ರಾಜ್ಯ ಸುದ್ದಿ

ನಿದ್ದೆರಾಮಯ್ಯನಾಗಿದ್ದವರು, ಬೆಂಕಿ ಹಚ್ಚುವವರಾದರು: ಮುಖ್ಯಮಂತ್ರಿ ವಿರುದ್ಧ ಆರ್.ಅಶೋಕ್ ಬೇಜವಾಬ್ದಾರಿಯುತ ಹೇಳಿಕೆ

ವರದಿಗಾರ-ಬೆಂಗಳೂರು: ಈ ಹಿಂದೆ ಸಿದ್ದರಾಮಯ್ಯನವರು ನಿದ್ದೆರಾಮಯ್ಯನಾಗಿದ್ದರು. ಸದ್ಯ ಜಾತಿ-ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆಂದು ಬಿಜೆಪಿ ನಾಯಕ, ಮಾಜಿ ಉಪಮುಖ್ಯಮಂತ್ರಿ ಆರ್. ಆಶೋಕ್ ಬೇಜವಾಬ್ದಾರಿಯುತ ಹೇಳಿಕೆಯನ್ನು ನೀಡಿದ್ದಾರೆ.

ಅವರು ಸೋಮವಾರ ಬೀದರ್ ನ ಗಣೇಶ ಮೈದಾನದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಿದ್ದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ರೈತರ ನಾಯಕನಾದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಕಿ ಹಚ್ಚುವ ನಾಯಕರಾಗಿದ್ದಾರೆ. ಪ್ರತ್ಯೇಕ ಲಿಂಗಾಯುತ ಧರ್ಮದ ಹೆಸರಿನಲ್ಲಿ ಜಾತಿ-ಜಾತಿಗಳ ನಡುವೆ ಜಗಳ ಹಚ್ಚಿದ ಸಿದ್ದರಾಮಯ್ಯ, ಹಿಂದಿ ಹೇರಿಕೆ ಎಂದು ಭಾಷೆಯ ಮಧ್ಯೆ ಕಿಚ್ಚು ಹಚ್ಚಿದ್ದಾರೆ  ಎಂದು ಹೇಳಿದ್ದಾರೆ.

ಒಂದು ಜನಾಂಗದ ವಿರುದ್ಧ ಮತ್ತೊಂದು ಜನಾಂಗ, ಒಂದು ಸಮುದಾಯದ ವಿರುದ್ಧ ಮತ್ತೊಂದು ಸಮುದಾಯವನ್ನು ಎತ್ತಿಕಟ್ಟುವ ಕೆಲಸದಲ್ಲಿ ತೊಡಗಿರುವ ಸಿದ್ದರಾಮಯ್ಯ, ತಮ್ಮ ಜೇಬಿನಲ್ಲಿ ಸದಾ ಬೆಂಕಿ ಪೊಟ್ಟಣವನ್ನು ಇಟ್ಟುಕೊಂಡು ತಿರುಗಾಡುತ್ತಿದ್ದಾರೆಂದು ಹೇಳಿದ್ದಾರೆ.

ಮುಸ್ಲಿಮರಿಗೆ ಮಾತ್ರ ಶಾದಿಭಾಗ್ಯ ಯೋಜನೆ ರೂಪಿಸುವ ಮೂಲಕ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದ್ದಾರೆ. ಅದೇ ಯೋಜನೆಯನ್ನು ಬಡತನದಲ್ಲಿರುವ ಎಸ್ಸಿ-ಎಸ್ಟಿ, ಓಬಿಸಿಗಳಿಗೆ ಅನುಷ್ಥಾನಗೊಳಿಸಲು ಮುಂದಾಗಲಿಲ್ಲ ಎಂದು ಇದೇ ಸಂದರ್ಭ ಆರೋಪಿಸಿದ್ದಾರೆ.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group