ನಮ್ಮ ಹೆಜ್ಜೆ - ನಿಮ್ಮ ನುಡಿ

ಅಮಾಯಕ‌ ಜನಸಾಮಾನ್ಯರ ಪಾಲಿನ ಧ್ವನಿಯಾಗಲಿ: ಸಾಹುಕಾರ್ ಅಚ್ಚು

ನಮ್ಮ ಹೆಜ್ಜೆ, ನಿಮ್ಮ ನುಡಿ: ಅಕ್ಷರ ಹಾದರಗಳು ಯಾವ ಮುಚ್ಚುಮರೆಯೂ ಇಲ್ಲದೇ ನಡೆಯುತ್ತಿರುವ ಕಾಲಘಟ್ಟ ಇದು. ಯಾವುದೇ ಘಟನೆಗಳಿರಲಿ ತಮ್ಮ ಮೂಗಿನ ನೇರಕ್ಕೆ ವಿಶ್ಲೇಷಿಸುತ್ತಾ ಸುದ್ದಿ ಬಿತ್ತರಿಸಿ ಸಮಾಜವನ್ನು ತಪ್ಪುದಾರಿಗರಳೆವ ಮಾಧ್ಯಮದ ಮಂದಿಯೇ ತುಂಬಿ ತುಳುಕುತ್ತಿರುವ ಈ ಹೊತ್ತಿನಲ್ಲಿ ಸಮಾಜದ ಬಗ್ಗೆ ನೈಜ ಕಾಳಜಿಯಿರುವ ಜನ ತಮ್ಮ ಅಭಿಪ್ರಾಯ ಮಂಡಿಸಲು ಪರ್ಯಾಯ ಮಾಧ್ಯಮವಾಗಿ ಸಾಮಾಜಿಕ ಜಾಲತಾಣವನ್ನಷ್ಟೇ ನೆಚ್ಚಿಕೊಂಡಿರುವುದು ಕಾಲದ ಅನಿವಾರ್ಯತೆ. ಒಂದೇ ಸುದ್ದಿಗೆ ಅನೇಕ ಆಯಾಮಗಳನ್ನು ನೀಡುವ ಮತ್ತು ಸತ್ಯದ ತಿರುಳರಿಯಲು ಇದು ಪೂರಕ ಕೂಡಾ. ಸಾಮಾಜಿಕ ಜಾಲತಾಣದ ಮೂಲಕ‌ ಪಳಗಿರುವ ಯುವ ಪೀಳಿಗೆಯೊಂದರಿಂದ ಸತ್ಯದ ಅನಾವರಣಕ್ಕಾಗಿ ರೂಪುಗೊಳ್ಳುತ್ತಿರುವ ವರದಿಗಾರ ವೆಬ್ ನ್ಯೂಸ್ ಗೆ ಶುಭಹಾರೈಕೆಗಳು.

ಮುಂದೆ‌ ಇದು ಅಮಾಯಕ‌ ಜನಸಾಮಾನ್ಯರ ಪಾಲಿನ ಧ್ವನಿಯಾಗಲಿ ಸಮಾಜಕಂಟಕರ ಪಾಲಿಗೆ ಕೆಟ್ಟ ಕನಸಾಗಲಿ.

-ಸಾಹುಕಾರ್ ಅಚ್ಚು

ಯುವ ಬರಹಗಾರರು

To Top
error: Content is protected !!
WhatsApp chat Join our WhatsApp group