ರಾಷ್ಟ್ರೀಯ ಸುದ್ದಿ

ಕಾಶ್ಮೀರ : ಸೇನಾ ಕ್ಯಾಂಪ್ ಹೊರಗೆ ಗ್ರೆನೇಡ್ ಗಳೊಂದಿಗೆ ಸಿಕ್ಕಿಬಿದ್ದ ಉಗ್ರ ರಾಜಿಂದರ್ ಸಿಂಗ್ ಅರೆಸ್ಟ್ !

ವರದಿಗಾರ ಮಾ 11 :  ಜಮ್ಮು ಕಾಶ್ಮೀರದ ಪೂಂಛ್ ಜಿಲ್ಲೆಯ ಸೇನಾ ನೆಲೆಯ ಹೊರಗಡೆ ಗ್ರೆನೇಡ್, ಡಿಟೋನೇಟರ್ ಗಳು ಸೇರಿದಂತೆ ಸ್ಪೋಟಕ ಸಾಮಾಗ್ರಿಗಳೊಂದಿಗೆ ಸಂಶಯಾಸ್ಪದವಾಗಿ ಸಿಕ್ಕಿಬಿದ್ದ  ಉಗ್ರನೊಬ್ಬನನ್ನು ಬಂಧಿಸಲಾಗಿದೆ. ಬಂಧಿತ ಉಗ್ರನನ್ನು ರಾಜಿಂದರ್ ಸಿಂಗ್ ಎಂದು ಗುರುತಿಸಲಾಗಿದೆ. ಬಂಧಿತ ಜಮ್ಮು ಕಾಶ್ಮೀರದ ಕಲಾಕೋಟ್ ಪ್ರದೇಶದವನೆಂದು ಗುರುತಿಸಲಾಗಿದೆ.

ಬಂಧಿತ ಉಗ್ರನು ಸುರಾನ್ ಕೋಟ್ ನಲ್ಲಿ ನಡೆಯುತ್ತಿದ್ದ ಸೇನಾ ನೇಮಕಾತಿ ಪ್ರದೇಶದ ಸುತ್ತಮುತ್ತ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾನೆಂದು ಪೂಂಛ್ ವಲಯದ ಹಿರಿಯ ಪೊಲೀಸ್ ಅಧಿಕಾರಿ ರಮೇಶ್ ಕುಮಾರ್ ಅಗರ್ವಾಲ್ ತಿಳಿಸಿದ್ದಾರೆ. ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ ಜಮ್ಮು ಕಾಶ್ಮೀರದ ಹಲವು ಯುವಕರು ಸೇನಾ ನೇಮಕಾತಿಗೆ ಒಲವು ತೋರುತ್ತಿರುವುದು ಗಮನಾರ್ಹವಾಗಿದ್ದು, ಬಂಧಿತ ಉಗ್ರನನ್ನು ಸೂಕ್ತವಾಗಿ ತನಿಖೆ ನಡೆಸಿದರೆ ಆತನ ನೈಜ ಉದ್ದೇಶ ಬಯಲಾಗುವ ಸಾಧ್ಯತೆಯಿದೆ.

ಬಂಧಿತ ಉಗ್ರ ರಾಜಿಂದರ್ ಸಿಂಗನ ಬಳಿಯಿಂದ ಎ ಸಿ 90 ಗ್ರೆನೇಡ್, ಒಂದು ಗ್ರೆನೇಡ್ ಲಾಂಚರ್ ಮತ್ತು ಒಂದು ಡಿಟೋನೇಟರನ್ನು ವಶಪಡಿಸಿಕೊಳ್ಳಲಾಗಿದೆ. ಸೇನಾ ನೆಲೆಯ ಭದ್ರತಾ ಸಿಬ್ಬಂದಿಗಳು ವ್ಯಕ್ತಿಯೋರ್ವ ಸೇನಾ ನೆಲೆಯ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಸುತ್ತಾಡುತ್ತಿರುವ ಬಗ್ಗೆ ಮಾಹಿತಿ ಪಡೆದು, ಉಗ್ರ ರಾಜಿಂದರ್ ಸಿಂಗನನ್ನು ಬಂಧಿಸಿ ತನಿಖೆಗಾಗಿ  ಕೂಡಲೇ ಆತನನ್ನು ಪೊಲೀಸರ ವಶಕ್ಕೊಪ್ಪಿಸಿದೆ.

ಉಗ್ರ ರಾಜಿಂದರ್ ಸಿಂಗ್ ಯಾವುದಾದರೂ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದಾನೆಯೇ, ಆತನಿಗೆ ಎಷ್ಟೊಂದು ಸ್ಪೋಟಕ ಸಾಮಗ್ರಿಗಳನ್ನು ನೀಡಿದವರು ಯಾರು ಎನ್ನುವುದರ ಕುರಿತು ಸೂಕ್ತ ರೀತಿಯ ತನಿಖೆ ನಡೆದರೆ ಮಾತ್ರವೇ ಆತನ ಹಿಂದಿರುವ ಉಗ್ರ ಸಂಘಟನೆಗಳ ನೈಜ ಚಿತ್ರಣ ಹೊರಬರಬಹುದೇನೋ. ಕಾಶ್ಮೀರದ ಯುವಕರು ಬೃಹತ್ ಸಂಖ್ಯೆಗಳಲ್ಲಿ ಸೇನೆಗೆ ಸೇರುವ ಕುರಿತು ಒಲವು ವ್ಯಕ್ತಪಡಿಸಿಕೊಳ್ಳುತ್ತಿರುವುದರ ವಿರುದ್ಧದ ಷಡ್ಯಂತ್ರವೂ ಇದಾಗಿರುವ ಸಾಧ್ಯತೆ ಇದೆ.  ಯಾವುದಕ್ಕೂ ಪೊಲೀಸರ ಸ್ಪಷ್ಟ ದಿಕ್ಕಿನ ತನಿಖೆ ಮಾತ್ರ ಈ ಎಲ್ಲಾ ಸಂಶಯಗಳಿಗೆ ಉತ್ತರವಾಗಬಲ್ಲುದು

Click to comment

You must be logged in to post a comment Login

Leave a Reply

To Top
error: Content is protected !!
WhatsApp chat Join our WhatsApp group