ರಾಷ್ಟ್ರೀಯ ಸುದ್ದಿ

‘ನೇರಾನೇರ ಚರ್ಚೆಗೆ ಹೆದರುತ್ತಿರುವ ಪ್ರಧಾನಿ ಮೋದಿ ಒಬ್ಬ ಕಳ್ಳ ಮತ್ತು ಹೇಡಿ’: ರಾಹುಲ್‌ ಗಾಂಧಿ

ವರದಿಗಾರ (ಎ.10): ‘ಪ್ರಮುಖ ವಿರೋಧ ಪಕ್ಷದ ನಾಯಕನ ಜೊತೆ ನೇರಾನೇರ ಚರ್ಚೆ ನಡೆಸಲು ಹಿಂಜರಿಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಒಬ್ಬ ಕಳ್ಳ ಮತ್ತು ಹೇಡಿ’ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಅವರು ಅಸ್ಸಾಂ ನಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡುತ್ತಾ, ‘ಭ್ರಷ್ಟಾಚಾರದ ಬಗ್ಗೆ ನನ್ನ ಜೊತೆ ಚರ್ಚೆಗೆ ಬಾ ಎಂದು ಚೌಕೀದಾರನನ್ನು ಆಹ್ವಾನಿಸಿದ್ದೆ. ಆದರೆ ನನ್ನನ್ನು ಎದುರಿಸುವ ಧೈರ್ಯವಿಲ್ಲದೆ ಆತ ಓಡಿ ಹೋಗಿದ್ದಾನೆ. ಚೌಕೀದಾರ ಕಳ್ಳನಷ್ಟೇ ಅಲ್ಲ ಹೇಡಿಯೂ ಹೌದು’ ಎಂದು ರಾಹುಲ್ ಹೇಳಿರುವುದು ಸದ್ಯ ಚರ್ಚೆಗೆ ಗ್ರಾಸವಾಗಿದೆ.

‘ಅವರು ಚರ್ಚೆಗೆ ಬಂದರೆ, ರಫೇಲ್‌ ವಿಮಾನದ ಬೆಲೆ ₹ 526 ಕೋಟಿಯಿಂದ ₹ 1,600 ಕೋಟಿಗೆ ಏರಿಕೆ ಆಗಿದ್ದೇಕೆ, ₹ 30 ಸಾವಿರ ಕೋಟಿಯನ್ನು ಅನಿಲ್‌ ಅಂಬಾನಿಗೆ ಕೊಟ್ಟಿದ್ದೇಕೆ ಎಂದು ನಾನು ಪ್ರಶ್ನಿಸುತ್ತೇನೆ. ಅದಕ್ಕಾಗಿಯೇ ಅವರು ಓಡಿಹೋಗುತ್ತಿದ್ದಾರೆ’ ಎಂದಿದ್ದಾರೆ.

‘ಮೋದಿ ಸರ್ಕಾರ ದೇಶದ 15 ಶ್ರೀಮಂತರಿಗೆ ಮಾತ್ರ ಹಣ ಕೊಟ್ಟಿದೆ. ಮಾಧ್ಯಮಗಳಲ್ಲಿ ಆ ಸುದ್ದಿಯೇ ಬರುತ್ತಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬಡವರಿಗೆ ಹಣ ಸಂದಾಯವಾಗುವ ಸುದ್ದಿಗಳು ಮಾತ್ರ ಬರಲಿವೆ. ನಾವು ಅಧಿಕಾರಕ್ಕೆ ಬಂದರೆ ಹಣದ ತಿಜೋರಿಯ ಕೀಲಿಯನ್ನು ಅನಿಲ್‌ ಅಂಬಾನಿ ಕೈಯಿಂದ ಕಸಿದುಕೊಂಡು ಯುವಕರ ಕೈಗೆ ಕೊಡುತ್ತೇವೆ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

Click to comment

You must be logged in to post a comment Login

Leave a Reply

To Top
error: Content is protected !!
WhatsApp chat Join our WhatsApp group