ನಮ್ಮ ಹೆಜ್ಜೆ - ನಿಮ್ಮ ನುಡಿ

ಬತ್ತಿಹೋದ ನಿರೀಕ್ಷೆಗೆ ಆಶಾಕಿರಣವಾಗಲಿ: ಅನೀಸ್ ಕೌಸರಿ

ನಮ್ಮ ಹೆಜ್ಜೆ, ನಿಮ್ಮ ನುಡಿ: ಮಾಧ್ಯಮಗಳು ಜನಸಾಮಾನ್ಯರ ಭರವಸೆಯ ಪ್ರತಿಬಿಂಬ. ಆಧುನಿಕತೆಯ ವ್ಯಾಪಾರಿ ಮನಸ್ಥಿತಿಯಲ್ಲಿ ಎಲ್ಲವೂ ಮಲಿನಗೊಂಡಿದೆ. ಮಾಧ್ಯಮ ರಂಗವೂ ಕೂಡ ಕಳಂಕಿತವಾಗಿದೆ. ಪ್ಯಾಕೇಜ್ ವರದಿಗಳೆಡೆಯಲ್ಲಿ ಮರ್ದಿತರ, ನಿರಾಕರಿಸಲ್ಪಟ್ಟವರ, ನೈಜತೆಯ ಧ್ವನಿಯಾಗಲು ಮಾಧ್ಯಮಗಳಿಗೆ ಸಾಧ್ಯವಾಗುತ್ತಿಲ್ಲ. ಒಂದರ್ಥದಲ್ಲಿ ನೆಮ್ಮದಿ ಕೊಡುತ್ತಿದ್ದ ಮನಸ್ಸಿನ ಮಿತ್ರರಾಗಿದ್ದ ಅದೆಷ್ಟೋ ಮಾಧ್ಯಮಗಳು ಈಗ ನನ್ನ ನೆಮ್ಮದಿ ಕೆಡಿಸುವ ಖಳನಾಯಕನಾಗಿ ಮಾರ್ಪಟ್ಟಿದೆ.

ಇವೆಲ್ಲವುಗಳೆಡೆಯಲ್ಲೂ ವೃತ್ತಿ ಧರ್ಮ ಪಾಲಿಸುವ ಬೆರಳೆಣಿಕೆಯ ಮಾಧ್ಯಮಗಳು ಸತ್ಯಕ್ಕಾಗಿ ಸವಾಲಿನ ಹಾದಿ ಸ್ವೀಕರಿಸಿ ಮುಂದುವರಿಯುತ್ತಿದೆ. “ವರದಿಗಾರ” ಜನಸಾಮಾನ್ಯರ ಭರವಸೆಯಾಗಲಿ. ಧಮನಿತರ ಧ್ವನಿಯಾಗಲಿ. ಮಾಧ್ಯಮ ಲೋಕದ ಹೊಸ ಕಿರಣವಾಗಲಿ! ಬತ್ತಿಹೋದ ನಿರೀಕ್ಷೆಗೆ ಆಶಾಕಿರಣವಾಗಿ!!!

-ಅನೀಸ್ ಕೌಸರಿ
ರಾಜ್ಯಾಧ್ಯಕ್ಷರು, SKSSF ಕರ್ನಾಟಕ ರಾಜ್ಯ

 

To Top
error: Content is protected !!
WhatsApp chat Join our WhatsApp group