ಮಿದುಳಿಲ್ಲದ ಈಶ್ವರಪ್ಪ: ಸಿದ್ದರಾಮಯ್ಯ

ಯಡಿಯೂರಪ್ಪ ಎಲ್ಲಿ ಸ್ಪರ್ಧಿಸಿದರೂ ನನಗೇನು?

ಬಿಜೆಪಿಯವರು ಕದ್ದು ಮುಚ್ಚಿ ದೂರವಾಣಿ ಕರೆಗಳನ್ನು ಆಲಿಸುತ್ತಿರುವರಂತೆ

ವರದಿಗಾರ-ಬೆಂಗಳೂರು: ವೀರಶೈವ ಲಿಂಗಾಯತ ವಿಷಯದಲ್ಲಿ ಸಿದ್ದರಾಮಯ್ಯ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂಬ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪರ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ‘ಈಶ್ವರಪ್ಪರಿಗೆ ತಲೆಯಲ್ಲಿ ಮಿದುಳಿಲ್ಲ, ಮನಸ್ಸಿಗೆ ಬಂದಂತೆ ಮಾತನಾಡುತ್ತಾರೆ’ ಎಂದು ಮುಖ್ಯಮಂತ್ರಿ ಸಿ.ಎಂ. ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಅವರು ನಗರದಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಮೇಲಿನ ಹೇಳಿಕೆಯನ್ನು ಹೇಳಿದ್ದಾರೆ.

ನನಗೆ ಕ್ಷೇತ್ರವಿದೆ. ಹೀಗಿರುವಾಗ ನಾನೇಕೆ ಕೊಪ್ಪಳದಿಂದ ಸ್ಪರ್ಧಿಸಲಿ ಎಂದು ಪ್ರಶ್ನಿಸಿದ್ದಾರೆ.
ನಾನು ಉತ್ತರ ಕರ್ನಾಟಕದಿಂದ ಸ್ಪರ್ಧಿಸುವುದಿಲ್ಲ ಎಂದು ಇದೇ ಸಂದರ್ಭ ಸ್ಪಷ್ಟಪಡಿಸಿದ್ದಾರೆ.

ಯಡಿಯೂರಪ್ಪ ಎಲ್ಲಿಂದಲೋ ಸ್ಪರ್ಧಿಸಿದರೆ ನನಗೇನು?. ಅವರು ಶಿಕಾರಿಪುರ ಕ್ಷೇತ್ರವನ್ನು ಮಗನಿಗೆ ಬಿಟ್ಟುಕೊಡುವ ಉದ್ದೇಶದಿಂದ ಕ್ಷೇತ್ರ ಹುಡುಕುತ್ತಿದ್ದಾರೆ. ಅವರು ಉತ್ತರ ಕರ್ನಾಟಕದಿಂದ ಸ್ಪರ್ಧಿಸುವುದರಿಂದ ಬಿಜೆಪಿಗೆ ಯಾವುದೇ ಲಾಭವಿಲ್ಲ ಎಂದು ಯಡಿಯೂರಪ್ಪರಿಗೆ ಟಾಂಗ್ ಕೊಟ್ಟಿದ್ದಾರೆ.

ಕದ್ದು ಮುಚ್ಚಿ ದೂರವಾಣಿ ಕರೆಗಳನ್ನು ಆಲಿಸುತ್ತಿರುವವರು ಬಿಜೆಪಿಯವರೇ ಹೊರತು ನಾವಲ್ಲ. ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರವು ಐಟಿ, ಇಡಿ ಮತ್ತು ಸಿಬಿಐಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಬಿಜೆಪಿ ಮೇಲೆ ಗಂಭೀರ ಆರೋಪವನ್ನು ಮಾಡಿದ್ದಾರೆ.

error: Content is protected !!
%d bloggers like this:
Inline
Inline