ಗೌರಿ ಹತ್ಯೆ : ನಾಪತ್ತೆಯಾಗಿರುವ ಸನಾತನ ಸಂಸ್ಥೆಯ ಐದು ಕಾರ್ಯಕರ್ತರ ಮೇಲೆ ತೂಗುಗತ್ತಿ

ವರದಿಗಾರ : 2009 ರಲ್ಲಿ ಗೋವಾದಲ್ಲಿ ಬಾಂಬ್ ಸ್ಪೋಟ ನಡೆಸಿದ್ದಕ್ಕಾಗಿ ಇಂಟರ್’ಪೋಲಿನಿಂದ ರೆಡ್ ಕಾರ್ನರ್ ನೋಟೀಸ್ ಜಾರಿಗೊಂಡಿರುವ ನಾಲ್ವರೂ ಸೇರಿದಂತೆ ಬಲಪಂಥೀಯ ಸನಾತನ ಸಂಸ್ಥೆಗೆ ಸೇರಿದ ಒಟ್ಟು ಐದು ಮಂದಿ ಕಾರ್ಯಕರ್ತರ ವಿರುದ್ಧ ಸೆಪ್ಟಂಬರ್ ಐದರಂದು ತನ್ನ ಮನೆಯ ಹೊರಗಡೆ ಹತ್ಯೆಯಾಗಿದ್ದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪ ಬಲವಾಗತೊಡಗಿದೆ.

ಕಾಣೆಯಾಗಿರುವ ಐದು ಮಂದಿಯೆಂದರೆ, ಕೊಲ್ಹಾಪುರದ ಪ್ರವೀನ್ ಲಿಮ್ಕರ್ (34), ಮಂಗಳೂರಿನವನಾದ ಜಯಪ್ರಕಾಶ್ ಅಲಿಯಾಸ್ ಅಣ್ಣಾ ((45), ಪುಣೆಯ ಸಾರಂಗ್ ಅಕೋಲ್ಕರ್ (38), ಸಾಂಗ್ಲಿಯ ರುದ್ರ ಪಾಟೀಲ್ ((37) ಮತ್ತು ಸತಾರಾದ ವಿನಯ್ ಪವಾರ್ (32) ಆಗಿದ್ದಾರೆ.

ಕರ್ನಾಟಕ ವಿಶೇಷ ತನಿಖಾ ದಳ ಈ ಐವರು ಆರೋಪಿಗಳು ಗೌರಿ ಲಂಕೇಶ್ ಹತ್ಯೆಯಲ್ಲಿ ಭಾಗಿಯಾಗಿರುವ ಕುರಿತು ಸಂಶಯ ವ್ಯಕ್ತಪಡಿಸಿದ್ದಾರೆ. ಆರೋಪಿಗಳಲ್ಲಿ ರುದ್ರ ಪಾಟೀಲ್, ಸಾರಂಗ್ ಅಕೋಲ್ಕರ್ ಮತ್ತು ವಿನಯ್ ಪವಾರ್ ಈ ಹಿಂದೆ 2013 ರಲ್ಲಿ ಹತ್ಯೆಗೈಯ್ಯಲ್ಪಟ್ಟ ವಿಚಾರವಾದಿ ನರೇಂದ್ರ ದಾಬೋಲ್ಕರ್, 2015 ರಲ್ಲಿ ಪುಣೆಯಲ್ಲಿ ಹತ್ಯೆಗೈಯ್ಯಲ್ಪಟ್ಟ ಎಡಪಂಥೀಯ ಚಿಂತಕ ಮತ್ತು ವಿಚಾರವಾದಿ ಗೋವಿಂದ ಪನ್ಸಾರೆ ಮತ್ತು ಅದೇ ವರ್ಷ ಕರ್ನಾಟಕದ ಧಾರವಾಡದ ತನ್ನ ಮನೆಯಲ್ಲಿ ಹತ್ಯೆಯಾದ ಖ್ಯಾತ ವಿಚಾರವಾದಿ ಪ್ರೊ ಎಂ ಎಂ ಕಲ್ಬುರ್ಗಿ ಹತ್ಯೆಗಳಲ್ಲಿ ಇವರೆಲ್ಲರ ಹೆಸರುಗಳು ಕೇಳಿ ಬಂದಿದ್ದವು ಮತ್ತು ತನಿಖಾ ದಳಗಳು ಬಲವಾದ ಸಾಕ್ಷ್ಯ ಸಂಗ್ರಹಣೆ ನಡೆಸಿದ್ದವು.

