ವಿದೇಶ ಸುದ್ದಿ

ಲಾಸ್ ವೇಗಾಸ್ ಸಂಗೀತ ಕಾರ್ಯಕ್ರಮದಲ್ಲಿ ಶೂಟೌಟ್ : 50ಕ್ಕೂ ಮಿಕ್ಕಿ ಸಾವು

ವರದಿಗಾರ : ಲಾಸ್ ವೇಗಾಸ್’ನ ಮಂಡಾಲೇ ಬೇ ಎನ್ನುವ ಹೋಟೆಲ್ ಅಂಗಣದಲ್ಲಿ ಆಯೋಜಿಸಲಾಗಿದ್ದ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರೇಕ್ಷಕರ ಮೇಲೆ 64ರ ಹರೆಯದ ವ್ಯಕ್ತಿಯೊಬ್ಬ ನಿರಂತರವಾಗಿ ಗುಂಡಿನ ಸುರಿಮಳೆಗೈದದ್ದರ ಪರಿಣಾಮ 50ಕ್ಕೂ ಹೆಚ್ಚಿನ ಜನರು ಕೊಲ್ಲಲ್ಪಟ್ಟಿದ್ದು, 400ಕ್ಕೂ ಹೆಚ್ಚಿನವರು ಗಾಯ ಗೊಂಡಿದ್ದಾರೆ. ಅಮೆರಿಕಾದ ಇತಿಹಾಸದ ಅತಿ ಭೀಕರ ಶೂಟೌಟ್ ಇದೆನ್ನಲಾಗಿದ್ದು, ಸಾವು ನೋವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಂಭವ ಇದೆಯೆನ್ನಲಾಗಿದೆ. ಶೂಟೌಟ್ ನಡೆಸಿದ ವ್ಯಕ್ತಿಯನ್ನು ಸ್ಟೀಫನ್ ಪಾಡೋಕ್ ಎಂದು ಗುರುತಿಸಲಾಗಿದ್ದು, ಹೋಟೆಲಿನ 32ನೇ ಮಹಡಿಯ ಗ್ಲಾಸ್ ಒಡೆದು ಅಲ್ಲಿಂದ ಶೂಟ್ ಮಾಡಿದ್ದಾನೆಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಆದರೆ ಪಾಡೋಕ್ ಪೊಲೀಸರು ಅಲ್ಲಿಗೆ ತಲುಪುವುದಕ್ಕಿಂತ ಮುಂಚೆ 32ನೇ ಮಹಡಿಯಲ್ಲಿ ಸ್ವಯಂ ಶೂಟ್ ಮಾಡಿಕೊಂಡು ಆತ್ಮಹತ್ಯೆಗೈದಿದ್ದಾನೆ.

ಮಂಡಾಲೇ ಬೇ ನಲ್ಲಿ ಖ್ಯಾತ ಹಾಡುಗಾರ ಜೇಸನ್ ಅಲ್ಡೀನ್ ಈ ವೇಳೆ ತನ್ನ ಸಂಗೀತ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಈ ವೇಳೆ ಪಾಡೋಕ್ ನಿರಂತರವಾಗಿ ಶೂಟ್ ಮಾಡಿದ್ದಾನೆ. ಜನರು ಭಯಗ್ರಸ್ತರಾಗಿ ಓಡತೊಡಗಿದ್ದವರ ಮೇಲೆ ಸತತ ಗುಂಡಿನ ಮಳೆಗೆರೆದಿದ್ದಾನೆ.

ಪಾಡೋಕ್ ಒಂಟಿತನದಿಂದ ಬಳಲುತ್ತಿದ್ದನೆಂದು ಹೇಳಲಾಗುತ್ತಿದ್ದು, ಜಾಗತಿಕ ಭಯೋತ್ಪಾದಕ ಸಂಘಟನೆ ಐಸಿಸ್ ಕೂಡಾ ಈ ಘಟನೆಗೆ ನಾನೇ ಕಾರಣವೆಂದು ಹೇಳಿಕೊಂಡಿದೆ. ಆದರೆ ಅಮೆರಿಕಾದ ಅಧಿಕಾರಿಗಳಾರೂ ಅಧಿಕೃತವಾಗಿ ಏನೂ ಹೇಳಿಕೆಗಳನ್ನು ಇದುವರೆಗೂ ಕೊಟ್ಟಿಲ್ಲ.

ಶೂಟೌಟ್ ವೀಡಿಯೋ

 

To Top
error: Content is protected !!
WhatsApp chat Join our WhatsApp group