ವಿದೇಶ ಸುದ್ದಿ

ಬೆದರಿಸಿದರೆ ಹೆಚ್ಚು ದಿನ ಉಳಿಗಾಲವಿಲ್ಲ: ಡೋನಾಲ್ಡ್ ಟ್ರಂಪ್ ಎಚ್ಚರಿಕೆ

ಸುಳ್ಳಿನ ಮಹಾರಾಜ, ಶೋಕದ ರಾಜ, ಸೈತಾನ ಅಧ್ಯಕ್ಷನೆಂಬ ಅಡ್ಡ ಹೆಸರು ಉಲ್ಲೇಖ

ದೇಶದ ಮೇಲೆ ಬೆದರಿಕೆ ಒಡ್ಡುವ ಮೊದಲು ಎರಡು ಬಾರಿ ಆಲೋಚಿಸಬೇಕೆಂದು ಹೇಳಿದ್ದ ಉತ್ತರ ಕೊರಿಯಾ

ವರದಿಗಾರ-ನ್ಯೂಯಾರ್ಕ್‌:ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಶನಿವಾರ ಮಾತನಾಡಿದ್ದ ಉತ್ತರ ಕೊರಿಯಾ ವಿದೇಶಾಂಗ ಸಚಿವ ರಿ ಯೊಂಗ್‌ ಹೊ, ‘ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬರು ಬೆದರಿಕೆ ಒಡ್ಡುವ ಮೂಲಕ ಸೇನಾ ಸಂಘರ್ಷಕ್ಕೆ ಕಾರಣವಾಗಬಹುದು. ಅಮೆರಿಕ ಹಾಗೂ ಮಿತ್ರಪಡೆಗಳು ತಮ್ಮ ದೇಶದ ಮೇಲೆ ಬೆದರಿಕೆ ಒಡ್ಡುವ ಮೊದಲು ಎರಡು ಬಾರಿ ಆಲೋಚಿಸಬೇಕು ಎಂದು ಟ್ರಂಪ್‌ ವಿರುದ್ಧ ಹೇಳಿದ್ದರು. ಟ್ರಂಪ್‌ ಅವರನ್ನು ಅಮೆರಿಕನ್ನರು ಶೋಕದ ರಾಜ, ಸುಳ್ಳಿನ ಮಹಾರಾಜ ಮತ್ತು ಸೈತಾನ ಅಧ್ಯಕ್ಷ ಎಂದು ಅಡ್ಡ ಹೆಸರಿನಿಂದ ಗುರುತಿಸುತ್ತಾರೆ. ವಯಸ್ಸಾದ ಜೂಜುಕೋರ ವ್ಯಕ್ತಿಯು ಭೂಮಿಯನ್ನು ಕಬಳಿಸಲು ವಂಚನೆ ಹಾಗೂ ಬೆದರಿಕೆಗಳನ್ನು ಒಡ್ಡುತ್ತಿದ್ದಾರೆ ” ಎಂದು ರಿ ಯೊಂಗ್‌ ತಮ್ಮ ಭಾಷಣದಲ್ಲಿ ಹೇಳಿದ್ದರು.

ಇದೇ ಸಂದರ್ಭ ಮಾತನಾಡಿರುವ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರು ಉತ್ತರ ಕೊರಿಯಾದ ಬಳಿ ಅಣುಬಾಂಬ್‌ ಇರುವುದು ಅಮೆರಿಕಕ್ಕೆ ತಿಳಿದಿದೆ. ಆದ್ದರಿಂದ ಅಮೇರಿಕ ಉತ್ತರ ಕೊರಿಯಾದ ಮೇಲೆ ದಾಳಿ ನಡೆಸುವುದಿಲ್ಲ ಎಂದು ಹೇಳಿದ್ದರು.

ಉತ್ತರ ಕೊರಿಯಾ ವಿದೇಶಾಂಗ ಸಚಿವ ರಿ ಯೊಂಗ್‌ ಹೇಳಿಕೆಯನ್ನು ಟ್ವಿಟ್ಟರ್ ಮೂಲಕ ವೀಕ್ಷಿಸಿ, ಟ್ವೀಟ್ ಮುಖಾಂತರ ಪ್ರತಿಕ್ರಿಯಿಸಿರುವ ಅಮೇರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಉತ್ತರ ಕೊರಿಯಾದ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಧಾಟಿಯಲ್ಲೇ ಅಲ್ಲಿನ ವಿದೇಶಾಂಗ ಸಚಿವರು ಬೆದರಿಕೆ ಒಡ್ಡಿದರೆ, ಅವರಾರಿಗೂ ಹೆಚ್ಚು ದಿನ ಉಳಿಗಾಲವಿಲ್ಲ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ಅದಲ್ಲದೆ ಉತ್ತರ ಕೊರಿಯಾದ ಪೂರ್ವ ಕರಾವಳಿ ತೀರದಲ್ಲಿ ಅಮೆರಿಕದ ಯುದ್ಧ ವಿಮಾನಗಳು ಶನಿವಾರ ಹಾರಾಟ ನಡೆಸಿವೆ ಎಂದು ಅಮೆರಿಕದ ರಕ್ಷಣಾ ಸಚಿವಾಲಯ ಪೆಂಟಗನ್‌ ತಿಳಿಸಿದೆ.

ಈ ಕಾರ್ಯಾಚರಣೆಯು ಮೂಲಕ ಯಾವುದೇ ಬೆದರಿಕೆಯನ್ನು ಎದುರಿಸುವ ಸಂಬಂಧ ಸೇನೆಯು ಅನೇಕ ಅವಕಾಶಗಳನ್ನು ಮುಕ್ತವಾಗಿರಿಸಿಕೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ ಎಂದು ಪೆಂಟಗನ್‌ನ ಮುಖ್ಯ ವಕ್ತಾರೆ ದನಾ ಡಬ್ಲ್ಯೂ ವೈಟ್‌ ತಿಳಿಸಿದ್ದಾರೆ.

To Top
error: Content is protected !!
WhatsApp chat Join our WhatsApp group