ಲಿಮ್ಕರ್, ಅಣ್ಣಾ,  ಅಕೋಲ್ಕರ್ ಮತ್ತು ಪವಾರ್  2009 ರಲ್ಲಿ ಗೋವಾದ ಮಡ್ಗಾಂವ್’ನಲ್ಲಿ ಅಕ್ಟೋಬರ್ 19ರಂದು ದೀಪಾವಳಿ ಸಮಯದಲ್ಲಿ ನಡೆಸಿದ್ದ ಬಾಂಬ್ ಸ್ಪೋಟದ ಮುಖ್ಯ ಆರೋಪಿಗಳಾಗಿದ್ದರು. ರಾಷ್ಟ್ರೀಯ ತನಿಖಾ ದಳ ಇವರ ವಿರುದ್ಧ ರೆಡ್ ಕಾರ್ನರ್ ನೋಟೀಸ್ ಜಾರಿಗೊಳಿಸಿ,  ಬಂಧನಕ್ಕಾಗಿ ಇಂಟರ್’ಪೋಲ್ ನೆರವು ಕೋರಿತ್ತು. ಹೆಚ್ಚಿನ ಸಾವು ನೋವುಗಳು ಸಂಭವಿಸುವಂತಾಗಲು ದೀಪಾವಳಿಯ ಸಮಯವನ್ನೇ ಆರಿಸಿಕೊಂಡಿದ್ದ ಆರೋಪಿಗಳು,  ಸ್ಪೋಟಕಗಳನ್ನು ಸಾಗಿಸುತ್ತಿರುವಾಗಲೇ ಇಬ್ಬರು ಸನಾತನ ಸಂಸ್ಥೆಯ ಕಾರ್ಯಕರ್ತರು ಸಾವನ್ನಪ್ಪಿದ್ದರು.

ನಾಲ್ಕು ವಿಚಾರವಾದಿಗಳ ಹತ್ಯೆಯ ಹಿಂದಿರುವ ತನಿಖಾ ದಳಗ ಮೂಲಗಳ ಪ್ರಕಾರ ಆರೋಪಿಗಳನ್ನು ಹಿಡಿಯುವುದು ಮತ್ತು ಗೌರಿ ಲಂಕೇಶ್ ಹತ್ಯೆಯನ್ನು ಭೇದಿಸುವುದು ಕರ್ನಾಟಕ ವಿಶೇಷ ತನಿಖಾ ದಳ, ನಾಪತ್ತೆಯಾಗಿರುವ ಐದು ಮಂದಿ ಸನಾತನ ಸಂಸ್ಥೆಯ ಕಾರ್ಯಕರ್ತರ ಜಾಡನ್ನು ಕಂಡು ಹಿಡಿಯುವುದರ ಮೇಲೆ ಅವಲಂಬಿತವಾಗಿದೆ.

ಸನಾತನ ಸಂಸ್ಥೆಯ ವಕೀಲ ಸಂಜಯ್ ಪುಣಲೇಕರ್, ಸಂಸ್ಥೆಯ ಕೆಲ ಕಾರ್ಯಕರ್ತರನ್ನು ಕೆಲವೊಂದು  ಪ್ರಕರಣಗಳಲ್ಲಿ ಸಿಲುಕಿಸುವ ಸಾಧ್ಯತೆ ಇರುವುದರಿಂದ ಅವರು ನಾಪತ್ತೆಯಾಗಿದ್ದಾರೆ ಎಂದು ಹೇಳಿದ್ದಾರೆ.

ಗೌರಿ ಲಂಕೇಶ್ ಮತ್ತು ಪ್ರೊ ಕಲ್ಬುರ್ಗಿಯವರ ಹತ್ಯೆಗಳಲ್ಲಿ ಸಿಡಿಸಲ್ಪಟ್ಟ ಗುಂಡುಗಳು ನಿರ್ಮಿಸಿದ್ದ ಬ್ಯಾಲಿಸ್ಟಿಕ್ ಗುರುತುಗಳು, ಇಬ್ಬರ ಹತ್ಯೆಗಳಿಗೆ ಬಳಸಲ್ಪಟ್ಟ ಪಿಸ್ತೂಲ್ ಒಂದೇ ಎಂದು ವಿಧಿ ವಿಜ್ಞಾನ ತಜ್ಞರು ಅಭಿಪ್ರಾಯಪಟ್ಟಿದ್ದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ

error: Content is protected !!
%d bloggers like this:
Inline
Inline