‘ರಾತ್ರಿ ಬೆಳಗಾಗುವುದರೊಳಗೆ ಮುಸ್ಲಿಮರ ಮಸೀದಿ ನಾಶಗೊಳಿಸಿ ಪಗೋಡಾ ನಿರ್ಮಿಸಿದೆವು’- ಬೌದ್ಧ ಸನ್ಯಾಸಿಯ ವೀಡಿಯೋ ವೈರಲ್

ವರದಿಗಾರ : ಗಲಭೆಗ್ರಸ್ತ ಮ್ಯಾನ್ಮಾರಿನ ತೀವ್ರಗಾಮಿ ಬೌದ್ಧ ಸನ್ಯಾಸಿಯೋರ್ವನು ತನ್ನ ಅತಿಕ್ರಮಣಗಳನ್ನು ಗರ್ವದಿಂದ ಹೇಳುತ್ತಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬುದ್ಧ ಧಮ್ಮ ಪರಹಿತ ಫೌಂಡೇಶನ್ ಉಪಾಧ್ಯಕ್ಷನಾದ ಝ್ವೆಗಾಬಿನ್ ಸಯರ್ದಾವ್ ಸಭೆಯೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಮುಸ್ಲಿಮರ ವಿರುದ್ಧ ಅಲ್ಲಿನ ಹಿಂಸಾವಾದಿಗಳಾದ ತೀವ್ರಗಾಮಿ ಬೌದ್ಧರು ನಡೆಸಿದ ದೌರ್ಜನ್ಯವನ್ನು ಹೆಮ್ಮೆಯಿಂದ ವಿವರಿಸಿದನು.

“ಹಳ್ಳಿಯ ಜನರು ಖಡ್ಗ ಹಾಗೂ ಬೆತ್ತಗಳಿಂದ ಮುಸ್ಲಿಮರನ್ನು ಆಕ್ರಮಿಸಿದರು. ಮುಸ್ಲಿಮರ ಮನೆಗಳು ಹಾಗೂ ಮಸೀದಿಯನ್ನು ರಾತ್ರಿ ಬೆಳಗಾಗುವುದರೊಳಗೆ ಸಂಪೂರ್ಣವಾಗಿ ನಾಶಪಡಿಸಿದೆವು. ನಾವು 24 ಮನೆಗಳು ಹಾಗೂ ಮಸೀದಿಯೊಂದನ್ನು ಧ್ವಂಸಗೊಳಿಸಿದೆವು, ನಂತರ ಮಸೀದಿಯಿದ್ದ ಸ್ಥಳದಲ್ಲಿ ಪಗೋಡ ನಿರ್ಮಿಸಿದೆವು. ಅಂದಿನಿಂದ ಮುಸ್ಲಿಮರಿಗೆ ಆ ಹಳ್ಳಿಯನ್ನು ಪ್ರವೇಶಿಸಲು ಸಾಧ್ಯವಾಗಿಲ್ಲ” ಎಂದು ಆತನು ಕ್ಯಾಮರಾದ ಮುಂದೆ ಒದರಿದ್ದಾನೆ.

error: Content is protected !!
%d bloggers like this:
Inline
Inline