ನಿಮ್ಮ ಬರಹ

ಶ್ರದ್ದಾಂಜಲಿ-ನಿಝಾಮುದ್ದೀನ್ ಉಪ್ಪಿನಂಗಡಿ ತಬೂಕ್

ಶ್ರದ್ದಾಂಜಲಿ

ದಿಟ್ಟ ಹೆಣ್ಣಿಗೊಂದು ಗುಂಡು ಹೊಕ್ಕಿದೆ
ಊರಿಡೀ ಮೌನ!
ಮಾನವೀಯತೆ ಕಾಣದ ರೋಧನ!
ಸ್ವಾರ್ಥ ಸಾಧಿಸುವ ಬಂದೂಕು
ರಕ್ತಚರಿತೆಯ ಮುಂದುವರಿಸಿದೆ,

ನೈಜ ವಿಚಾರದ ಸೋಲೊಪ್ಪದೆ
ಬಂದೂಕು ಗೋರಿ ಕಟ್ಟುತಿದೆ,
ದುರುಳ ಮನವದು ತಲೆಯಬಾಗದೆ
ಹುಚ್ಚೆದ್ದು ಕುಣಿದುಬಿಟ್ಟಿದೆ,
ದೇಶ ಉದ್ದಾರದ ಪ್ರೀತಿಗದೋ
ಬದ್ದ ವಿಚಾರದಾರೆ ಮಗಿಲುಮುಟ್ಟಿ
ಕೊನೆಗೂ ದೇಹವಷ್ಟೇ ನಿಸ್ತೇಜವಾಗಿದೆ,

ಮತ್ತೆ ಮಗದೊಮ್ಮೆ ಗುಂಡು ಮುಂದುವರಿದರೂ
ಹುಟ್ಟಿ ಬರುವ ಜಗದ ಚಿಂತನೆಯ
ಪುಟಗಳಿಗಳಿಗೆ ಕೊರತೆ ಸಾಧ್ಯವೇ?
ತಟಸ್ಥವಾಗಬಯಸಿದ ತೆಲೆಹಿಡುಕರ
ಹುಸಿ ಚಿಂತನೆಯದೋ ಸೋತುಬಿಟ್ಟಿದೆ,

ದೇಶದ್ರೋಹಿಗಳ ಕ್ರೂರ ಚಿಂತೆಯಲಿ
ಪೆನ್ನು, ಗನ್ನಿಗೆ ಅದೇನೋ ಸಂಬಂಧ!
ಗಾಂಧಿಯಿಂದ ಗೌರಿಯ ಮಧ್ಯೆ
ಅದೆಷ್ಟೋ ನೇರ ನಿರಂತರ ಸತ್ಯ ಚರಕ
ತಿರುಗುವುದು ನಿಂತಿದೆ!
ನೆನಪಿಡಿ, ಮರುಗುವುದಷ್ಟೇ ಶ್ರದ್ದಾಂಜಲಿಯಲ್ಲ
ಪ್ರತಿರೋಧವು ಅಪರಾಧವೇ ಅಲ್ಲ!!!

-ನಿಝಾಮುದ್ದೀನ್ ಉಪ್ಪಿನಂಗಡಿ ತಬೂಕ್

To Top
error: Content is protected !!
WhatsApp chat Join our WhatsApp group