ರಾಷ್ಟ್ರೀಯ ಸುದ್ದಿ

ರಫೇಲ್‌ ಹಗರಣದಲ್ಲಿ ಮೊದಲು ಮೋದಿಯನ್ನೇ ತನಿಖೆ ಮಾಡಬೇಕು: ರಾಹುಲ್ ಒತ್ತಾಯ

‘ಹಗರಣದಲ್ಲಿ ಮೋದಿ ತಪ್ಪಿತಸ್ಥರಲ್ಲ ಎಂದರೆ, ಪ್ರಕರಣವನ್ನು ಯಾಕೆ ತನಿಖೆಗೆ ಆದೇಶಿಸುತ್ತಿಲ್ಲ?’

ವರದಿಗಾರ (ಮಾ.07): ರಫೇಲ್‌ ಯುದ್ಧ ವಿಮಾನ ಖರೀದಿ ಹಗರಣದಲ್ಲಿ ಮೊದಲು ಪ್ರಧಾನಿ ನರೇಂದ್ರ ಮೋದಿಯವರನ್ನೇ ತನಿಖೆಗೆ ಒಳಪಡಿಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.

ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ದಾಖಲೆಗಳು ಕಳುವಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಹೇಳಿಕೆ ನೀಡಿದ ಹಿನ್ನಲೆಯಲ್ಲಿ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ರಾಹುಲ್, ‘ರಫೇಲ್‌ ಯುದ್ಧ ವಿಮಾನ ಖರೀದಿ ಹಗರಣದಲ್ಲಿ ಮೊದಲು ಪ್ರಧಾನಿ ನರೇಂದ್ರ ಮೋದಿಯವರನ್ನೇ ತನಿಖೆಗೆ ಒಳಪಡಿಸಬೇಕು’ ಎಂದು ಹೇಳಿದ್ದಾರೆ.

ಭ್ರಷ್ಟಾಚಾರ ಮತ್ತು ಬಂಡವಾಳಶಾಹಿ ಮತ್ತು ರಾಜಕಾರಣಿಗಳ ಅಪವಿತ್ರ ಮೈತ್ರಿ ಕುರಿತು ಮಾತನಾಡಿದ ರಾಹುಲ್, ನಾನು ಈ ವಿಚಾರದಲ್ಲಿ ಯಾರನ್ನು ದೂರುತ್ತಿಲ್ಲ. ಸರ್ಕಾರದ ದಾಖಲೆಗಳೇ ಅವರ ಬಗ್ಗೆ ಹೇಳುತ್ತಿವೆ. ಸರ್ಕಾರದ ದಾಖಲೆಗಳೇ ಮೋದಿ ಹಾಗೂ ಅವರ ಕಚೇರಿ ಇದರಲ್ಲಿ ಭಾಗಿಯಾಗಿರುವುದನ್ನು ಉಲ್ಲೇಖಿಸಿದೆ ಎಂದರು.

ಮೋದಿ ಅವರು ಈ ವಿಚಾರದಲ್ಲಿ ಅನಿಲ್ ಅಂಬಾನಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಬೈಪಾಸ್ ಸರ್ಜರಿ ನಡೆಸಿದ್ದಾರೆ. ಮೋದಿ ರಫೇಲ್ ಖರೀದಿ ವಿಚಾರದಲ್ಲಿ ವಿಳಂಬ ಮಾಡಿದರು. ಇದರ ಲಾಭ ಅಂಬಾನಿ ಪಾಲಾಯಿತು. ಅನಿಲ್ ಅಂಬಾನಿ ಅವರಿಗೆ ಮೋದಿ 30ಸಾವಿರ ಕೋಟಿ ಹಣ ನೀಡಿದರು ಎಂದು ಆರೋಪಿಸಿದ್ದಾರೆ.

ಚೌಕೀದಾರರನನ್ನು ರಕ್ಷಣೆ ಮಾಡುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ತಮ್ಮನ್ನು ತಾವು ತನಿಖೆಗೆ ಒಳಪಡಿಸಿಕೊಳ್ಳಲು ಪ್ರಧಾನ ಮಂತ್ರಿಯವರು ಹೆದರುತ್ತಿದ್ದಾರೆ. ಮೋದಿ ಇದರಲ್ಲಿ ತಪ್ಪಿತಸ್ಥರಲ್ಲ ಎಂದರೆ, ಪ್ರಕರಣವನ್ನು ಯಾಕೆ ತನಿಖೆಗೆ ಆದೇಶಿಸುತ್ತಿಲ್ಲ. ‌

ಇದರಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರನ್ನು ತನಿಖೆಗೆ ಒಳಪಡಿಸಬೇಕು. ಆದರೆ ಮೋದಿ ಅವರ ಹೆಸರು ಬಂದ ಕೂಡಲೇ ತನಿಖೆ ನಡೆಯುವುದಿಲ್ಲ ಏಕೆ? ಎಂದು ರಾಹುಲ್ ಪ್ರಶ್ನಿಸಿದ್ದಾರೆ.

‘ನಾನು ಯಾವುದಕ್ಕೂ ಭಯಪಡುವುದಿಲ್ಲ. ಸ್ವಯಂ ತನಿಖೆಗೆ ಒಳಪಡುತ್ತೇನೆ. ನಾನು ರಾಷ್ಟ್ರದ ಚೌಕೀದಾರ. ನನ್ನನ್ನು ತನಿಖೆಗೆ ಒಳಪಡಿಸಿ ಎಂದು ಮೋದಿ ಯಾಕೆ ಹೇಳುತ್ತಿಲ್ಲ’ ಎಂದು ರಾಹುಲ್ ಪ್ರಶ್ನಿಸಿದ್ದಾರೆ

‘ಎಲ್ಲವೂ ಕಣ್ಮರೆ’ಯಾಗಿದೆ (Gayab ho gaya) ಇದು ಕೇಂದ್ರ ಸರ್ಕಾರದ ಟ್ಯಾಗ್‌ಲೈನ್‌ ಆಗಿದೆ. 2 ಕೋಟಿ ಉದ್ಯೋಗಾವಕಾಶ, ರೈತರಿಗೆ ಬೆಳೆ ಪರಿಹಾರ, ಬ್ಯಾಂಕ್‌ಗಳಲ್ಲಿ 15 ಲಕ್ಷ ಹಣ ಜಮಾ ಹೀಗೆ ಕೊಟ್ಟ ಎಲ್ಲಾ ಭರವಸೆಗಳು ಕಾಣುತ್ತಿಲ್ಲ. ಇದನ್ನು ರಫೇಲ್‌ ಹಗರಣದಲ್ಲಿ ಸಾಧ್ಯವಾಗಿಸಲು ಹೊರಟಿದ್ದಾರೆ ಎಂದು ಆರೋಪಿಸಿದರು.

To Top
error: Content is protected !!
WhatsApp chat Join our WhatsApp group