ಗೌರಿ ಹತ್ಯೆಯಂತಹ ಪ್ರಕರಣ ಬಿಹಾರದಲ್ಲಿ ನಡೆಯುತ್ತಿದ್ದರೆ ಜನ ದಂಗೆಯೇಳುತ್ತಿದ್ದರು: ಕರ್ನಾಟಕ ಸರಕಾರದ ವಿರುದ್ಧ ನಿತೀಶ್ ಕುಮಾರ್ ಆಕ್ರೋಶ

ವರದಿಗಾರ-ಪಟ್ನಾ: ಹಿರಿಯ ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ, ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ರವರ ಹತ್ಯಾ ಆರೋಪಿಗಳನ್ನು ಕರ್ನಾಟಕ ಸರಕಾರ ಇದುವರೆಗೂ ಪತ್ತೆಹಚ್ಚದ ಬಗ್ಗೆ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, ಗೌರಿ ಪ್ರಕರಣ ನಿಭಾಯಿಸುವಲ್ಲಿ ಕರ್ನಾಟಕ ಸರಕಾರ ಸಂಪೂರ್ಣ ವಿಫಲವಾಗಿದೆ. ಇಂತಹ ಘಟನೆ ಬಿಹಾರದಲ್ಲಿ ನಡೆದಿದ್ದರೆ ಜನ ದಂಗೆಯೇಳುತ್ತಿದ್ದರು. ಆದರೆ, ಕರ್ನಾಟಕದಲ್ಲಿ ಮಾಧ್ಯಮಗಳೂ ಸೇರಿದಂತೆ ಯಾರೂ ಸರಕಾರವನ್ನು ಪ್ರಶ್ನಿಸುತ್ತಿಲ್ಲ ಎಂದು ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಸರಕಾರ ಗೌರಿ ಲಂಕೇಶ್ ಹತ್ಯೆ ಪ್ರಕರಣ ಏನಾಯಿತು? ಯಾರಾದರೂ ಆರೋಪಿಗಳನ್ನು ಅಲ್ಲಿನ ಸರಕಾರ ಬಂಧಿಸಿದೆಯೇ? ಆರೋಪಿಗಳ ಬಂಧನದ ಯಾವ ಸುದ್ದಿಯೂ ಇದುರೆಗೂ ನನ್ನ ಕಿವಿಗೆ ಬಿದ್ದಿಲ್ಲ ಮತ್ತು ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ತನಿಖೆ ನಿಧಾನಗತಿಯಲ್ಲಿ ನಡೆಯುತ್ತಿದೆ ಎಂದು ಅವರು ಈ ಸಂದರ್ಭ ಹೇಳಿದ್ದಾರೆ.

error: Content is protected !!
%d bloggers like this:
Inline
Inline