ಸಾಮಾಜಿಕ ತಾಣ

‘ದೇಶಕ್ಕೆ ಸಮರ್ಥ ಪ್ರಧಾನಿ ಬೇಕಾಗಿದೆ, ಚೌಕೀದಾರನಲ್ಲ ; ಚೌಕೀದಾರ್ ಬೇಕಿದ್ದರೆ ನೇಪಾಳದಿಂದ ತರಿಸೋಣ’ : ಟಿವಿ ಶೋನಲ್ಲಿ ವೈರಲ್ ಆಯ್ತು ಯುವಕನ ಮಾತುಗಳು

ವರದಿಗಾರ (ಮಾ.19): ಟ್ವಿಟರ್ ನಲ್ಲಿ ಪ್ರಧಾನಿ ನರೇಂದ್ರಮೋದಿ ಆರಂಭಿಸಿರುವ ‘ಮೈನ್ ಭಿ ಚೌಕಿದಾರ್’ ಹ್ಯಾಶ್ ಟ್ಯಾಗ್ ಅಭಿಯಾನವನ್ನು ಟಿವಿ ವಾಹಿನಿಯ ಸಂವಾದ ಕಾರ್ಯಕ್ರಮವೊಂದರಲ್ಲಿ ಯುವಕನೊಬ್ಬನ ಪ್ರಬುದ್ಧ ಹೇಳಿಕೆ ಮತ್ತು ದೇಶಕ್ಕೆ ಸಮರ್ಥ ಪ್ರಧಾನಿ ಬೇಕು, ಚೌಕೀದಾರ ಅಲ್ಲ ಎಂಬ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲಾಗುತ್ತಿದೆ.

ಆಜ್ ತಕ್ ಚಾನೆಲ್ ನ ‘ಟಕ್ಕರ್ ಎನ್ನುವ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿರುವ ಯುವಕನ ವೀಡಿಯೋ ಸದ್ಯ ಸಾಮಾಜಿಕ ತಾಣದಲ್ಲಿ ಅತ್ಯಂತ ವೇಗದಲ್ಲಿ ಹರಿದಾಡುತ್ತಿದ್ದು, ಪ್ರಧಾನಿ ಮೋದಿಯವರು ಪ್ರಾರಂಭಿಸಿರುವ ‘ಮೈನ್ ಭಿ ಚೌಕಿದಾರ್’ ಎಂಬ ಟ್ವಿಟ್ಟರ್ ಹ್ಯಾಶ್ ಗ್ ಪ್ರತಿಕ್ರಿಯೆಯಾಗಿ ಈ ವೀಡಿಯೋವನ್ನು ಬಳಸಲಾಗುತ್ತಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಜೆಪಿ ವಕ್ತಾರರನ್ನುದ್ದೇಶಿಸಿ ಮಾತನಾಡಿದ ಯುವಕ, “ಒಂದು ಬಾರಿ ನೀವು ಯುವಕರು ಪಕೋಡ ಮಾರುವಂತೆ ಹೇಳುತ್ತೀರಿ, ಉಳಿದ ಸಮಯಗಳಲ್ಲಿ ನೀವು ‘ಚೌಕೀದಾರ್’ ಬಗ್ಗೆ ಮಾತನಾಡುತ್ತೀರಿ. ನಮಗೆ ಚೌಕೀದಾರ್ ಬೇಕಾದರೆ ಕಡಿಮೆ ಬೆಲೆಗೆ ನೇಪಾಳದಿಂದ ಸಿಗುತ್ತಾರೆ.  ದೇಶಕ್ಕೆ ಸಮರ್ಥ ಪ್ರಧಾನಿ ಬೇಕಾಗಿದೆಯೇ ಹೊರತು, ಚೌಕೀದಾರನಲ್ಲ” ಎಂದು ಹೇಳಿದ್ದಾನೆ.

ಅದೇ ವೇಳೆ ಪ್ರಧಾನಿ ಮೋದಿಯವರ ಹಳೇ ಟ್ವೀಟ್‍ನ್ನು ಉಲ್ಲೇಖಿಸಿ ಮಾತನಾಡಿದ ಆ ಯುವಕ ಕಳೆದ 70 ವರ್ಷಗಳಲ್ಲಿ ಭಾರತ ಏನೂ ಸಾಧನೆ ಮಾಡಿಲ್ಲ ಎಂದು ನೀವು ಹೇಳುತ್ತಿದ್ದೀರಿ.  2014ರಕ್ಕಿಂತ ಮುಂಚೆ ಈ ದೇಶ ಹಾವಾಡಿಗರ ದೇಶವಾಗಿತ್ತು ಎಂದು ಪ್ರಧಾನಿ ಹೇಳಿದ್ದರು. ಆದರೆ ಪ್ರಧಾನಿ ಹುಟ್ಟುವ  ಮುಂಚೆಯೇ ಇಲ್ಲಿ ಹೋಮಿ ಬಾಬಾ ಸೆಂಟರ್ ಫಾರ್ ಸಯನ್ಸ್ ಎಡ್ಯುಕೇಶನ್ ಇದೆ. ಮೋದಿಯವರು ಗಿಲ್ಲಿ ದಂಡಾ (ಚಿನ್ನಿ ದಾಂಡು) ಆಡುವ ಹುಡುಗನಾಗಿದ್ದಾಗ ಭಾರತದಲ್ಲಿ  ಬಕ್ರಾ ನಂಗಲ್ ಅಣೆಕಟ್ಟು ನಿರ್ಮಾಣವಾಗಿತ್ತು ಎಂದ ಯುವಕ ನ ಹೇಳಿಕೆಯು ಸದ್ಯ ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ.

ವೀಡಿಯೋ ವೀಕ್ಷಿಸಿ:

 

To Top
error: Content is protected !!
WhatsApp chat Join our WhatsApp group