ರಾಷ್ಟ್ರೀಯ ಸುದ್ದಿ

ಘರ್ ವಾಪಸಿ ನೆಪದಲ್ಲಿ ಚಿತ್ರಹಿಂಸೆ; ಕೊಲೆ ಬೆದರಿಕೆ ಒಡ್ಡಿ ಮರು ಮತಾಂತರ !!

ವರದಿಗಾರ-ಕೊಚ್ಚಿ:  ಹಿಂದೂ ಧರ್ಮದಿಂದ ಅನ್ಯ ಧರ್ಮಗಳಿಗೆ ಮತಾಂತರವಾಗುವ ಮತ್ತು ವಿವಾಹವಾಗುವ ಹಿಂದೂ ಹೆಣ್ಣು ಮಕ್ಕಳನ್ನು ಹಲ್ಲೆ, ಬೆದರಿಕೆಗಳ ಮೂಲಕ ‘ಘರ್ ವಾಪಸಿ’ ನಡೆಸುತ್ತಾರೆನ್ನುವ ಆಘಾತಕಾರಿ ಮತ್ತು ಅಷ್ಟೇ ಸ್ಪೋಟಕ ವರದಿ ಕೇರಳದಿಂದ ವರದಿಯಾಗಿದೆ. ಕೊಚ್ಚಿ ಸಮೀಪದ ತ್ರಿಪುಣಿತ್ತುರ ಎಂಬಲ್ಲಿನ ಯೋಗ ಮತ್ತು ಚಾರಿಟೇಬಲ್ ಟ್ರಸ್ಟ್’ನಿಂದ ಪಾರಾದ ಆಯುರ್ವೇದ ವೈದ್ಯೆ  ಒಬ್ಬರು ಈ ಆಘಾತಕಾರಿ ಘಟನೆಯನ್ನು ಹೊರಜಗತ್ತಿಗೆ ಬಹಿರಂಗಪಡಿಸಿದ್ದಾರೆ. ಈಕೆ ಹಿಲ್ ಪ್ಯಾಲೇಸ್ ಪೊಲೀಸ್ ಠಾಣೆಯಲ್ಲಿ ಮತ್ತು ಹೈಕೋರ್ಟಿನಲ್ಲಿ ಈ ಕುರಿತು ದೂರು ದಾಖಲಿಸಿದ್ದಾರೆ. ಇತ್ತೀಚೆಗೆ ತಾನೆ ಇಸ್ಲಾಂ ಧರ್ಮ ಸ್ವೀಕರಿಸಿ ನಂತರ ವಿವಾದಾತ್ಮಕ ಸನ್ನಿವೇಶಗಳಲ್ಲಿ ಮರಳಿ ಹಿಂದೂ ಧರ್ಮಕ್ಕೆ ವಾಪಾಸ್ ಆದ ಅದಿರಾ ಕೂಡಾ ಈ ಕೇಂದ್ರದಲ್ಲಿದ್ದುದನ್ನು ನಾನು ನೋಡಿದ್ದೇನೆಂಬ ಸ್ಪೋಟಕ ಸುದ್ದಿಯನ್ನೂ ಈ ಡಾಕ್ಟರ್ ಹೊರಗೆಡಹಿದ್ದಾರೆ. ಅಲ್ಲಿ ಅದಿರಾಳಂತಹ 65 ಹೆಣ್ಣುಮಕ್ಕಳನ್ನು ಕೂಡಿ ಹಾಕಿದ್ದಾರೆಂದೂ ಇವರು ತಿಳಿಸಿದ್ದಾರೆ.

ಕ್ರಿಶ್ಚಿಯನ್ ಯುವಕನನ್ನು ವಿವಾಹವಾಗಿದ್ದ ಈ ಆಯುರ್ವೇದ ವೈದ್ಯೆಯನ್ನು ಕಳೆದ ಜುಲೈ 31ರಂದು ಲುಲು ಮಾಲ್’ಗೆ ಕರೆದುಕೊಂಡು ಹೋಗುವ ನೆಪದಲ್ಲಾಗಿತ್ತು ಈ ಚಿತ್ರಹಿಂಸೆ ನೀಡುವ ‘ಘರ್ ವಾಪಸಿ’ ಕೇಂದ್ರಕ್ಕೆ ಸೇರಿಸಿದ್ದು. ಕುಟುಂಬದವರೊಂದಿಗೆ ಸೇರಿಸಿ ಕೌನ್ಸ್’ಲಿಂಗ್ ನಡೆಸಿ ನಂತರ ಏಕಾಂತವಾಗಿ ನನ್ನನ್ನು ಕೌನ್ಸ್’ಲಿಂಗ್ ನಡೆಸಿದ್ದರು. ಅಲ್ಲಿ ನನ್ನನ್ನು ಭೀಕರವಾದ ಹಿಂಸೆ ನೀಡಿ ಹಿಂದೂ ಧರ್ಮಕ್ಕೆ ವಾಪಾಸ್ ಬರಬೇಕೆಂದೂ, ಇಲ್ಲದಿದ್ದರೆ ನಿನ್ನನ್ನು ಕೊಲ್ಲುವುದಾಗಿಯೂ ಬೆದರಿಕೆ ಹಾಕಲಾಯ್ತು. ನನ್ನನ್ನು ಕಟ್ಟಿ ಹಾಕಿ ಹಿಂಸೆ ನೀಡುತ್ತಿದ್ದರು, ಜೋರಾಗಿ ಕೂಗಿಕೊಳ್ಳುವಾಗ ಸಂಗೀತ ಹಾಕಿ ನಮ್ಮ ಬೊಬ್ಬೆ ಕೇಳದಂತೆ ಮಾಡುತ್ತಿದ್ದರು.

ಅಲ್ಲಿ ಕಾಸರಗೋಡಿನ ಅದಿರಾ ಸೇರಿದಂತೆ 65 ಹೆಣ್ಣುಮಕ್ಕಳಿದ್ದಾರೆ. ನಾನು ನನ್ನ ಕ್ರಿಶ್ಚಿಯನ್ ಗಂಡನೊಂದಿಗೆ ಹೋಗುವುದಿಲ್ಲವೆಂದು ಸುಳ್ಳು ಹೇಳಿ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಾಗಿಯೂ , ಇಲ್ಲದಿದ್ದರೆ ಅವರದಕ್ಕೆ ಸಮ್ಮತಿಸುವುದಿಲ್ಲವೆಂದೂ ಅವರು ಹೇಳಿದ್ದಾರೆ.

ಒಟ್ಟಿನಲ್ಲಿ ಅದಿರಾಳದ್ದು ಬಲವಂತದ ಮತಾಂತರ ಎಂದು ತಾವೇ ನ್ಯಾಯಾಲಯವಾಗಿ ತೀರ್ಪು ಕೊಟ್ಟಿದ್ದ ಹಲವು ಮಾಧ್ಯಮಗಳು ಈ ಕುರಿತಾಗಿ ಯಾವ ರೀತಿಯಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸುತ್ತದೋ ಕಾದು ನೋಡಬೇಕಾಗಿದೆ. ಅದೇ ರೀತಿ ಕೇರಳ ಸರಕಾರ ಕೂಡಾ ಯಾವ ರೀತಿ ಈ ಚಿತ್ರಹಿಂಸಾ ಕೇಂದ್ರದ ಕುರಿತು ಕ್ರಮ ಕೈಗೊಳ್ಳುತ್ತದೋ ಎನ್ನುವುದನ್ನು ಜನರು ಕಾದು ನೋಡುತ್ತಿದ್ದಾರೆ.

 

1 Comment
To Top
error: Content is protected !!