ಮಾಹಿತಿ

ಮಕ್ಕಳನ್ನು ಪಡೆದು ನಂತರ ಮದುವೆಯಾಗಿ; ಲಿವ್ ಇನ್ ರಿಲೇಶನ್ ಗೆ ಬೆಂಬಲಿಸುವ ಭಾರತದ ಬುಡಕಟ್ಟು ಜನಾಂಗ!!

ವರದಿಗಾರ: ಭಾರತೀಯ ಸಂಸ್ಕೃತಿಯಲ್ಲಿ ಸಂಪ್ರದಾಯ ತನ್ನದೇ ಆದ ಸ್ಥಾನವನ್ನು ಪಡೆದಿದೆ. ನಮ್ಮಲ್ಲಿ ಅಸ್ತಿತ್ವದಲ್ಲಿರುವ ವಿವಿಧ ಜಾತಿ ಮತ್ತು ಪಂಗಡಗಳ ನಡುವೆ ಹಲವು ವಿರೋಧಾಭಾಸಗಳ ಆಚರಣೆಗಳು ಚಾಲ್ತಿಯಲ್ಲಿವೆ. ಈಗೀಗ “ಲಿವ್ ಇನ್” ಸಂಬಂಧಗಳಿಗೂ ಒಪ್ಪಿಗೆ ದೊರೆಯುವ ಹಂತದಲ್ಲಿ ನಾವಿದ್ದೇವೆ. ಆದರೂ ಎಲ್ಲರೂ ಅದನ್ನು ಒಪ್ಪುವುದಿಲ್ಲವೆಂಬುವುದೂ ಅಷ್ಟೇ ಸತ್ಯ. ಬಹುದೊಡ್ಡ ಪ್ರಮಾಣದ ಭಾರತೀಯರೂ ಈಗಲೂ ಇಂತಹ ಸಂಬಂಧಗಳಿಗೆ ವಿರೋಧ ವ್ಯಕ್ತಪಡಿಸುತ್ತಾರೆ ಮತ್ತು ಮದುವೆಗಿಂತ ಮುಂಚೆ ಮಕ್ಕಳನ್ನು ಪಡೆಯುವುದೊಂದು ಮಡಿವಂತಿಕೆಯೆಂಬಂತೆಯೇ ಕಾಣುತ್ತಾರೆ. ಆದರೆ ಗರಾಸಿಯ ಎನ್ನುವಂತಹ ಬುಡಕಟ್ಟು ಜನಾಂಗದವರು ಈ “ಲಿವ್ ಇನ್” ಸಂಬಂಧಗಳನ್ನು ಪ್ರೋತ್ಸಾಹಿಸುತ್ತಾರೆ ಮತ್ತು ಮದುವೆಗಿಂತ ಮುಂಚೆ ಮಕ್ಕಳನ್ನೂ ಪಡೆಯುತ್ತಾರೆ.

ಗರಾಸಿಯ ಬುಡಕಟ್ಟು ಜನರು ಪರಿಶಿಷ್ಟ ಪಂಗಡಕ್ಕೆ ಸೇರಿದ ಜನರು ರಾಜಸ್ಥಾನ ಮತ್ತು ಗುಜರಾತಿನ ಕಾಡು ಪ್ರದೇಶಗಳಲ್ಲಿ ವಾಸಿಸುತ್ತಾರೆ. ಬೇಸಾಯ ಮತ್ತು ದಿನಗೂಲಿ ನೌಕರರಾಗಿ ಕೆಲಸ ಮಾಡಿ ದಿನದೂಡುವ ಇವರು ತಮ್ಮ ಸಂಗಾತಿಯ ಕೈಯ್ಯಲ್ಲಿ ಜೀವನ ನಿರ್ವಹಣೆಗೆ ಬೇಕಾಗುವ ಆರ್ಥಿಕ ಪರಿಸ್ಥಿತಿಯಿದ್ದರೆ ಮಾತ್ರ ಅವರನ್ನು ಮದುವೆಯಾಗುತ್ತಾರೆ. ಮದುವೆಯಾಗುತ್ತಾರೆ.ಆದ್ದರಿಂದ ಇವರ ಮದುವೆಗಳು ಜೀವನದ ಅಪರ ಕಾಲದಲ್ಲಿ ನಡೆಯುತ್ತದೆ. ಸಮಾಜಶಾಸ್ತ್ರಜ್ವರ ಪ್ರಕಾರ ಈ ವ್ಯವಸ್ಥೆಯಿಂದಾಗಿ ಇವರ ಮಧ್ಯೆ ವರದಕ್ಷಿಣೆ ದೌರ್ಜನ್ಯ ಮತ್ತು ಅತ್ಯಾಚಾರಗಳಂತಹಾ ಪ್ರಕರಣಗಳು ಬಹಳ ಕಡಿಮೆ ಮಟ್ಟಮಟ್ಟದಲ್ಲಿ ನಡೆಯುತ್ತದೆ.

ಗರಾಸಿಯ ಬುಡಕಟ್ಟಿನ ಕುರಿತು ಇತರೆ ಕುತೂಹಲಕರ ಅಂಶಗಳು:
ಬಹುಪತ್ನಿತ್ವ ಗರಾಸಿಯ ಬುಡಕಟ್ಟು ಜನರಲ್ಲಿ ಸಾಮಾನ್ಯವಾಗಿದೆ. ಓರ್ವ ಪುರುಷನ ಮೊದಲ ಮಹಿಳೆ ಗಂಡು ಮಗುವಿಗೆ ಜನ್ಮ ನೀಡದಿದ್ದ ವೇಳೆ ಅಥವಾ ಆಕೆ ಬಂಜೆಯಾಗಿದ್ದಲ್ಲಿ ಅವನಿಗೆ ಮತ್ತೊಂದು ಮಹಿಳೆಯೊಂದಿಗೆ ಸಂಬಂಧಗಳನ್ನು ಹೊಂದಬಹುದಾಗಿದೆ.ಮಹಿಳೆಯರು ಕುಟುಂಬದ ಮುಖ್ಯಸ್ಥರಾಗಿರುತ್ತಾರೆ. ಕುಟುಂಬದಲ್ಲಿ ಉನ್ನತ ಸ್ಥಾನವಿದೆ. ಪುರುಷರು ಹೆಚ್ಚಾಗಿ ಮನೆಗೆಲಸಗಳನ್ನು ನಿರ್ವಹಿಸುತ್ತಾರೆ.ಗರಾಸಿಯ ಜನಾಂಗದವರು ರಜಪೂತ್, ದುಂಗ್ರಿ ಮತ್ತು ಭೀಲ್ ಗರಾಸಿಯ ಎಂಬ ಮೂರು ಪಂಗಡಗಳಾಗಿ ಗುರುತಿಸಲ್ಪಡುತ್ತಾರೆ

To Top
error: Content is protected !!
WhatsApp chat Join our WhatsApp group