ರಾಜ್ಯ ಸುದ್ದಿ

ಪ್ರಜಾಪ್ರಭುತ್ವವನ್ನು ಕಾಪಾಡಿಕೊಳ್ಳಲು ಪ್ರಕಾಶ್‌ ರೈ ಯನ್ನು ಚುನಾಯಿಸುವ ಅಗತ್ಯವಿದೆ: ಯೋಗೇಂದ್ರ ಯಾದವ್‌

‘ದೇಶವನ್ನು ಕಾಪಾಡಿಕೊಳ್ಳಲು ಪರ್ಯಾಯ ರಾಜಕಾರಣ ಮಾತ್ರ ಮಾರ್ಗ’

ವರದಿಗಾರ (ಎ.16): ‘ಸಂವಿಧಾನದ ಆಶಯಗಳು ಅಪಾಯದಲ್ಲಿರುವ ಸಂದರ್ಭದಲ್ಲಿ ಪ್ರಜಾಪ್ರಭುತ್ವವನ್ನು ಕಾಪಾಡಿಕೊಳ್ಳಲು ಪರ್ಯಾಯ ರಾಜಕಾರಣ ಒಂದೇ ಏಕೈಕ ಮಾರ್ಗ, ಅದಕ್ಕಾಗಿ ಬೆಂಗಳೂರು ಸೆಂಟ್ರಲ್ ನ ಪಕ್ಷೇತರ ಅಭ್ಯರ್ಥಿ ಪ್ರಕಾಶ್‌ ರಾಜ್‌ ಅವರನ್ನು ಗೆಲ್ಲಿಸುವ ಅಗತ್ಯವಿದೆ’ ಎಂದು ಸ್ವರಾಜ್‌ ಇಂಡಿಯಾ ಪಕ್ಷದ ಅಧ್ಯಕ್ಷ ಯೋಗೇಂದ್ರ ಯಾದವ್‌ ಹೇಳಿದ್ದಾರೆ

‌‌ಅವರು ನಗರದಲ್ಲಿ ಸೋಮವಾರ ಪ್ರಕಾಶ್ ರೈ ಯನ್ನು ಭೇಟಿ ಮಾಡಿ, ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು.

‘ಕರ್ನಾಟಕದಲ್ಲಿ ಪರ್ಯಾಯ ರಾಜಕೀಯಕ್ಕೆ ಪ್ರಕಾಶ್‌ ರಾಜ್‌ ಅಡಿಪಾಯ ಹಾಕಿದ್ದಾರೆ.  ಪ್ರಜಾಪ್ರಭುತ್ವದ ಆಶಯಗಳ ಪರವಾಗಿರುವ ಮತದಾರರು ಅವರನ್ನು ಬೆಂಬಲಿಸಬೇಕು. ಜಾತ್ಯತೀತ ತತ್ವದ ಆಧಾರದ ಮೇಲೆ ಮತ ನೀಡುವ ಮೂಲಕ ಗೆಲುವಿಗೆ ಕಾರಣವಾಗಬೇಕು’ ಎಂದು ಕರೆ ನೀಡಿದ್ದಾರೆ.

‘ದೇಶದಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ಇಂದು ಕೋಮುವಾದದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಅಂಥ ಹೋರಾಟಗಾರರಲ್ಲಿ ಪ್ರಕಾಶ್ ರೈ ಮುಂಚೂಣಿಯಲ್ಲಿದ್ದಾರೆ. ಜಾತ್ಯತೀತ ತತ್ವದ ಉಳಿವಿಗಾಗಿ ಹಾಗೂ ಏಕತೆಗಾಗಿ ಮತದಾರರು ಅವರಿಗೆ ಮತ ಹಾಕಬೇಕು’ ಎಂದು ಹೇಳಿದ್ದಾರೆ. ಪ್ರಕಾಶ್ ರೈ ಗೆಲುವಾದರೆ ಕೋಮುವಾದದ ಸೋಲು ಕಂಡಿತವಾಗುತ್ತದೆ.

 

Click to comment

You must be logged in to post a comment Login

Leave a Reply

To Top
error: Content is protected !!
WhatsApp chat Join our WhatsApp group