ಸಿದ್ದರಾಮಯ್ಯ ಸರಕಾರದಲ್ಲಿ ಧರ್ಮಕ್ಕಾಗಿ, ಅದರ ರಕ್ಷಣೆಗಾಗಿ ಹೋರಾಡುವವರಿಗೆ ರಕ್ಷಣೆ ಇಲ್ಲ:ರಾಘವೇಶ್ವರ ಭಾರತಿ ಸ್ವಾಮೀಜಿ

  • ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಹಿಂದೆ ಬಲಪಂಥೀಯರ ಕೈವಾಡವಿದೆ ಎಂಬ ಆರೋಪಕ್ಕೆ ಸಾಕ್ಷಿಯೇನಿದೆ? ಸ್ವಾಮೀಜಿ ಪ್ರಶ್ನೆ

 

ವರದಿಗಾರ ಡೆಸ್ಕ್: ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ ಧರ್ಮಕ್ಕಾಗಿ, ಅದರ ರಕ್ಷಣೆಗಾಗಿ ಹೋರಾಡುವವರಿಗೆ ರಕ್ಷಣೆ ಇಲ್ಲ. ಅಂಥವರಿಗೆ ಆಪತ್ತು ಖಚಿತ. ಧರ್ಮ ರಕ್ಷಣೆಗೆ ನಿಂತವರ ಹತ್ಯೆಯೂ ಆಗಬಹುದು. ಏನಾದರೂ ಆಗಬಹುದೆಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದ್ದಾರೆ.

ಅವರು ಬಾಗಲಕೋಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು.

ಗೋವುಗಳ ರಕ್ಷಣೆಗೆ ನಿಂತವರ ಮೇಲೆ ಆಕ್ರಮಣ ನಡೆಯುತ್ತಿದೆ. ಆಕ್ರಮಣಕಾರರಿಗೆ ಸರಕಾರಿ ಯಂತ್ರವೇ ಪೋಷಕನಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಸಾಹಿತಿ ಎಂ.ಎಂ.ಕಲಬುರ್ಗಿ ಹಾಗೂ ಸಾಮಾಜಿಕ ಹೋರಾಟಗಾರ್ತಿ, ಪ್ರಗತಿಪರ ಚಿಂತಕಿ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಹಿಂದೆ ಬಲಪಂಥೀಯರ ಕೈವಾಡವಿದೆ ಎಂಬ ಆರೋಪವನ್ನು ನಾನು ಒಪ್ಪುವುದಿಲ್ಲ. ಆರೋಪಕ್ಕೆ ಸಾಕ್ಷಿಯೇನಿದೆ ಎಂದು ಇದೇ ಸಂದರ್ಭ ಪ್ರಶ್ನಿಸಿದ್ದಾರೆ.

error: Content is protected !!
%d bloggers like this:
Inline
Inline