ನಿಮ್ಮ ಬರಹ

ಕೊಲೆಗಾರ ಗೂಂಡಾಗಳಿಗೆ ಅಂಕುಶ ಹಾಕಬೇಕು

ಇಬ್ನ್ ಝೈತೂನ್

ಸಾಹಿತ್ಯ ಲೋಕದ ನೈಜ್ಯ ಧ್ವನಿ, ಖ್ಯಾತ ಪತ್ರಕರ್ತೆ, ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಅವರ ಹತ್ಯೆಯು ಅತ್ಯಂತ ಹೇಯ ಕೃತ್ಯ. ನಿಜವನ್ನು ಸಹಿಸಿಕೊಳ್ಳಲಾಗದ ಹೇಡಿಗಳ ಅತೀ ನೀಚ ಕೃತ್ಯ. ಸರಕಾರದ ಆಡಳಿತ ವಿಫಲತೆಯನ್ನು ರುಜುವಾತುಮಾಡುವ ಅಮಾನುಷ್ಯ ಕೃತ್ಯ. ಮನುಷ್ಯ ಮನುಷ್ಯನನ್ನು ನಿಷ್ಕರುಣವಾಗಿ ನಿರಂತರವಾಗಿ ಕೊಲೆ ಮಾಡಿ ರಾಜಾರೋಷವಾಗಿ ನಡೆದಾಡುತ್ತಿದ್ದರೂ ನಿಷ್ಕ್ರಿಯವಾಗಿರುವ ಕೇಂದ್ರ ಮತ್ತು ರಾಜ್ಯ ಸರಕಾರ. ಇದು ಅರಾಜಕತೆಯ ಸ್ಪಷ್ಟ ಪುರಾವೆಯಾಗಿದೆ.

ಪೋಲೀಸರು ಸರಕಾರದ ಸಂಬಳ ಪಡೆಯುತ್ತಿದ್ದರೂ ಭಯೋತ್ಪಾದಕ ಸಂಘಪರಿವಾರಕ್ಕೆ ನಿಷ್ಟರಾಗಿದ್ದಾರೆ. ವಿಚಾರವಾದಿ ಕಲ್ಬುರ್ಗಿಯವರ ಕೊಲೆಯಾಗಿ ವರ್ಷಗಳೇ ಕಳೆದರೂ ಅಪರಾಧಿಗಳನ್ನು ಪತ್ತೆಹಚ್ಚಲು ಇದುವರೆಗೆ ಸಾಧ್ಯವಾಗಿಲ್ಲ. ಆದರೆ ಮೊನ್ನೆ ತಾನೆ ಕೊಲೆಯಾದ ಒಬ್ಬ RSS ಗೂಂಡನ ಕೊಲೆ ತನಿಖೆ ನೆಪದಲ್ಲಿ ಅದೆಷ್ಟು ನಿರಪರಾಧಿ ಮುಸ್ಲಿಮರು ಪೋಲೀಸರ ಪೀಡನೆಗೆ ಬಲಿಯಾದರು. ಮುಸ್ಲಿಮರ ಪವಿತ್ರ ಗಂಥ ಖುರ್ಆನ್ ಅನ್ನು ನೆಲಕ್ಕೆಸೆದು ಅಪಮಾನಿಸಿದರೂ ಕಣ್ಣು ತೆರೆಯದ ಸರಕಾರ. ಮಅದನಿಯಂತಹ ನಿರಪರಾಧಿಗಳು ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಕೊಲೆ ಮಾಡಿದವರು, ಕೊಲೆ ಮಾಡಲು ಪ್ರೇರೇಪಿಸಿದವರು ಹೊರಗಡೆ ಇದ್ದಾರೆ. ಅಂತಹವರ ವಿಚಾರಣೆ ನಡೆಸದಂತೆ ಕೊರ್ಟಿನಿಂದ ತಡೆ ನೀಡುತ್ತಿದೆ. ಪೋಲಿಸರೊಂದಿಗೆ ಸಾರ್ವಜನಿಕವಾಗಿಯೇ “ತಾಕತ್ತಿದ್ದರೆ ತಡೆಯಿರಿ ಎಂದು ಸವಾಲು ಹಾಕುವ, ಯಾವುದೇ ಮುಲಾಜಿಲ್ಲದೆ ಜಿಲ್ಲೆಗೆ ಬೆಂಕಿ ಹಚ್ಚುತ್ತೇನೆ ಎಂದು ಬೊಗಳುವ ಜನಪ್ರತಿನಿಧಿ. ಇವೆಲ್ಲವನ್ನು ಕೇಳಿಯೂ ಕೇಳದಂತಿರುವ ನಿಷ್ಪ್ರಯೋಜಕ ಪೋಲೀಸರು, ಜನಪ್ರತಿನಿಧಿಗಳು ಮತ್ತು ಸರಕಾರ. ಇವೆಲ್ಲನ್ನು ನೋಡುವಾಗ ನಿಜವಾಗಿಯೂ ಇಲ್ಲಿ ಸರಕಾರ ಇದೆಯೇ? ಇದ್ದರೂ ಯಾರ ನಿಯಂತ್ರಣದಲ್ಲಿದೆ ಎಂದು ಸಂಶಯ ಬಲವಾಗುತ್ತಿದೆ.

ಪೈಶಾಚಿಕ ಶಕ್ತಿಯೊಂದಿಗೆ ಸರಕಾರ ಮೃದು ನೀತಿ ತೋರುತ್ತಿರುವುದೇ ಅಪರಾಧ ಕೃತ್ಯ ಹೆಚ್ಚಾಗಲು ಕಾರಣ. ಅದ್ದರಿಂದ ಇನ್ನಾದರೂ ಸರಕಾರ ಎಚ್ಚೆತ್ತು, ಕೊಲೆಗಾರ ಗೂಂಡಗಳಿಗೆ ಅಂಕುಶ ಹಾಕಬೇಕು. ಜನಪ್ರತಿನಿಧಿಗಳು ತಮ್ಮ ರಾಜಕೀಯ ಚದುರಂಗದಾಟಕ್ಕೆ ಮಾನವರ ಅಮೂಲ್ಯ ಜೀವವನ್ನು ಬಲಿ ನೀಡದೆ ಮಾನವೀಯತೆಯನ್ನು ತೋರಬೇಕು. ಪೋಲೀಸರು ಯಾವುದೇ ವಿಭಾಗಕ್ಕೆ ನಿಷ್ಟರಾಗದೆ ಆತ್ಮಸಾಕ್ಷಿಗನುಗುಣವಾಗಿ ಕರ್ತವ್ಯವನ್ನು ನಿರ್ವಹಿಸಬೇಕು. ಇಲ್ಲವಾದರೆ ಅರಾಜಕತೆ ಉಂಟಾಗುವುದರಲ್ಲಿ ಸಂಶಯವಿಲ್ಲ.

ಇಬ್ನ್ ಝೈತೂನ್

To Top
error: Content is protected !!
WhatsApp chat Join our WhatsApp group