ನಮ್ಮ ಹೆಜ್ಜೆ - ನಿಮ್ಮ ನುಡಿ

ಪ್ರಾಮಾಣಿಕ ಪ್ರಯತ್ನದ ಮಾಧ್ಯಮವಾಗಲಿ: ಅದ್ದಿ ಬೊಳ್ಳೂರ್

ನಮ್ಮ ಹೆಜ್ಜೆ, ನಿಮ್ಮ ನುಡಿ: ಮಾಧ್ಯಮಗಳಿಗೆ ನ್ಯಾಯಾಂಗ ಮತ್ತು ಶಾಸಕಾಂಗಗಳೆರಡು ಕೆಂಪು ದೀಪಗಳಿದ್ದಂತೆ , ಉತ್ತಮ ಸಮಾಜ ರೂಪಿಸುವಲ್ಲಿ ಮಾಧ್ಯಮಗಳ ಪಾತ್ರ ಪ್ರಮುಖವಾದದ್ದು. ಅದನ್ನರಿಯದ ಇತ್ತೀಚಿನ ಮಾಧ್ಯಮಗಳು ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವ ದಿಕ್ಕಿನಲ್ಲಿ ಕಾರ್ಯನಿರ್ವಹಿಸದೆ ಕಾಲ ಬದಲಾದಂತೆ ಪತ್ರಿಕೋದ್ಯಮದ ಆಯಾಮವೂ ಬದಲಾಗುತ್ತಾ ವಿದ್ಯುನ್ಮಾನ ಮಾಧ್ಯಮಗಳ ಭರಾಟೆ ಹೆಚ್ಚಾದಂತೆ ಬ್ರೇಕಿಂಗ್ ನ್ಯೂಸ್ ಬಿತ್ತರಿಸುವ ಧಾವಂತದಲ್ಲಿ ಜನರ ಅಗತ್ಯಗಳ ಬಗ್ಗೆ ಯೋಚನೆ ಮಾಡದೆ ಸಮಾಜದ ದಿಕ್ಕು ತಪ್ಪಿಸುತ್ತಿರುವ ಇಂತಹ ವ್ಯಾಪಾರಿ ಮಾದ್ಯಮಗಳ ಸಂದಿಗ್ಧ ಸ್ಥಿತಿ ಸಮಾಜದಲ್ಲಿ ನಿರ್ಮಾನವಾಗಿರುವಾಗ, ಧಿಟ್ಟ ಎದೆಗಾರಿಕೆಯನ್ನು ತೋರಿಸುತ್ತಾ ಮುನ್ನುಗ್ಗಲೆಂದು ಪತ್ರಿಕೋದ್ಯಮದ ಘನತೆ- ಗೌರವಗಳನ್ನು ಎತ್ತಿ ಹಿಡಿಯಲು ಪ್ರಯತ್ನಿಸುತ್ತಿರುವ ನಮ್ಮ ಈ “ವರದಿಗಾರ” ಎಂಬ ನೈಜ ಮಾದ್ಯಮವು ವಾಸ್ತವ ಲೋಕಕ್ಕೆ ಮುಂದಿನ ದಿನಗಳಲ್ಲಿ ಜನ ಸಾಮಾನ್ಯರ ಸಂವಹನ ಪ್ರಕ್ರಿಯೆಗೆ “ವರದಿಗಾರ” ಅತ್ಯಂತ ಸಹಕಾರಿಯಾಗುವುದರ ಜೊತೆ ಜೊತೆಗೆ ಅತ್ಯಂತ ಪ್ರಬಲವಾಗಿ ಬೆಳೆಯಲಿ. ಆಡಳಿತ ನಡೆಸುವ ಸರ್ಕಾರಗಳು ಭ್ರಷ್ಟಚಾರದಲ್ಲಿ ಭಾಗಿಯಾದಗ, ಆಡಳಿತದ ಯಂತ್ರ, ಕಾರ್ಯಾಂಗ ಹಾದಿ ತಪ್ಪಿ ನಡೆದಾಗ ಎಚ್ಚರಿಸುವ, ತಪ್ಪುಗಳನ್ನು ಜನ ಸಮೂಹದ ಗಮನಕ್ಕೆ ತರುವ ಪ್ರಾಮಾಣಿಕ ಪ್ರಯತ್ನವನ್ನು ನಿರಂತರವಾಗಿ ನಿರ್ವಹಿಸಲಿ ಕ್ಷಣ ಕ್ಷಣದಲ್ಲಿ ನಡೆಯುವ ಸುದ್ದಿಗಳನ್ನು ಬಿತ್ತರಿಸುವ ಮೂಲಕ ಜನರಿಗೆ ಮಾಹಿತಿ ಒದಗಿಸುವ ಸಾಧನವಾಗಿ ರೂಪುಗೊಳ್ಳಲಿ ಎಂದು ಶುಭಹಾರೈಕೆ.

-ಅದ್ದಿ ಬೊಳ್ಳೂರು

ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು. ಹಳೆಯಂಗಡಿ, ಮಂಗಳೂರು.

1 Comment

1 Comment

  1. Amir sheik

    August 17, 2017 at 10:29 am

    ಅಭಿನಂದನೆಗಳು

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group