ರಾಷ್ಟ್ರೀಯ ಸುದ್ದಿ

2024ರಲ್ಲಿ ಮೋದಿ ಸುನಾಮಿಯಿಂದ ಚುನಾವಣೆಯೇ ಇಲ್ಲ: ಬಿಜೆಪಿಯ ಸಾಕ್ಷಿ ಮಹಾರಾಜ್

ವರದಿಗಾರ (ಮಾ.17): 2019ರ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರದ ಹೆಸರಿನಲ್ಲಿ ಹೋರಾಡುತ್ತೇವೆ, 2024ರಲ್ಲಿ ಚುನಾವಣೆಗಳೇ ಇರುವುದಿಲ್ಲವೆಂದು ಬಿಜೆಪಿ ಸಂಸದ, ಅಸಹ್ಯ ಮತ್ತು ವಿವಾದಾತ್ಮಕ ಹೇಳಿಕೆಯಿಂದ ಮಾತ್ರ ಸಮಾಜಕ್ಕೆ ಗುರುತಿಸಲ್ಪಟ್ಟಿಸುವ ಸಾಕ್ಷಿ ಮಹಾರಾಜ್ ತನ್ನ ಅಧಿಕ ಪ್ರಸಂಗಿತನವನ್ನು ಪ್ರದರ್ಶಿಸಿಕೊಂಡಿದ್ದಾರೆ. ಈ ಹೇಳಿಕೆಯೂ ಸಂವಿಧಾನದ ಆಶಯ ಆದರ್ಶಗಳ ವಿರುದ್ಧವಾಗಿದೆ.

ಅವರು ಪಕ್ಷದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ, ‘ಮೋದಿ ಸುನಾಮಿ ದೇಶವನ್ನು ಜಾಗೃತಗೊಳಿಸಿದೆ. 2024ರಲ್ಲಿ ಚುನಾವಣೆಯೇ ಇರುವುದಿಲ್ಲ ಎನ್ನುವುದು ನನ್ನ ಭಾವನೆ.. ಇದು ಕಟ್ಟಕಡೆಯ ಚುನಾವಣೆ, ಇದರಲ್ಲಿ ನಾವು ಪೂರ್ಣ ಪ್ರಾಮಾಣಿಕತೆಯಿಂದ ದೇಶದ ಹೆಸರಿನಲ್ಲಿ ಹೋರಾಡುತ್ತೇವೆ’ ಎಂದು ಬಿಜೆಪಿಯ ಪ್ರಾಮಾಣಿಕತೆಯ ಬಗ್ಗೆ ಜಂಬ ಕೊಚ್ಚಿಕೊಂಡಿದ್ದಾರೆ.

“2014ರ ಮೋದಿ ಅಲೆ ಇದೀಗ 2019ರಲ್ಲಿ ಸುನಾಮಿಯಾಗಿ ಮಾರ್ಪಟ್ಟಿದೆ. ಅವರು ಮತ್ತೆ ಪ್ರಧಾನಿಯಾಗುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಹಿಂದಿಗಿಂತಲೂ ಉತ್ತಮ ಫಲಿತಾಂಶ ಬರುತ್ತದೆ ಎಂಬ ನಿರೀಕ್ಷೆ ನಮ್ಮದು” ಎಂದು ಹೇಳಿದ್ದಾರೆ.

“ಕೆಲವರು ಎಲ್ಲ ಬಗೆಯ ಕಸರತ್ತೂ ಮಾಡುತ್ತಿದ್ದಾರೆ. ಪ್ರಿಯಾಂಕಾ ಅವರನ್ನು ರಾಜಕೀಯಕ್ಕೆ ತಂದರು, ಮೈತ್ರಿ ಮಾಡಿಕೊಂಡರು, ಆದರೆ ಮೋದಿಯೇ ನಮ್ಮ ನಾಯಕ. ಮೋದಿ ಇದ್ದರಷ್ಟೇ ದೇಶ ಇರುತ್ತದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಈ ಪಕ್ಷ ಯಾರ ಹೆಸರಿನ ಅಥವಾ ಪಕ್ಷದ ಆಧಾರದಲ್ಲಿ ನಡೆಯುವುದಿಲ್ಲ. ಇದು ದೇಶದ ಹೆಸರಿನಲ್ಲಿ ನಡೆಯುತ್ತದೆ ಎಂದು ಸಾಕ್ಷಿ ಮಹಾರಾಜ್ ಹೇಳಿರುವುದಾಗಿ ಮೂಲಗಳು ವರದಿ ಮಾಡಿವೆ.

To Top
error: Content is protected !!
WhatsApp chat Join our WhatsApp group