ರಾಷ್ಟ್ರೀಯ ಸುದ್ದಿ

‘ಜಾಗತಿಕ ಭಯೋತ್ಪಾದಕ’ ರಾಜತಾಂತ್ರಿಕತೆಯಲ್ಲಿ ಮುಗ್ಗರಿಸಿದ ಭಾರತ : ಹತಾಶ ಬಿಜೆಪಿಯಿಂದ ಮತ್ತದೇ ‘ನೆಹರೂ ರಾಗ’ !

ವರದಿಗಾರ ಮಾ 15 : ಪುಲ್ವಾಮ ಭಯೋತ್ಪಾದಕ ದಾಳಿಯ ಸೂತ್ರಧಾರನೆನ್ನಲಾಗಿರುವ ಪಾಕಿಸ್ತಾನದಲ್ಲಿ ನೆಲೆಸಿರುವ ಜೆಇಎಂ ಉಗ್ರ ಸಂಘಟನೆಯ ನಾಯಕ ಮಸೂದ್ ಅಝರ್ ನ ವಿರುದ್ಧ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ‘ಜಾಗತಿಕ ಭಯೋತ್ಪಾದಕ’ ನ ಪಟ್ಟ ನೀಡಬೇಕೆಂಬ ಭಾರತದ ಬೇಡಿಕೆಯನ್ನು ತನ್ನ ವೀಟೋ ಅಧಿಕಾರದ ಮೂಲಕ (ತಾಂತ್ರಿಕ) ತಡೆ ನೀಡಿದ್ದು, ಇದು ಭಾರತದ ರಾಜತಾಂತ್ರಿಕ ವೈಫಲ್ಯವೆಂದೇ ವಿಮರ್ಶಿಸಲಾಗಿದೆ. ಆದರೆ ಬಿಜೆಪಿ ಮಾತ್ರ ಎಂದಿನಂತೆ ತನ್ನೆಲ್ಲಾ ವಿಫಲತೆಗಳನ್ನು ಮರೆಮಾಚಲು ಹಳೆಯ ‘ನೆಹರೂ ರಾಗ’ ಹಾಡಿದೆ. ಮೋದಿ ನೇತೃತ್ವದ ಕೇಂದ್ರ ಸರಕಾರದ ರಾಜತಾಂತ್ರಿಕ ವಿಫಲತೆಯನ್ನು ಅಣಕಿಸಿದ ರಾಹುಲ್ ಗಾಂಧಿಯ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಬಿಜೆಪಿ, ನಿಮ್ಮ ತಾತ ನೆಹರೂ ಅವರು ಚೀನಾಕ್ಕೆ ಭದ್ರತಾ ಮಂಡಳಿಯ ಸ್ಥಾನವನ್ನು ‘ಉಡುಗೊರೆ’ ನೀಡಿದ್ದೆಂದು ಹೇಳಿ ಕೇಂದ್ರ ಸರಕಾರದ ವೈಫಲ್ಯವನ್ನು ಮರೆಮಾಚುವ ವಿಫಲ ಪ್ರಯತ್ನ ನಡೆಸಿದೆ.

ಚೀನಾ ಮತ್ತೊಮ್ಮೆ ತನ್ನ ಆಪ್ತ ರಾಷ್ಟ್ರ ಪಾಕಿಸ್ತಾನದ ಪರ ಬ್ಯಾಟ್ ಬೀಸಿದ್ದು, ಅಝರ್ ಮಸೂದನನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಭಾರತದ ಪ್ರಯತ್ನಕ್ಕೆ ಅಮೆರಿಕಾ, ಬ್ರಿಟನ್, ಫ್ರಾನ್ಸ್ ಬೆಂಬಲ ಸೂಚಿಸಿತ್ತು. ಆದರೆ ಚೀನಾ,  ಪಾಕಿಸ್ತಾನವನ್ನು ಬೆಂಬಲಿಸಿ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ. ಈ ಮೂಲಕ 2009 ರಿಂದ ಇದುವರೆಗೆ ಒಟ್ಟು ನಾಲ್ಕನೆಯ ಬಾರಿಗೆ ಚೀನಾ, ಭಾರತದ ನಿಲುವನ್ನು ತಳ್ಳಿ ಹಾಕಿದಂತಾಗಿದೆ.

