ವಿದೇಶ ಸುದ್ದಿ

ರೋಹಿಂಗ್ಯಾ ನಿರಾಶ್ರಿತರ ನೆರವಿಗಾಗಿ ದುರ್ಗಾ ಪೂಜೆಯ ಖರ್ಚನ್ನು ಕಡಿತಗೊಳಿಸಲು ತೀರ್ಮಾನಿಸಿದ ಬಾಂಗ್ಲಾದೇಶದ ಹಿಂದೂಗಳು!!

ವರದಿಗಾರ: ಮ್ಯಾನ್ಮಾರಿನ ಹಿಂಸಾಚಾರದಿಂದ ತಪ್ಪಿಸಿ ಆಶ್ರಯವನ್ನಾಗ್ರಹಿಸಿ ತಮ್ಮ ದೇಶಕ್ಕೆ ಬರುವ ರೋಹಿಂಗ್ಯಾ ಮುಸ್ಲಿಮರ ನೆರವಿಗಾಗಿ ಪರಿಹಾರ ನಿಧಿಯನ್ನು ಸ್ಥಾಪಿಸುವುದಕ್ಕಾಗಿ ಮುಂಬರುವ ದುರ್ಗಾ ಪೂಜೆಯಲ್ಲಿ ಖರ್ಚನ್ನು ಕಡಿತಗೊಳಿಸುವುದಾಗಿ ಬಾಂಗ್ಲಾದೇಶದ ಹಿಂದೂಗಳು ತೀರ್ಮಾನಿಸಿದ್ದಾರೆ.

ವಿಶ್ವಸಂಸ್ಥೆಯ ವರದಿ ಪ್ರಕಾರ, 800 ಹಿಂದೂಗಳನ್ನೊಳಗೊಂಡಂತೆ, ಸುಮಾರು 4,20,000 ರೋಹಿಂಗ್ಯಾ ನಿರಾಶ್ರಿತರು ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ.

ದುರ್ಗಾ ಪೂಜೆಯ ಉತ್ಸವದಲ್ಲಿ ಉಳಿತಾಯ ಮಾಡಿ ದೌರ್ಜನ್ಯಕ್ಕೊಳಗಾದ ರೋಹಿಂಗ್ಯಾ ನಿರಾಶ್ರಿತರಿಗೆ ನೆರವಾಗುವುದಾಗಿ ಕೇಂದ್ರೀಯ ಪೂಜಾ ಮಂಡಳಿಯ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ.

ಬಾಂಗ್ಲಾದೇಶದಾದ್ಯಂತ ಪೂಜಾ ಮಂಡಳಿಗಳಿಗೆ, ದುರ್ಗಾ ಪೂಜೆಯ ಉತ್ಸವದಲ್ಲಿ ಉಳಿತಾಯ ಮಾಡಿ ರೋಹಿಂಗ್ಯಾ ಪರಿಹಾರ ನಿಧಿ ಸ್ಥಾಪಿಸಲು ಸಹಾಯವಾಗುವಂತೆ ವಿನಂತಿಸಲಾಗಿದೆ ಎಂದು ಅವರು ಹೇಳಿದರು.

To Top
error: Content is protected !!
WhatsApp chat Join our WhatsApp group