ರಾಷ್ಟ್ರೀಯ ಸುದ್ದಿ

“ವೆಬ್ ಡಿಸೈನ್ ಕಳ್ಳತನ ಮಾಡಿದ ಚೌಕಿದಾರನ ಪಕ್ಷ” : ವೆಬ್ ಡಿಸೈನ್ ಸಂಸ್ಥೆಯಿಂದ ಬಿಜೆಪಿ ವಿರುದ್ಧ ಗಂಭೀರ ಆರೋಪ

ವರದಿಗಾರ (26-03-2019): ಕಳೆದ ತಿಂಗಳು ಹ್ಯಾಕ್ ಆಗಿದ್ದ ನಂತರ ಸುಮಾರು ಒಂದು ತಿಂಗಳವರೆಗೆ ತೆರೆಗೆ ಬರದ ಬಿಜೆಪಿಯ ಅಧಿಕೃತ ವೆಬ್ ಸೈಟ್ ವಿವಾದಗಳೊಂದಿಗೆ ಮತ್ತೆ ಪ್ರಾರಂಭವಾಗಿದೆ.

ಇದೀಗ ಆಂಧ್ರಪ್ರದೇಶದ ವೆಬ್ ಡಿಸೈನ್ ಸಂಸ್ಥೆಯೊಂದು ಬಿಜೆಪಿಯ ವಿರುದ್ಧ ವೆಬ್ ಡಿಸೈನ್ ಕಳ್ಳತನದ ಆರೋಪ ಮಾಡಿದೆ. ‘W3Layouts’ ಎಂಬ ಸಂಸ್ಥೆಯ ವೆಬ್ ಡಿಸೈನ್ , ಕೃಪೆ ಸಲ್ಲಿಸದೆ ಉಪಯೋಗಿಸದ ಕಾರಣ ಬಿಜೆಪಿಯು ಮುಜುಗರಕ್ಕೀಡಾಗಿದೆ. ಬಿಜೆಪಿ ಉಪಯೋಗಿಸಿದ ಡಿಸೈನ್ ಉಚಿತವಾಗಿದ್ದರೂ, ಸಂಸ್ಥೆಯ ಷರತ್ತಿನ ಪ್ರಕಾರ, ಡಿಸೈನ್ ಉಪಯೋಗಿಸಬೇಕಾಗರೆ, ವಿನ್ಯಾಸಗಾರರ ಮಾಹಿತಿಯನ್ನು ತಮ್ಮ ವೆಬ್ ಸೈಟಿನಲ್ಲಿ ಪ್ರಕಟಿಸಬೇಕು. ಆದರೆ, ಬಿಜೆಪಿ , ಉಚಿತವಾಗಿರುವ ವೆಬ್ ಡಿಸೈನ್ ಉಪಯೋಗಿಸಿದರೂ, ಅದರಲ್ಲಿರುವ ವಿನ್ಯಾಸಗಾರರ ಮಾಹಿತಿಯನ್ನು ತೆಗೆದು ಹಾಕಿತ್ತು.

ಮೊದಲು, ಬಿಜೆಪಿಯು ತಮ್ಮ ವಿನ್ಯಾಸವನ್ನು ಉಪಯೋಗಿಸುತ್ತಿರುವುದು ಕಂಡು ಖುಷಿಪಟ್ಟ ಸಂಸ್ಥೆಯು, ನಂತರ ಅದರಲ್ಲಿರುವ ವಿನ್ಯಾಸಗಾರರ ಮಾಹಿತಿಯನ್ನು ಪ್ರಕಟಿಸದಿರುವುದನ್ನು ಕಂಡು ” ಚೌಕಿದಾರನ ಪಕ್ಷವು ನಮ್ಮ ವಿನ್ಯಾಸವನ್ನು ಕಳ್ಳತನ ಮಾಡಿದೆ” ಎಂದು ಆರೋಪಿಸಿದೆ.

To Top
error: Content is protected !!
WhatsApp chat Join our WhatsApp group