ರಾಷ್ಟ್ರೀಯ ಸುದ್ದಿ

ಮೋದಿ ಭಾಷಣವನ್ನು ಕೇಳಿದರೆ, ಅವರೇ ಹೋಗಿ ಗಡಿಯಲ್ಲಿ ಯುದ್ಧ ಮಾಡಿದಂತಿದೆ: ಕೇರಳ ಸಚಿವ

‘ಗುಜರಾತ್ ಹಿಂಸಾಚಾರಕ್ಕೆ ನೇತೃತ್ವ ನೀಡಿದ್ದಕ್ಕಾಗಿ ಆರೆಸ್ಸೆಸ್ ಮೋದಿಯನ್ನು ಪ್ರಧಾನ ಮಂತ್ರಿಯಾಗಿ ಮತ್ತು ಅಮಿತ್ ಶಾ ಅವರನ್ನು ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಿದೆ’

ವರದಿಗಾರ (ಮಾ.19): ದೇಶ ರಕ್ಷಣೆಯ ವಿಷಯವನ್ನು ಹೇಳಿ ಮತ ಯಾಚಿಸುತ್ತಿರುವ ಮೋದಿಯ ಭಾಷಣ ಕೇಳಿದರೆ, ಅವರೇ ಹೋಗಿ ದೇಶದ ಗಡಿಯಲ್ಲಿ ಯುದ್ಧ ಮಾಡುತ್ತಾರೆ ಎಂಬಂತಿರುತ್ತದೆ ಎಂದು ಕೇರಳದ ಸಚಿವ ಎಂ.ಎಂ. ಮಾಣಿ ಯವರು ಪ್ರಧಾನಿ ನರೇಂದ್ರ ಮೋದಿಯನ್ನು ಅಣಕಿಸಿ ವ್ಯಂಗ್ಯವಾಡಿದ್ದಾರೆ.

ಅವರು ಇಡುಕ್ಕಿಯ ಉಡುಂಬನ್‍ಚೋಲಾ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ದೇಶದ ಹೆಮ್ಮೆಯ ಯೋಧರು ತಮ್ಮ ಜೀವನವನ್ನು ಮುಡಿಪಾಗಿಟ್ಟು ನಮ್ಮ ದೇಶ ಕಾಯುತ್ತಾರೆ. ಅವರು ಗಡಿಯಲ್ಲಿ ಹೋರಾಡುತ್ತಿರುವುದು ದೇಶದಲ್ಲಿರುವ ಜನರ ಸುರಕ್ಷೆಗಾಗಿದೆ. ಭಯೋತ್ಪಾದನೆ ವಿರುದ್ಧ ಹೋರಾಡುವ ಯೋಧರು ಬಿಜೆಪಿ ಮತ್ತು ನರೇಂದ್ರ ಮೋದಿ ಪರ ಹೋರಾಡುತ್ತಾರೆ ಎಂಬ ರೀತಿಯಲ್ಲಿ ಪ್ರಚಾರ ಮಾಡಲಾಗುತ್ತದೆ ಎಂದಿರುವ ಯೋಧರನ್ನು ಬಳಸಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವ ಬಿಜೆಪಿ ನಡೆಯ ವಿರುದ್ಧ ಕಿಡಿಕಾರಿದ್ದಾರೆ.

‘ಗುಜರಾತ್ ಹಿಂಸಾಚಾರಕ್ಕೆ ನೇತೃತ್ವ ನೀಡಿದ್ದಕ್ಕಾಗಿ ಆರೆಸ್ಸೆಸ್ ಮೋದಿಯನ್ನು ಪ್ರಧಾನ ಮಂತ್ರಿಯಾಗಿ ಮತ್ತು ಅಮಿತ್ ಶಾ ಅವರನ್ನು ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಿದೆ’ ಎಂದು ಮಾಣಿ ಹೇಳಿರುವುದಾಗಿ ಮೂಲಗಳು ವರದಿ ಮಾಡಿವೆ.

To Top
error: Content is protected !!
WhatsApp chat Join our WhatsApp group