲ್‌ ಅವರನ್ನು ತರಲಾಯಿತು ಎಂದು ಹೇಳಿದ್ದಾರೆ.

error: Content is protected !!
%d bloggers like this:
Inline
Inline