ವರದಿಗಾರ-ಅಹಮದಾಬಾದ್: ಗುಜರಾತ್ನಲ್ಲಿ ಮತ್ತೊಬ್ಬ ದಲಿತ ಯುವಕನ ಮೇಲೆ ದಾಳಿ ನಡೆದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ದಲಿತ ನಾಯಕ, ಊನಾ ಚಳುವಳಿಯ ನೇತಾರ ಜಿಗ್ನೇಶ್ ಮೇವಾನಿ, ರಾಜ್ಯದ ಗೃಹ ಸಚಿವರು ರಾಜೀನಾಮೆ ನೀಡದೇ ಇದ್ದರೆ ದಲಿತರ ಆಕ್ರೋಶ ಗುಜರಾತ್ ಅನ್ನು ಭಸ್ಮ ಮಾಡಲಿದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ಲಂಬೋದ್ರಾ ಗ್ರಾಮದಲ್ಲಿ ಯುವಕ ಮೀಸೆ ಬಿಟ್ಟಿದ್ದಾನೆ ಅನ್ನುವ ಕಾರಣಕ್ಕೆ ಆತನನ್ನು ಇಬ್ಬರು ಯುವಕರು ಥಳಿಸಿದ್ದಾರೆ. ಗುಜರಾತ್ನಲ್ಲಿ ದಲಿತರು ವಾಸ ಮಾಡುವುದೇ ಕಷ್ಟವಾಗಿದೆ ಎಂದು ಜಿಗ್ನೇಶ್ ಹೇಳಿದ್ದಾರೆ.
ಗೃಹ ಸಚಿವ ಪ್ರದೀಪ್ ಸಿನ್ಹಾ ಜಡೇಜಾ ಅವರ ರಾಜೀನಾಮೆಗೆ ಒತ್ತಾಯಿಸಿ ಗಾಂಧಿನಗರದಲ್ಲಿನ ಸಚಿವಾಲಯದ ಎದುರು ದಲಿತ ಬೆಂಬಲಿಗರು ಬುಧವಾರ ಸೇರಬೇಕೆಂದು ಅವರು ಮನವಿ ಮಾಡಿದ್ದಾರೆ.
