ಸಾಮಾಜಿಕ ತಾಣ

‘ಕರ್ನಾಟಕದ ಜನತೆ, ದಯವಿಟ್ಟು ಈ ಸಲ ಮೋದಿ, ಬಿಜೆಪಿಗೆ ಮತ ನೀಡಬೇಡಿ’: ಮಾಜಿ ಸೈನಿಕನಿಂದ ಮನವಿ

ವರದಿಗಾರ (ಮಾ.17): 2019ರ ಲೋಕಸಭಾ ಚುನಾವಣೆಯಲ್ಲಿ ದಯವಿಟ್ಟು ಬಿಜೆಪಿಗೆ, ಪ್ರಧಾನಿ ನರೇಂದ್ರ ಮೋದಿಗೆ ಮತ ಚಲಾಯಿಸಬೇಡಿ ಎಂದು ಮಾಜಿ ಸೈನಿಕರೊಬ್ಬರು ರಾಜ್ಯದ ಮಾಧ್ಯಮವೊಂದರ ಮೂಲಕ ಕರ್ನಾಟಕದ ಜನತೆಯನ್ನು ವಿನಂತಿಸಿಕೊಂಡಿರುವ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತದೆ.

ಮಾಧ್ಯಮದೊಂದಿಗೆ ಮಾತನಾಡುತ್ತಾ, ‘ದೆಹಲಿಯಲ್ಲಿ ಕೂತಿರುತ್ತಾರಲ್ಲ ಅವರಿಗೆ ಡ್ಯೂಟಿ ನಮಗಲ್ಲ. ಅಷ್ಟೂ ಮನಸ್ಸಿಗೆ ಬೇಜರಾಗಿ ಬಿಟ್ಟಿದೆ. ಟಿವಿಯಲ್ಲಿ ನೋಡ್ತಿದ್ದೆ ಹಾಗೆ ಇಲ್ಲಿಗೆ ಬಂದು ನನ್ನ ಮಾತು ಹೇಳಬೇಕೆಂದೇ ಬಂದಿದ್ದೀನಿ. ನಮಗೆ ಎಷ್ಟು ಹೊಟ್ಟೆ ಉರಿಯುತ್ತದೆ’ ಎಂದು ವರದಿಗಾರರನ್ನು ಮಾಜಿ ಸೈನಿಕ ಪ್ರಶ್ನಿಸಿದ್ದಾರೆ.

‘ಮೋದಿಯವರು ಏನು ಮಾಡಿದ್ದಾರೆ? ಯುದ್ಧದಲ್ಲಿ ಎಷ್ಟೋ ಜನ ಸತ್ತು ಹೋದರು. ನಾನು ಮಾಡಿಸಿದೆ. ನಮ್ಮವರು ಮಾಡಿದರು. ಆರೆಸ್ಸೆಸ್ ನವರು ಮಾಡಿದರು ಎಂದು ಹೇಳುತ್ತಿದ್ದಾರೆ. ವಾರ್ ಮಾಡಿದವರು ನಾನು. ನಾನು ಮಾಜಿ ಸೈನಿಕ. ನಾನು ಯುದ್ಧದಿಂದಲೇ ಈಚೆ ಬಂದವನು. ಆದರೆ ಮೋದಿ ನಾವು ಮಾದಿಡ್ದು, ನಮ್ಮವರು, ನಮ್ಮ ಯುವಕರು ಮಾಡಿದ್ದು ಎಂದು ಕೊಚ್ಚಿಕೊಳ್ಳುತ್ತಿದ್ದಾರೆ. ಯಾವ ಯುವಕರು ಮಾಡಿದವರು ತೋರಿಸಿ’ ಎಂದು ಅವರು ಸವಾಲು ಹಾಕಿದ್ದಾರೆ.

‘ಮೊನ್ನೆ ಮಂಡ್ಯದಲ್ಲಿ ಸತ್ತರಲ್ವಾ, ಅವರಿಗೆ ಮೋದಿ ಬಂದು ಏನು ಮಾಡಿದ್ದಾರೆ? ಏನಾದರೂ ಪರಿಹಾರ ಕೊಟ್ಟಿದ್ದಾರಾ? ಕರ್ನಾಟಕದಲ್ಲಿ ಮೋದಿಯ ನಡೆ ಎಲ್ಲರಿಗೂ ಬೇಜರಾಗಿ ಬಿಟ್ಟಿದೆ. ಹಾಗಾಗಿ ಈ ಸಲ ದಯವಿಟ್ಟು ಸಾರ್ವಜನಿಕರೊಂದಿಗೆ ಕೈ ಮುಗಿದು ಕೇಳ್ಕೊಳ್ತೇನೆ. ಈ ಸಲ ಬಿಜೆಪಿಗೆ ಯಾರೂ ಮತ ನೀಡಬೇಡಿ. ಇತರ ಬೇರೆ ಪಕ್ಷಗಳಿಗೆ ಹಾಕಿ. ಅದು ಯಾವುದೇ ಆಗಿರಲಿ. ಮೋದಿಗೆ ಯಾರೂ ಮತ ಹಾಕಬೇಡಿ ಎಂದು ನಾನು ಕೈ ಮುಗಿಯುತ್ತಾ ಇದ್ದೇನೆ’ ಎಂದು ಹೇಳಿರುವ ವೀಡಿಯೋ ಸಕತ್ತಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಮಾಜಿ ಸೈನಿಕರು ಮಾಧ್ಯಮದೊಂದಿಗೆ ಮಾತನಾಡುತ್ತಿರುವ ವೀಡಿಯೋ ವೀಕ್ಷಿಸಿ:

To Top
error: Content is protected !!
WhatsApp chat Join our WhatsApp group