ನಮ್ಮ ಹೆಜ್ಜೆ - ನಿಮ್ಮ ನುಡಿ

ಬಂಡವಾಳಶಾಹಿ, ಬ್ರಾಹ್ಮಣಶಾಯಿಗಳ ಗುಲಾಮರಾಗದಿರಲಿ: ಹಾರೋಹಳ್ಳಿ ರವೀಂದ್ರ

ನಮ್ಮ ಹೆಜ್ಜೆ, ನಿಮ್ಮ ನುಡಿ: ಈ ದೇಶದಲ್ಲಿ ದೃಶ್ಯ ಮತ್ತು ಪತ್ರಿಕಾ ಮಾಧ್ಯಮಗಳು ಬ್ರಾಹ್ಮಣಶಾಯಿ ಮತ್ತು ಬಂಡವಾಳಶಾಹಿ ಹಿಡಿತದಲ್ಲಿವೆ. ಸಾಮಾನ್ಯ ಜನರಿಗೆ ಕಣ್ಣಾಗಬೇಕಾಗಿದ್ದ,  ಪ್ರಭುತ್ವಕ್ಕೆ ಎಚ್ಚರಿಕೆ ಘಂಟೆಯಾಗಬೇಕಿದ್ದ ಮಾಧ್ಯಮಗಳು ರಾಜಕೀಯ ಪಕ್ಷಗಳ ಜೊತೆ ಅಪವಿತ್ರ ಮೈತ್ರಿ ಮಾಡಿಕೊಂಡು ಇಡೀ ಸಮಾಜವನ್ನು ಕತ್ತಲಲ್ಲಿಡುವುದನ್ನು ಪ್ರಾರಂಭಿಸಿವೆ. ರೈತರು, ಮಹಿಳೆಯರು ಹಾಗೂ ಶೋಷಿತ ಸಮುದಾಯಗಳ ಮೇಲಿನ ದೌರ್ಜನ್ಯದ ಬಗೆ ಕನಿಷ್ಠ ದನಿಯನ್ನು ಮಾಡಲಾರರು. ಈ ನಿಟ್ಟಿನಲ್ಲಿ ಸಾಮಾನ್ಯನೊಬ್ಬ ತನ್ನ ಹಕ್ಕನ್ನು ಕೂಡ ಚಲಾಯಿಸಲಾಗದ ಸ್ಥಿತಿಗೆ ತಲುಪಿದ್ದಾನೆ. ಮಾಧ್ಯಮವು ಜನರಿಗೆ ಕೈಗೆಟುಕದಷ್ಟು ದೂರ ಹೊರಟಿದ್ದರು, ಇತ್ತೀಚಿಗೆ ಕಾಣಿಸಿಕೊಂಡ ಫೇಸ್‍ಬುಕ್, ಟ್ವಿಟ್ಟರ್ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣಗಳ ಮೂಲಕ ಸಾಮಾನ್ಯರು ತಮ್ಮ ಅಭಿವ್ಯಕ್ತಿ ಹಾಗೂ ತಮ್ಮ ಸಮಸ್ಯೆಗಳನ್ನು ನೇರವಾಗಿ ಹೇಳಿಕೊಳ್ಳುವಂತಾಗಿದೆ. ಆನ್‍ಲೈನ್ ಸುದ್ದಿ ಮಾಧ್ಯಮಗಳು ಬಂದ ಮೇಲೆ ಜನಪರ ಸುದ್ದಿಗಳು ಪ್ರಕಟಗೊಳ್ಳುತ್ತಿವೆ. ಅದೇ ಹಾದಿಯಲ್ಲಿ ನಮ್ಮ ಸ್ನೇಹಿತರ ತಂಡ ವರದಿಗಾರ ಎಂಬ ಆನ್‍ಲೈನ್ ಸುದ್ದಿ ಮಾಧ್ಯಮವನ್ನು ಪ್ರಾರಂಭಿಸುತ್ತಿದ್ದಾರೆ. ಎಲ್ಲಾ ಮಾಧ್ಯಮಗಳು ಭ್ರಷ್ಟಾಚಾರಕ್ಕೆ ಸಿಲುಕಿ ಜನಪರ ಕೆಲಸಗಳನ್ನು ಬದಿಗೊತ್ತಿ ಬಂಡವಾಳಶಾಹಿಗಳು ಮತ್ತು ಬ್ರಾಹ್ಮಣಶಾಯಿಗಳ ಗುಲಾಮರಾದಂತೆ ಇವರಾಗುವವರಲ್ಲ ಎಂದು ನಂಬಿದ್ದೇನೆ. ಬದ್ಧತೆಯಿಂದ ಹೊರತರುತ್ತಿರುವ ಈ ಮಾಧ್ಯಮವು ಜನಪರವಾಗಿರಲಿ ಮತ್ತು ಯಶಸ್ಸು ಕಾಣಲಿ ಎಂದು ಆಶಿಸುತ್ತೇನೆ.

ಹಾರೋಹಳ್ಳಿ ರವೀಂದ್ರ
ಸಾಹಿತಿಗಳು, ಮೈಸೂರು

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group