1994 ರಲ್ಲಿ ಆಗಿನ ಕಾಂಗ್ರೆಸ್ ಸರಕಾರ, ಬಾಂಗ್ಲಾದೇಶದ ಮೂಲಕ ಪೋರ್ಚುಗೀಸ್ ಪಾಸ್ಪೋರ್ಟ್ ಬಳಸಿಕೊಂಡು ಭಾರತಕ್ಕೆ ಬಂದಿದ್ದ ಉಗ್ರ ಅಝರ್ ಮಸೂದನನ್ನು ಕಾಶ್ಮೀರದಲ್ಲಿ ಬಂಧಿಸಿತ್ತು. ಆತನ ಬಂಧನದ 10 ತಿಂಗಳ ನಂತರ ಕಾಶ್ಮೀರಕ್ಕೆ ಪ್ರವಾಸ ಬಂದಿದ್ದ ಹತ್ತು ವಿದೇಶಿ ಪ್ರವಾಸಿಗರನ್ನು ಭಯೋತ್ಪಾದಕರು ಅಪಹರಿಸಿ ಅಝರ್ ಬಿಡುಗಡೆಗೆ ಚೌಕಾಶಿ ಮಾಡಲಾಗಿತ್ತಾದರೂ ಕೇಂದ್ರ ಸರಕಾರ ಮಾತ್ರ ಭಯೋತ್ಪಾದಕರ ಬೇಡಿಕೆಗೆ ಸೊಪ್ಪು ಹಾಕಿರಲಿಲ್ಲ.  ಆದರೆ 1999ರಲ್ಲಿ ಇಂಡಿಯನ್ ಏರ್ಲೈನ್ಸ್ ವಿಮಾನವನ್ನು ಅಪಹರಿಸಿದ ಭಯೋತ್ಪಾದಕರು, ಪ್ರಯಾಣಿಕರ ಬಿಡುಗಡೆಗಾಗಿ ಅಝರ್ ಮಸೂದ್ ಸೇರಿದಂತೆ ಮೂವರು ಉಗ್ರರ ಬಿಡುಗಡೆಗೆ ಬೇಡಿಕೆ ಇಟ್ಟಿತ್ತು. ಆಗಿನ ವಾಜಪೇಯಿ ನೇತೃತ್ವದ ಕೇಂದ್ರ ಸರಕಾರದ ಭಯೋತ್ಪದಕರ ಬೇಡಿಕೆಗೆ ಮಣಿದು, ಆಗಿನ ಕೇಂದ್ರ ವಿದೇಶ ಮಂತ್ರಿಯಾಗಿದ್ದ ಜಸ್ವಂತ್ ಸಿಂಗ್ ಹಾಗೂ ಈಗಿನ ಮೋದಿ ಸರಕಾರದ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿರುವ ಅಜಿತ್ ಧೋವಲ್,  ಮೂವರು ಭಯೋತ್ಪಾದಕರೊಂದಿಗೆ ಅಫ್ಘಾನಿಸ್ತಾನಕ್ಕೆ ತೆರಳಿ ಅವರನ್ನು ಬಿಡುಗಡೆಗೊಳಿಸಿ, ಪ್ರಯಾಣಿಕರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆ ತಂದಿದ್ದರು. ತನ್ನ ಬಿಡುಗಡೆಯ ನಂತರ ಉಗ್ರ ಅಝರ್ ಮಸೂದ್, ಜೆಇಎಂ ಉಗ್ರ ಸಂಘಟನೆಯನ್ನು ಸ್ಥಾಪಿಸಿ ಭಾರತದ ವಿರುದ್ಧ ಹಲವಾರು ಭಯೋತ್ಪಾದಕ ದಾಳಿಯನ್ನು ನಡೆಸುತ್ತಲೇ ಬಂದಿದ್ದು, ಇತ್ತೀಚೆಗಿನ ಪುಲ್ವಾಮಾ ದಾಳಿ ಅತಿ ಹೆಚ್ಚು ಯೋಧರನ್ನು ಕಳೆದುಕೊಂಡ ಭೀಕರ ಭಯೋತ್ಪಾದಕ ದಾಳಿಯಾಗಿದೆ.

ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ತನ್ನ ಪ್ರತಿಯೊಂದು ವಿಫಲತೆಗಳನ್ನು ನೆಹರೂ ಹೆಸರಿನ ಮೇಲೆ ಹಾಕುವ ಕೆಟ್ಟ ಸಂಪ್ರದಾಯವನ್ನು ನಡೆಸುತ್ತಲೇ ಇದೆ. ಸಾಮಾಜಿಕ ತಾಣಗಳಲ್ಲೂ ಬಿಜೆಪಿಯ ಈ ನಿಲುವನ್ನು ಜನರು ವ್ಯಂಗ್ಯಭರಿತರಾಗಿ ಪ್ರತಿಕ್ರಿಯಿಸುತ್ತಿರುತ್ತಾರೆ. ಆದರೆ ಇದೀಗ ಮತ್ತೆ 1999ರಲ್ಲಿ ಉಗ್ರ ಅಝರ್ ಮಸೂದನನ್ನು ಬಿಡುಗಡೆಗೊಳಿಸಿರುವ ಬಿಜೆಪಿ ನೇತೃತ್ವದ ಆಗಿನ ಕೇಂದ್ರ ಸರಕಾರದ ನಿರ್ಧಾರವನ್ನು ರಾಹುಲ್ ಗಾಂಧಿ ವಿಮರ್ಶಿಸಿದಾಗಲೂ ಬಿಜೆಪಿ ಮಾತ್ರ ತನ್ನ ಹಳೆಯ ‘ನೆಹರೂ ಗುರಾಣಿ’ ಬಳಸಿಕೊಂಡು ಪಾರಾಗಲು ನೋಡಿ ಮತ್ತೊಮ್ಮೆ ನಗೆಪಾಟಲಿಗೀಡಾಗಿದೆ.

ಪುಲ್ವಾಮಾ ದಾಳಿಯ ಬಳಿಕದ ಗಡಿ ಉದ್ವಿಗ್ನತೆಯ ಸಮಯದಲ್ಲಿ ಪಾಕಿಸ್ತಾನಕ್ಕೆ ತನ್ನ ವಿಮಾನಗಳ ಹಾರಾಟವನ್ನು ನಿಷೇಧಿಸಿದ್ದ  ಚೀನಾದ ಕ್ರಮವನ್ನು ಭಾರತದ ರಾಜತಾಂತ್ರಿಕ ವಿಜಯವೆಂಬಂತೆ ಸಾಮಾಜಿಕ ತಾಣಗಳಲ್ಲಿ ಬಿಂಬಿಸಿದ್ದ ಬಿಜೆಪಿ ಬೆಂಬಲಿಗರು, ಇದೀಗ ಅಝರ್ ಮಸೂದನ ಪರ ವಹಿಸಿದ ಚೀನಾದ ಕ್ರಮಕ್ಕೆ ನೆಹರೂ ಕಾರಣರೆನ್ನುತ್ತಿರುವುದು ಮಾತ್ರ ವಿಪರ್ಯಾಸವೂ ಹಾಸ್ಯಾಸ್ಪದವೂ ಹೌದು

 

 

 

 

 

 

Click to comment

You must be logged in to post a comment Login

Leave a Reply

To Top
error: Content is protected !!
WhatsApp chat Join our WhatsApp group