ಜಿಲ್ಲಾ ಸುದ್ದಿ

 ಅನ್ಯಾಯದ ವಿರುದ್ಧ ಸೆಟೆದು ನಿಲ್ಲುವ ನೌಶಾದ್ ಕಾಂಶಿಜಿಯಂತಹ ನ್ಯಾಯವಾದಿಗಳ ಅಗತ್ಯತೆ ಈ ಸಮಾಜಕ್ಕಿದೆ: ಕ್ಯಾಂಪಸ್ ಫ್ರಂಟ್

ಕ್ಯಾಂಪಸ್ ಫ್ರಂಟ್ ನಿಂದ  ಖ್ಯಾತ ನ್ಯಾಯವಾದಿ ನೌಶಾದ್ ಕಾಶಿಂಜಿ ನೆನಪಿನೊಂದಿಗೆ ಕಾನೂನು ವಿದ್ಯಾರ್ಥಿಗಳೊಂದಿಗೆ ಸಂವಾದ

ವರದಿಗಾರ (ಎ.10): ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ‘ಅನ್ಯಾಯದ ದಶಕಗಳು’ ಎಂಬ ಘೋಷಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಖ್ಯಾತ ನ್ಯಾಯವಾದಿಯಾಗಿದ್ದ  ಶಹೀದ್ ನೌಶಾದ್ ಕಾಶಿಂಜಿ ಯವರ ನೆನಪಿನೊಂದಿಗೆ ಇಲ್ಲಿನ ಕಾನೂನು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಮಂಗಳೂರಿನ ಸಹೋದಯ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಕಾಶಿಂಜಿ ಅವರ ಪತ್ನಿ ನ್ಯಾ ನುಸ್ರತ್ ಕಾಶಿಂ ಅವರು ಕಾಶಿಂಜಿ ಅವರ ಜೀವನ ಶೈಲಿ, ಹೋರಾಟ ಮನೋಭಾವ ಮತ್ತು ಅವರ ಪ್ರಕರಣದಲ್ಲಿ ಇಲಾಖೆಯ ವೈಫಲ್ಯ ಕುರಿತು ವಿವರಿಸಿದರು. ಅವರು ತಮ್ಮ ಕಕ್ಷಿದಾರರಲ್ಲಿ ಯಾವುದೇ ತಾರತಮ್ಯ ನೀತಿಯಿಂದ  ನೋಡದೆ ಪ್ರತಿಯೊಬ್ಬನಿಗೂ ನ್ಯಾಯ ದೊರಕಿಸಿ ಕೊಡಬೇಕೆಂಬ ಪ್ರಾಮಾಣಿಕ ಉದ್ದೇಶದಿಂದ ಯಾರಿಗೂ ಎದೆಗುಂದದೆ ಹೋರಾಡಿದ್ದು, ಅವರ ವ್ಯಕ್ತಿತ್ವ ಮುಂಬರುವ ಎಲ್ಲಾ ನ್ಯಾಯವಾದಿಗಳಿಗೂ ಮಾದರಿ ಎಂದು ಸಂದರ್ಭೋಚಿತವಾಗಿ ಹೇಳಿದರು.

ಕ್ಯಾಂಪಸ್ ಫ್ರಂಟ್ ರಾಜ್ಯಾಧ್ಯಕ್ಷರಾದ ಫಯಾಝ್ ದೊಡ್ಡಮನೆ ಮಾತನಾಡಿ, ಈ ಮಾರ್ಗದಲ್ಲಿ ಸಾಗುವವರು ಮುಖ್ಯವಾಗಿ ನ್ಯಾಯ, ಸತ್ಯ ಹಾಗು ನೈತಿಕತೆಗೆ ಬದ್ಧರಾಗಿ ನೌಶಾದ್ ಕಾಶಿಂಜಿ ಅವರಂತಹ ಪ್ರಾಮಾಣಿಕ, ನಿಷ್ಕಲಂಕ ಮತ್ತು ಎಲ್ಲರಿಗೂ ಸಮಾನ ನ್ಯಾಯವನ್ನು ದೊರಕಿಸಿಕೊಡುವಂತಹ ಸದುದ್ದೇಶಗಳಿಂದ ಮುಂದೆ ಬರಬೇಕಾಗಿದೆ ಎಂದು ಹೇಳಿದ್ದಾರೆ.

ಮೋದಿ ಆಡಳಿತ ಅವಧಿಯ ವೈಫಲ್ಯಗಳ ಕುರಿತು ಕ್ಯಾಂಪಸ್ ಫ್ರಂಟ್ ರಚಿಸಿದ ‘ಜುಮ್ಲಾ ರಿಪಬ್ಲಿಕ್’ ಡಾಕ್ಯುಮೆಂಟ್ ಪ್ರತಿಯನ್ನು ಅಡ್ವೊಕೇಟ್ ನುಸ್ರತ್ ಕಾಸಿಂ ಅವರಿಗೆ ಹಸ್ತಾಂತರಿಸಲಾಯಿತು.

ಕಾನೂನು ವಿದ್ಯಾರ್ಥಿ, ಜಿಲ್ಲಾ ಸಮಿತಿ ಮಾಧ್ಯಮ ವಕ್ತಾರ ತಾಜುದ್ದೀನ್ ಪುಂಜಾಲಕಟ್ಟೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Click to comment

You must be logged in to post a comment Login

Leave a Reply

To Top
error: Content is protected !!
WhatsApp chat Join our WhatsApp group