ರಾಜ್ಯ ಸುದ್ದಿ

ಜನಪರ ಹೋರಾಟಗಾರ ಮಲ್ನಾಡ್ ಮೆಹಬೂಬ್ ಗಡಿಪಾರು ಆದೇಶ: ಗೃಹ ಸಚಿವರು ಮಧ್ಯೆ ಪ್ರವೇಶಿಸಿ ಮರು ಪರಿಶೀಲಿಸುವಂತೆ ಎಸ್.ಡಿ.ಪಿ.ಐ ಒತ್ತಾಯ

ವರದಿಗಾರ (ಎ.12): ಪತ್ರಕರ್ತ, ಜನಪರ ಹೋರಾಟಗಾರ, ಶೋಷಿತರ ಬಗ್ಗೆ ಅಕ್ಷರ ಸಮರದ ಮೂಲಕ ಸರಕಾರ ಮತ್ತು ಪ್ರತಿನಿಧಿಗಳನ್ನು ನಿರಂತರವಾಗಿ ಎಚ್ಚರಿಸುತ್ತಿದ್ದ ಸಾಮಾಜಿಕ ಹೋರಾಟಗಾರ ಮಲ್ನಾಡ್ ಮೆಹಬೂಬ್ ರವರ ಹೆಸರನ್ನು ಹಿಡನ್ ಅಜೆಂಡಾದಿಂದ ‘ರೌಡಿ ಪಟ್ಟಿ”ಗೆ ಸೇರಿಸಿ ಮೇ 30 ರ ವರೆಗೆ ಗಡಿಪಾರಿಗೆ ಆದೇಶ ಹೊರಡಿಸಿರುವ ಕ್ರಮವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್.ಡಿ.ಪಿ.ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಮೈಸೂರು, ಕರ್ನಾಟಕ ರಾಜ್ಯಾಧ್ಯಕ್ಷ, ದ.ಕ. ಲೋಕಸಭಾ ಕ್ಷೇತ್ರ ಎಸ್.ಡಿ.ಪಿ.ಐ ಅಭ್ಯರ್ಥಿ ಇಲ್ಯಾಸ್ ಮುಹಮ್ಮದ್ ತುಂಬೆ ತೀವ್ರವಾಗಿ ಖಂಡಿಸಿದ್ದಾರೆ.

ಗಂಭೀರವಾದ ಯಾವುದೇ ಕ್ರಿಮಿನಲ್ ಪ್ರಕರಣವನ್ನು ಹೊಂದಿರದ ಮಲ್ನಾಡ್ ಮೆಹಬೂಬ್ ರವರನ್ನು ರೌಡಿ ಶೀಟರ್ ಪಟ್ಟಿಗೆ ಸೇರ್ಪಡಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಮತ್ತು ಇದರ ಹಿಂದೆ ವ್ಯವಸ್ಥಿತ ಷಡ್ಯಂತ್ರವಿದೆ. ಇದು ಶೋಷಿತರ ಪರವಿರುವ ಧ್ವನಿಯನ್ನು ಇಲ್ಲವಾಗಿಸುವ ಪ್ರಯತ್ನವೆಂದು ಎಸ್.ಡಿ.ಪಿ.ಐ ಪ್ರತಿಕ್ರಿಯಿಸಿದೆ.

ಮಲ್ನಾಡ್ ಮೆಹಬೂಬ್ ರವರ ಪರಿಸರ ಚಳುವಳಿಗಳು, ವಿವಿಧ ಜನಪರ ಹೋರಾಟಗಳು, ಅನ್ಯಾಯದ ವಿರುದ್ಧ ಧ್ವನಿಯಾದ ಸಂದರ್ಭಗಳಲ್ಲಿ ಹೋರಾಟಗಾರರ ಮೇಲೆ ದಾಖಲಾಗುವ ಪ್ರಕರಣದಂತೆ ಮೆಹಬೂಬ್ ಅವರ ಮೇಲೂ ದಾಖಲಾಗಿದೆಯೇ ಹೊರತು ಇನ್ನಿತರ ಯಾವುದೇ ರೀತಿಯ ಕ್ರಿಮಿನಲ್ ಪ್ರಕರಣವನ್ನು ಹೊಂದಿಲ್ಲ. ದಾಖಲಾಗಿರುವ ಪ್ರಕರಣಗಳೂ ಕೂಡ ದುರುದ್ದೇಶದಿಂದಾಗಿತ್ತು ಎಂಬುವುದು ಗಮನಾರ್ಹ. ಗಡಿಪಾರು ಆದೇಶದ ಹಿಂದೆ ಕೋಮುವಾದಿ ಶಕ್ತಿಗಳ ಕೈವಾಡವಿದೆ ಎಂದು ಎಸ್.ಡಿ.ಪಿ.ಐ ಆರೋಪಿಸಿದೆ.

ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಗ್ರಹ ಸಚಿವರು ಮಧ್ಯ ಪ್ರವೇಶಿಸಿ ಪ್ರಕರಣವನ್ನು ಮರು ಪರಿಶೀಲಿಸಿ ರೌಡಿ ಶೀಟರ್ ಪಟ್ಟಿಯಿಂದ ತೆರವುಗೊಳಿಸಿ ಗಡಿಪಾರು ಆದೇಶವನ್ನು ತಕ್ಷಣವಾಗಿ ಹಿಂಪಡೆಯುವಂತೆ ಜಂಟಿ ಪತ್ರಿಕಾ ಪ್ರಕಟಣೆಯ ಮೂಲಕ ಅವರು ಸರಕಾರವನ್ನು ಒತ್ತಾಯಿಸಿದ್ದಾರೆ.

Click to comment

You must be logged in to post a comment Login

Leave a Reply

To Top
error: Content is protected !!
WhatsApp chat Join our WhatsApp group