ರಾಷ್ಟ್ರೀಯ ಸುದ್ದಿ

‘ಬಿಜೆಪಿಯು ಒಂದು ಮಾರ್ಕೆಟಿಂಗ್ ಕಂಪೆನಿಯಂತಾಗಿದೆ, ನಾಯಕರು ಸರ್ವಾಧಿಕಾರಿಯಾಗಿದ್ದಾರೆ’: ಬಿಜೆಪಿ ನಾಯಕಿ ರೇಷ್ಮಾ ಪಟೇಲ್

ಪಕ್ಷದ ನಡವಳಿಕೆಯಿಂದ ಬೇಸತ್ತು ರಾಜೀನಾಮೆ ನೀಡಿದ ಬಿಜೆಪಿ ನಾಯಕಿ

ವರದಿಗಾರ (ಮಾ.16): ಭಾರತೀಯ ಜನತಾ ಪಕ್ಷವು ಒಂದು ಮಾರ್ಕೆಟಿಂಗ್ ಕಂಪೆನಿಯಂತಾಗಿದೆ, ಬಿಜೆಪಿಯ ನಾಯಕರು ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ ಎಂದು ಗುಜರಾತ್ ನ ಬಿಜೆಪಿ ನಾಯಕಿ ರೇಷ್ಮಾ ಪಟೇಲ್ ಹೇಳಿಕೆ ನೀಡಿದ್ದು, ಪಕ್ಷದ ನಡವಳಿಕೆಯಿಂದ ಬೇಸತ್ತು ಬಿಜೆಪಿಗೆ ಅವರು ರಾಜೀನಾಮೆ ನೀಡಿದ್ದಾರೆ.

ಪಾಟಿದಾರ್ ಮೀಸಲಾತಿ ಹೋರಾಟದಲ್ಲಿ ಗುರುತಿಸಿಕೊಂಡಿದ್ದ ರೇಷ್ಮಾ ಪಟೇಲ್ ಪಕ್ಷದ ನಡವಳಿಕೆಯಿಂದ ಬೇಸತ್ತು ಬಿಜೆಪಿಗೆ ಅವರು ರಾಜೀನಾಮೆ ನೀಡಿದ್ದಾರೆ.

ಪಾಟಿದಾರ್ ನಾಯಕ ಹಾರ್ದಿಕ್ ಪಟೇಲ್ ರವರೊಂದಿಗೆ ಮೀಸಲಾತಿ ಹೋರಾಟದಲ್ಲಿ ಗುರುತಿಸಿದ್ದ ರೇಷ್ಮಾ ಪಟೇಲ್ ಬಳಿಕ ಹೋರಾಟಕ್ಕೆ ಗುಡ್ ಬೈ ಹೇಳಿ  ಕಳೆದ ಗುಜರಾತ್ ವಿಧಾನಸಭಾ ಚುನಾವಣೆ ಸಂದರ್ಭ ಬಿಜೆಪಿಯ ಕೈ ಹಿಡಿದಿದ್ದರು.

‘ಬಿಜೆಪಿಯು ಒಂದು ಮಾರ್ಕೆಟಿಂಗ್ ಕಂಪೆನಿಯಂತಾಗಿದೆ. ಬಿಜೆಪಿಯು ದೊಡ್ಡ ದೊಡ್ಡ ಆಶ್ವಾಸನೆಗಳನ್ನು ಹಾಗೂ ವಿವಿಧ ಯೋಜನೆಗಳ ಬಗ್ಗೆ ಮಾತನಾಡುತ್ತದೆ. ಆದರೆ ಯಾವುದನ್ನೂ ಜಾರಿಗೆ ತರುವುದಿಲ್ಲ. ಪಕ್ಷದ ನಾಯಕರು ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ’ ಎಂದು ಅವರು ಹೇಳಿಕೊಂಡಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಗುಜರಾತ್ ನ ಪೋರಬಂದರ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಅವರು ಹೇಳಿದ್ದಾರೆ. ಈ ಬಗ್ಗೆ ಕೆಲವು ರಾಜಕೀಯ ಪಕ್ಷದ ನಾಯಕರ ಸಂಪರ್ಕದಲ್ಲಿರುವುದಾಗಿ ಅವರು ತಿಳಿಸಿದ್ದಾರೆ.

To Top
error: Content is protected !!
WhatsApp chat Join our WhatsApp group