ರಾಜ್ಯ ಸುದ್ದಿ

ಬಿಜೆಪಿ ಪ್ರಚಾರ ರ‍್ಯಾಲಿಯಲ್ಲಿ ಮೊಳಗಿದ ಕಾಂಗ್ರೆಸ್ ಘೋಷಣೆ “ಚೌಕಿದಾರ್ ಚೋರ್ ಹೈ”!

ವರದಿಗಾರ (ಎ.10): ಲೋಕಸಭಾ ಚುನಾವಣೆಯ ಸಿದ್ಧತೆಯಲ್ಲಿ ರಾಜಕೀಯ ಪಕ್ಷಗಳು ತಮ್ಮ ಪ್ರಚಾರ ಹಾಗೂ ಇತರ ಪಕ್ಷಗಳ ಅಪಪ್ರಚಾರಕ್ಕಾಗಿ ಈಗಾಗಲೇ ಹಲವು ಘೋಷಣೆಗಳೊಂದಿಗೆ ಜನರ ಮುಂದೆ ಬಂದಿವೆ.

ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷದ, ಪ್ರಧಾನಮಂತ್ರಿ ಮೋದಿ ವಿರುದ್ಧ ” ಚೌಕಿದಾರ್ ಚೋರ್ ಹೈ (ಕಾವಲುಗಾರ ಕಳ್ಳ)” ಘೋಷಣೆಯು ಸಾರ್ವಜನಿಕ ವಲಯದಲ್ಲಿ ಮೊಳಗ ತೊಡಗಿದಾಗ ಬಿಜೆಪಿಯು ” ಮೈಂ ಭೀ ಚೌಕಿದಾರ್ (ನಾನೂ ಕಾವಲುಗಾರ)” ಎಂಬ ಪ್ರಚಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

ಆದರೆ, ಕೆ ಆರ್ ಪುರ ಕ್ಷೇತ್ರದಲ್ಲಿ ಬಿಜೆಪಿ ಪ್ರಚಾರ ರ‍್ಯಾಲಿಯಲ್ಲಿ ಬಿಜೆಪಿ ನಾಯಕರ ನಿರೀಕ್ಷೆಯಂತೆ ಅಲ್ಲಿ ಸೇರಿದ್ದ ಜನರು ಸಹಕರಿಸದೆ, ಬಿಜೆಪಿಗೆ ತೀವ್ರ ಮುಜುಗರವನ್ನುಂಟು ಮಾಡಿದ್ದಾರೆ.

ಕೆ ಆರ್ ಪುರ ಕ್ಷೇತ್ರದಲ್ಲಿ ಪ್ರಚಾರಕ್ಕಾಗಿ ಬಂದಿದ್ದ ಬಿಜೆಪಿ ನಾಯಕ ಸದಾನಂದ ಗೌಡರ ಜೊತೆಯಲ್ಲಿದ್ದ ಬಿಜೆಪಿ ನಾಯಕನು ಬಿಜೆಪಿ ಘೋಷಣೆಯಂತೆ “ಮೈಂ ಭೀ” ಎನ್ನದೆ, ಕಾಂಗ್ರೆಸ್ ಘೋಷಣೆಯ ಪ್ರಕಾರ ” ಚೌಕಿದಾರ್” ಎಂದು ಘೋಷಣೆಯನ್ನು ಪ್ರಾರಂಭಿಸಿದರು. ಇದಕ್ಕೆ ಉತ್ತರವಾಗಿ ಆಲ್ಲಿ ಸೇರಿದ್ದ ಜನರು “ಚೋರ್ ಹೈ” ಎಂದು ಉತ್ತರಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವೀಡಿಯೋ ವೀಕ್ಷಿಸಿ:

ಈ ಟ್ವೀಟ್ ಬಗ್ಗೆ ಸ್ಪಷ್ಟೀಕರಣ ನೀಡದ ಸದಾನಂದ ಗೌಡರು, ಟ್ವೀಟ್ ಮಾಡಿದವನನ್ನು ಬ್ಲಾಕ್ ಮಾಡಿದ್ದಾರೆ. ನಂತರ ತಮ್ಮ ಟ್ವಿಟ್ಟರ್ ಖಾತೆಯಿಂದ ವೀಡಿಯೋ ಟ್ವೀಟ್ ಮಾಡಿದ ಸದಾನಂದ ಗೌಡರು, “ಬಿಜೆಪಿ ಪ್ರಚಾರದಲ್ಲಿ ಘೋಷಣೆ ಮೋಳಗಿಸಲು ಕಾಂಗ್ರೆಸ್ ನ ಸ್ಥಳೀಯ ಕಾರ್ಪೊರೇಟರ್ ನಿಂದ ವಿಫಲ ಪ್ರಯತ್ನ” ಎಂದು ತಿಳಿಸಿದ್ದಾರೆ. ಇದೀಗ ಅವರು ತನ್ನ ಟ್ವೀಟ್ ಡಿಲೀಟ್ ಮಾಡಿದ್ದಾರೆ.

ಒಟ್ಟಿನಲ್ಲಿ, ಹಿಂದಿ ಭಾಷೆಯಲ್ಲಿರುವ ರಾಜಕೀಯ ಘೋಷಣೆಗಳ ನಡುವೆ ದಕ್ಷಿಣ ಭಾರತೀಯರು ಗೊಂದಲಕ್ಕೀಡಾಗಿರುವುದು ಈ ವೀಡಿಯೋಗಳಲ್ಲಿ ಸ್ಪಷ್ಟವಾಗಿದೆ.

Click to comment

You must be logged in to post a comment Login

Leave a Reply

To Top
error: Content is protected !!
WhatsApp chat Join our WhatsApp group