ನೋವುಂಡಿದೆ ಬರ್ಮಾ…

ಸಫ್ವಾನ್ ಕೂರತ್
ಯಾರು ನೀಡಿದ ಭತ್ಯೆ

ಸಾವಿರ ನೀಡಿದೆ ಹತ್ಯೆ

ಯಾರೋ ಮಾಡಿದ ಕರ್ಮ
ಪಾರಾಗದೇ ನೋವುಂಡಿದೆ ಬರ್ಮಾ..!!!!

ಮುಗ್ಧ ಹಸುಳೆಗಳ ನೋಡದೆ
ಕಗ್ಗತ್ತಲ ಅಡವಿಗೆ ದೂಡಿ
ಹೆಣ್ಣು ಮಣ್ಣೆಂದು ನೋಡದೆ
ಜನ್ಮ ಕೊಟ್ಟವಳು ಎಂದು ತಿಳಿಯದೆ…!!

ಮಿಡಿವ ಹೃದಯದ ಬಡಿತ
ಬಡಿವ ನೋವಿನ ಮಿಡಿತ
ಜೋರಾಗಿದೆ ಇಂದೂ
ಕಾಣದಾಗಿದೆ ಎಂದೂ
ಚಲಿಸುವ ದಿಕ್ಕುಗಳು ಬದಲಾಗಿದೆ …!!

ತೇಲಾಡಿತು ಮಗ್ಧ ಮಗುವೊಂದು
ಹಾಲುಣಿಸವುದೇ ನೀರಂದು
ಜಗ ಬರೆಯಿತು ಇಂದು
ಹದಿಹರೆಯದ ಹೆಣ್ಣೆಂದು
ಧಾವಿಸದಾದರು ಕೈ ಚಾಚಿದ ಮಗ್ಧ ಜನರ ಮುಂದೆ‌……!!

ಬೋಧಿಸಿತು ಧರ್ಮವಂದು
ಭೋಧಿ ವೃಕ್ಷದ ಮಡಿಲಿಲಂದು
ಶಾಂತಿ ತೋರಿಸು ಜಗಕೆ ಎಂದೂ
ಅಶಾಂತಿ ರೂಪವ ತೋರಿಸಿದರಿಂದು
ಕಳಚಿಟ್ಟರು ನೈಜಮುಖವವಿಂದು …!!

ರಾಜ ರೋಷವ ಮೆರೆದರು
ರಾಕ್ಷಸ ಕೃತ್ಯವ ತೋರಿದರು
ತಾಳ್ಮೆ ಮರೆತು ನಿಂತರು
ಸ್ವಾರ್ಥ ಸೇವೆಯ ಬಯಸಿದರು
ನಿಸ್ವಾರ್ಥಿ ಜನರು ಬಲಿಯಾದರು..!!

 

ಚಪ್ಪು ಸಫ್ವಾನ್ ಕೂರತ್

error: Content is protected !!
%d bloggers like this:
Inline
Inline