ಜಿಲ್ಲಾ ಸುದ್ದಿ

ಹಿಂದುತ್ವಕ್ಕಾಗಿ ಹಪತಪಿಸುತ್ತಿರುವ ಕಾಂಗ್ರೆಸ್: ಎಸ್.ಡಿ.ಪಿ.ಐ. ಆರೋಪ

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಮ ಮಂದಿರ ನಿರ್ಮಿಸಿ ಕೊಡುತ್ತೇವೆ ಸಿಎಂ ಇಬ್ರಾಹಿಂ ಹೇಳಿಕೆಗೆ ಎಸ್.ಡಿ.ಪಿ.ಐ. ಪ್ರತಿಕ್ರಿಯೆ

ಜಾತ್ಯಾತೀತ ನಿಲುವಿನ ವಿಚಾರದಲ್ಲಿ ಕಾಂಗ್ರೆಸ್ ಸ್ಪಷ್ಟೀಕರಣ ನೀಡುವಂತೆ ಒತ್ತಾಯ

ವರದಿಗಾರ (ಮಾ.9): ಮಂಗಳೂರಿನ ಅಡ್ಯಾರ್ ಗಾರ್ಡನ್ ನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸಮಾವೇಶದಲ್ಲಿ ಭಾಷಣ ಮಾಡಿದ ಸಿ.ಎಂ. ಇಬ್ರಾಹಿಂ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಮ ಮಂದಿರ ಕಟ್ಟಿ ಕೊಡುತ್ತೇವೆ ಎಂಬ ಮಾತುಗಳನ್ನಾಡಿ ಕಳೆದ 26 ವರುಷಗಳಿಂದ ಬಾಬರಿ ಮಸ್ಜಿದ್ ನ ಪುನರ್ ನಿರ್ಮಾಣಕ್ಕಾಗಿ ಕಾಯುತ್ತಿರುವ ಈ ದೇಶದ ಮುಸ್ಲಿಂ ಸಮುದಾಯಕ್ಕೆ ಮತ್ತೊಮ್ಮೆ ಘೋರ ಅನ್ಯಾಯ ಮಾಡಿದ್ದಾರೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ – ಎಸ್.ಡಿ.ಪಿ.ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಎ.ಎಂ. ಅಥಾವುಲ್ಲಾ ಆರೋಪಿಸಿದ್ದು, ಸಿ.ಎಂ. ಇಬ್ರಾಹಿಂ ಹೇಳಿಕೆಯನ್ನು  ತೀವ್ರವಾಗಿ ಖಂಡಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಬಾಬರಿ ಮಸ್ಜಿದ್ ಅದೇ ಸ್ಥಳದಲ್ಲಿ ಪುನರ್ ನಿರ್ಮಿಸುತ್ತೇವೆ ಎಂದು 1992 ರಲ್ಲಿ ಭರವಸೆ ನೀಡಿದ ಕಾಂಗ್ರೆಸ್ ತನ್ನ ಭರವಸೆಯನ್ನು ಈಡೇರಿಸದೆ  ಇದೀಗ ರಾಮ ಮಂದಿರ ನಿರ್ಮಿಸುವ ಬಗ್ಗೆ ಭರವಸೆಯ ಮಾತುಗಳನ್ನಾಡಿ ಮೃದು ಹಿಂದುತ್ವವನ್ನು ತಾಳುತ್ತಿರುವುದು ಇವರ ಜ್ಯಾತ್ಯಾತೀತ ನಿಲುವುಗಳು ನಾಶ ಹೊಂದಿದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆಗೆಯಾಗಿದೆ ಮತ್ತು ರಾಮ ಮಂದಿರ ನಿರ್ಮಿಸುವ ವಿಚಾರದಲ್ಲಿ ಬಿಜೆಪಿಯೊಂದಿಗೆ ಕಾಂಗ್ರೆಸ್ ಕೂಡ ಪೈಪೋಟಿ ನಡೆಸುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದ್ದಾರೆ.

ಚುನಾವಣೆ ಹತ್ತಿರ ಬರುತ್ತಿದ್ದಂತೆ ಮುಸ್ಲಿಂ ಸಮುದಾಯವನ್ನು ಕಡೆಗಣಿಸಿ, ಧಾರ್ಮಿಕ ಭಾವನೆಗಳಿಗೆ ಚ್ಯುತಿ ಬರುವಂತಹ ರೀತಿಯಲ್ಲಿ ಮಾತನಾಡುವುದನ್ನು ಸಹಿಸಲು ಜಿಲ್ಲೆಯ ಪ್ರಜ್ಞಾವಂತ ನಾಗರಿಕರಿಗೆ ಸಾಧ್ಯವಿಲ್ಲ. ಆದುದರಿಂದ ಕಾಂಗ್ರೆಸ್ ಪಕ್ಷದ ನಾಯಕರು ಬಾಬರಿ ಮಸ್ಜಿದ್ ಪುನರ್ ನಿರ್ಮಾಣದ ಬಗ್ಗೆ ಮತ್ತು ಜಾತ್ಯಾತೀತ ನಿಲುವಿನ ವಿಚಾರದಲ್ಲಿ ಸ್ಪಷ್ಟೀಕರಣ ನೀಡಬೇಕೆಂದು ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಒತ್ತಾಯಿಸಿದ್ದಾರೆ.

To Top
error: Content is protected !!
WhatsApp chat Join our WhatsApp group