ರಾಜ್ಯ ಸುದ್ದಿ

ಮೋದಿಯಂತಹ ರೈಲು ಬಿಡುವ ಪ್ರಧಾನಿ ದೇಶಕ್ಕೆ ಇದುವರೆಗೆ ಬಂದಿಲ್ಲ: ಕಿಮ್ಮನೆ ರತ್ನಾಕರ್

‘ಬಿಜೆಪಿಯು ಧರ್ಮ ಹಾಗೂ ಜಾತಿ ಆಧಾರದಲ್ಲಿ ರಾಜಕಾರಣ ಮಾಡುತ್ತಿದೆ’.

ವರದಿಗಾರ (ಎ.10): ‘ಭಾರತದ ಸ್ವಾತಂತ್ರ್ಯ ಬಳಿಕ ಪ್ರಧಾನಿ ನರೇಂದ್ರ ಮೋದಿಯಂತಹ ರೈಲು ಬಿಡುವ ಪ್ರಧಾನಿ ದೇಶಕ್ಕೆ ಸಿಕ್ಕಿಲ್ಲ’ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.

ಅವರು ಶಿಕಾರಿಪುರದ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಕಾಂಗ್ರೆಸ್‌– ಜೆಡಿಎಸ್‌ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

‘ನರೇಂದ್ರ ಮೋದಿ ದೇಶದ ಜನತೆಗೆ ಹಲವು ಭರವಸೆ, ಆಶ್ವಾಸನೆಗಳನ್ನು ನೀಡುವ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ. ಆದರೆ ಅಧಿಕಾರ ಸಿಕ್ಕಿದ ಬಳಿಕ ಜನರಿಗೆ ನೀಡಿದ ಭರವಸೆಗಳನ್ನು ನೀಡದೆ ವಂಚಿಸಿದ್ದಾರೆ. ರೈತರ ಜೀವನ ಮಟ್ಟ ಸುಧಾರಿಸುವ ಯೋಜನೆ ತರದೇ ರೈತರಿಗೆ ಸಬ್ಸಿಡಿಗಳನ್ನು ರದ್ದು ಮಾಡಿದ್ದಾರೆ. ರೈತರ ಪರಕರಿಗಳಿಗೆ ಹೆಚ್ಚು ತೆರಿಗೆ ವಿಧಿಸಿದ್ದಾರೆ. ರೈತರ ಸಾಲ ಮನ್ನಾ ಮಾಡಿಲ್ಲ’ ಎಂದು ಅವರು ಹೇಳಿದ್ದಾರೆ.

ಬಿಜೆಪಿ ಧರ್ಮ ಹಾಗೂ ಜಾತಿ ಆಧಾರದಲ್ಲಿ ರಾಜಕಾರಣ ಮಾಡುತ್ತಿದೆ. ಎಲ್ಲ ಜಾತಿ ಧರ್ಮವನ್ನು ಒಟ್ಟಿಗೆ ಕೊಂಡೊಯ್ಯುವ ಸಿದ್ಧಾಂತವನ್ನು ಬಿಜೆಪಿ ಹೊಂದಿಲ್ಲ. ಆದರೆ ಎಲ್ಲಾ ಧರ್ಮ ಹಾಗೂ ಜಾತಿಯ ಜನರನ್ನು ಒಟ್ಟಿಗೆ ಕೊಂಡೊಯ್ಯುವ ಕೆಲಸವನ್ನು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮಾಡುತ್ತಿವೆ. ಚುನಾವಣೆಯಲ್ಲಿ ಜನರು ಯೋಚನೆ ಮಾಡಿ ಮತ ಚಲಾಯಿಸಬೇಕು ಎಂದು ಇದೇ ಸಂದರ್ಭ ಅವರು ಕರೆ ನೀಡಿದ್ದಾರೆ.

ನಾಯಕರಾದ ಮಹದೇವಪ್ಪ, ಮರಿಯೋಜಿರಾವ್‌, ಗೋಣಿ ಮಾಲತೇಶ್‌, ಎಚ್‌.ಟಿ. ಬಳಿಗಾರ್‌, ಎಚ್‌.ಪಿ. ನರಸಿಂಗನಾಯ್ಕ, ಸೈಯದ್‌ ಹಬೀಬುಲ್ಲಾ, ಹುಲ್ಮಾರ್‌ ಮಹೇಶ್‌, ಭಂಡಾರಿ ಮಾಲತೇಶ್‌, ಬಡಗಿ ಫಾಲಾಕ್ಷ, ಉಳ್ಳಿದರ್ಶನ್‌, ರಾಘುನಾಯ್ಕ, ಜೀನಳ್ಳಿ ದೊಡ್ಡಪ್ಪ, ಇದ್ರೂಸ್‌ಸಾಬ್‌ ಮತ್ತಿತರರು ಉಪಸ್ಥಿತರಿದ್ದರು.

 

Click to comment

You must be logged in to post a comment Login

Leave a Reply

To Top
error: Content is protected !!
WhatsApp chat Join our WhatsApp group