ಪ್ರತಿಭೆ

ಮತ್ತೆ ಹುಟ್ಟಿ ಬನ್ನಿ ಗೌರಿ…

ಲೇಖನದ ಧ್ರುವತಾರೆ
ಮರೆಯಾಗಿ‌ ,ಬಾನಂಚಲಿ
ಹೊಳೆಯುತಿದೆ ಬೆಳ್ಳಿ ಚುಕ್ಕಿ..!

ದೂರದಿ ಮಿನುಗುತ್ತಿದ್ದರೂ
ಕಣ್ಣೀರ ಬೆಳಕು ಸೂಸುತ್ತಿದೆ..,
ಎಲ್ಲಿ ಅಸಹಾಯಕತೆಗಳು
ತಾಂಡವಾಡಬಹುದೆಂದು..!!

ಮರೆಯಾಗಿರುವುದು
ವಿಚಾರವಾದಿಯಾದರೂ
ಮರೆಯಲಸಾಧ್ಯ
ಅವರ ವಿಚಾರಶೀಲತೆಗಳು..!

ಮುರಿದು ಹಾಕಿರಿವುದು
ಲೇಖನಿಯಾದರೂ ,
ಖಡ್ಗಕ್ಕಿಂತಲೂ ಹರಿತವಾದ
ಲೇಖನವನ್ನಲ್ಲ..!!

ಖಾಲಿಯಾಗಿರಬಹುದು
ಲೇಖನಿ ಕಡ್ಡಿಯ ಶಾಯಿ,
ಮಗದೊಂದು ಜೋಡಿಸಿ
ಮುಂದುವರಿಸುವೆವು ನೋಡಿ..!

ಮಾನವೀಯತೆವಾದಿಗಳಿಗೆ
ಬರೀ ಮರೀಚಿಕೆ ಈ ಮಣ್ಣು ,
ಕೊಲೆಘಟುಕ,ಕಿಡಿಗೇಡಿಗಳಿಗೆ
ಉಳಿಗಾಲವಿಲ್ಲಿ ಭಾರತ ಮಣ್ಣಲಿ..!!

 

ಚೊಕಲೇಟ್ ಬೊಯ್ 

ಎನ್.ರಾಝ್ ಸಜೀಪ

To Top
error: Content is protected !!
WhatsApp chat Join our WhatsApp group