ವರದಿಗಾರ ವಿಶೇಷ

ಜಾರ್ಖಂಡ್: ಶಿಶು ಮರಣ ಪ್ರಮಾಣ ಇಥಿಯೋಪಿಯಾಕ್ಕಿಂತಲೂ ಹೆಚ್ಚು!!

ವರದಿಗಾರ ವಿಶೇಷ: ಜಾರ್ಖಂಡ್ ರಾಜ್ಯದ ಜಂಷೆಡ್ಪುರದ ಮಹಾತ್ಮ ಗಾಂಧಿ ಸ್ಮಾರಕ ಮೆಡಿಕಲ್ ಕಾಲೇಜಿನ ಆಸ್ಪತ್ರೆಯಲ್ಲಿ ಕಳೆದ 30 ದಿನಗಳಲ್ಲಿ 52 ಶಿಶುಗಳು ಮರಣ ಹೊಂದಿರುವ ಘಟನೆಯು ರಾಜ್ಯದಲ್ಲಿ ಹೆಚ್ಚುತ್ತಿರುವ ಅಪೌಷ್ಟಿಕತೆ ಹಾಗೂ ಶಿಶು ಮರಣ ಪ್ರಮಾಣದ ಬಗ್ಗೆ ಕಳವಳಕಾರಿಯಾದ ಮಾಹಿತಿಯ ಕಡೆಗೆ ನಮ್ಮನ್ನು ಸೆಳೆದೊಯ್ಯುತ್ತಿದೆ.

ಇಂಡಿಯಾ ಸ್ಪೆಂಡ್ ವರದಿ ಪ್ರಕಾರ, 52 ಮಕ್ಕಳಲ್ಲಿ 40 ಮಕ್ಕಳು ನವಜಾತ ತೀವ್ರ ನಿಘಾ ಘಟಕದಲ್ಲಿ (NICU) ಮರಣ ಹೊಂದಿದೆ. 12 ಮಕ್ಕಳು ಶಿಶುಗಳ ತೀವ್ರ ನಿಘಾ ಘಟಕದಲ್ಲಿ (PICU) ಮರಣ ಹೊಂದಿದೆ.

NICU ನಲ್ಲಿ ಮರಣ ಹೊಂದಿದ 40 ಮಕ್ಕಳಲ್ಲಿ 38 ಮಕ್ಕಳನ್ನು ಕಡಿಮೆ ಜನನ ತೂಕದ ಕಾರಣ NICU ನಲ್ಲಿ ದಾಖಲಾಗಿಸಲಾಗಿತ್ತು. ಉಳಿದ 14 ಮಕ್ಕಳು ಅಕಾಲಿಕ ಜನನ ಹಾಗೂ ಇತರ ಕಾರಣಗಳಿಂದ ಮೃತಪಟ್ಟದೆ.

ಕಡಿಮೆ ಜನನ ತೂಕದ ಸಾಮಾನ್ಯ ಕಾರಣ ತಾಯಿಯಂದಿರ ಅಪೌಷ್ಟಿಕತೆ. ಆಸ್ಪತ್ರೆ ಸಿಬ್ಬಂದಿಗಳ ಪ್ರಕಾರ ಅಲ್ಲಿಗೆ ಬರುವ ಹೆಚ್ಚಿನ ತಾಯಂದಿರು ಬುಡಕಟ್ಟು ಜನಾಂಗದವರಾಗಿದ್ದು, ಅಪೌಷ್ಟಿಕತೆಯಿಂದ ಬಳಲುತ್ತಿರುತ್ತಾರೆ.

ಇಂಡಿಯಾ ಸ್ಪೆಂಡ್ ವರದಿ ಪ್ರಕಾರ ಜಾರ್ಖಂಡ್ ರಾಜ್ಯದ ಶಿಶು ಮರಣ ಪ್ರಮಾಣವು ಆಫ್ರಿಕಾದ ಬಡ ದೇಶಗಳಲ್ಲೊಂದಾದ ಇಥಿಯೋಪಿಯಾಕ್ಕಿಂತಲೂ ಹೆಚ್ಚಾಗಿದೆ ಎಂದು ಹೇಳಿದೆ. ಆದಾಯದಲ್ಲಿ ಜಾರ್ಖಂಡ್ ಭಾರತದ ಹತ್ತನೆಯ ಬಡ ರಾಜ್ಯವಾಗಿದೆ. 2014ರಿಂದ ಈ ರಾಜ್ಯದಲ್ಲಿ ಬಿಜೆಪಿಯು ಅಧಿಕಾರದಲ್ಲಿದೆ.

To Top
error: Content is protected !!
WhatsApp chat Join our WhatsApp group