ರಾಜ್ಯ ಸುದ್ದಿ

‘ಮೋದಿ ಒಬ್ಬ ಹೃದಯ ಹೀನ ಪ್ರಧಾನಿ’: ಫ್ರೋ.ಮಹೇಶ್ ಚಂದ್ರಗುರು

‘ಮೋದಿಯವರ ದೇಹವನ್ನು ಆರೆಸ್ಸೆಸ್ ಮತ್ತು ಬಂಡವಾಳಶಾಹಿಗಳೊಂದಿಗೆ ಅಡವಿಟ್ಟುಕೊಂಡಿದ್ದಾರೆ’

‘ಮೇಲ್ಜಾತಿಗೆ ಶೇ.10 ಮೀಸಲಾತಿಯು ಕೇವಲ ಚುನಾವಣಾ ನಾಟಕ’

ಮೇಲ್ಜಾತಿಗಳಿಗೆ ನೀಡಿದ ಮೀಸಲಾತಿ ಸಂವಿಧಾನದ ಮೇಲೆ ಬಿಜೆಪಿ ಮಾಡಿದ ಸವಾರಿಯಾಗಿದೆ: ಇಲ್ಯಾಸ್ ಮುಹಮ್ಮದ್

ವರದಿಗಾರ(ಫೆ.26): ‘ಇವತ್ತು ಮೋದಿಯವರ ಮೆದುಳು ಸಾಂಸ್ಕೃತಿಕ ಮತ್ತು ಸಾಮ್ರಾಜ್ಯಶಾಹಿಯಾಗಿರುವ ಆರೆಸ್ಸೆಸ್ಸಿನ ನಿಯಂತ್ರಣದಲ್ಲಿದೆ. ಮೋದಿಯವರ ಶರೀರ ಬಂಡವಾಳಶಾಹಿ ಕಂಪನೆಗಳ ನಿಯಂತ್ರಣದಲ್ಲಿದೆ. ಅವರ ದೇಹವನ್ನು ಬಹುರಾಷ್ಟ್ರೀಯ ಕಂಪನೆಗಳ ಜೊತೆಗೆ ಅಡವಿಟ್ಟಿದ್ದಾರೆ. ಹಾಗಾಗಿ ಇಂತಹ ಹೃದಯ ಹೀನ ಪ್ರಧಾನಿ ನಮಗೆ ಬೇಡ. ಹೃದಯ ಹೀನ ಪ್ರಧಾನಿ ಎಂದು ಹೇಳಲು ನೂರಾರು ಉದಾಹರಣೆಗಳನ್ನು ಕೊಡಬಲ್ಲೆ’ ಎಂದು ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದ ಮುಖ್ಯಸ್ಥರಾದ ಫ್ರೋ.ಮಹೇಶ್ ಚಂದ್ರಗುರು ಅವರು ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರಕಾರ ಜಾರಿಗೆ ತಂದಿರುವ ಶೇ.10 ಮೀಸಲಾತಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಅವರು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಕರ್ನಾಟಕ ರಾಜ್ಯ ಸಮಿತಿಯು ಸೋಮವಾರ ಬೆಂಗಳೂರಿನ ಎಸ್.ಸಿ.ಎಂ.ಐ ಸಭಾಂಗಣದಲ್ಲಿ “ಆರ್ಥಿಕ ಮಾನದಂಡದ ಮೀಸಲಾತಿಯಿಂದ ಸಂವಿಧಾನ ದುರ್ಬಲಗೊಳಿಸಲು ಯತ್ನ” ‘ಸಾಮಾಜಿಕ ನ್ಯಾಯ ಖಾತರಿಪಡಿಸಿ, ಜಾತಿ ಅಧಿಪತ್ಯವನ್ನು ಸೋಲಿಸಿ’ ಎಂಬ ಘೋಷಣೆಯೊಂದಿಗೆ ಮೇಲ್ಜಾಜಿಗೆ ಶೇ.10 ಮೀಸಲಾತಿ ನೀಡಿರುವ ಅಸಂವಿಧಾನಿಕ ನಡೆಯ ವಿರುದ್ಧ ಹಮ್ಮಿಕೊಂಡಿದ್ದ ಜನಜಾಗೃತಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

‘ಮನುವಾದಿಗಳು ನಮ್ಮನ್ನು ಆಳುತ್ತಿದ್ದಾರೆ. ಮನುವಾದಿಗಳಿಗೊಂದು ಸಂವಿಧಾನ ಮತ್ತು ಮಾನತಾವಾದಿಗಳಿಗೊಂದು ಸಂವಿಧಾನವೆಂದು ಸೃಷ್ಟಿಸಲಾಗುತ್ತಿದೆ. ನಾವು ಮಾನತಾವಾದಿಗಳ ಸಂವಿಧಾನದೊಂದಿಗೆ ಜೊತೆಯಾಗಬೇಕು. ಕೇಂದ್ರ ಸರಕಾರವು ಮೇಲ್ಜಾತಿಗೆ ನೀಡಿರುವ ಮೀಸಲಾತಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇದು ಚುನಾವಣೆಗಾಗಿ ನಡೆಸಿದ ಪೂರ್ವ ತಯಾರಿಯಷ್ಟೇ. ಇದು ಕೊಟ್ಟ ಹಾಗೆ ಮಾಡಿದ ನಟನೆಯಾಗಿದೆ’ ಎಂದು ಮಹೇಶ್ ಚಂದ್ರಗುರು ಹೇಳಿದ್ದಾರೆ.

‘ಕೇಂದ್ರದಲ್ಲಿರುವ ಬಿಜೆಪಿ ಸರಕಾರ ಶೋಷಿತ ಸಮುದಾಯದ ವಿರೋಧಿಯಾಗಿದೆ ಮತ್ತು ಅವರ ಅಭಿವೃದ್ಧಿಗಾಗಿ ಯಾವುದೇ ಕಾರ್ಯಯೋಜನೆಗಳನ್ನು ಕೈಗೊಂಡಿಲ್ಲ’.

‘ಯಾರು ಕೊಡದ ಯೋಜನೆಯನ್ನು ನಾವು ಕೊಟ್ಟಿಲ್ವಾ ಎಂದು ಹೇಳುವುದಕ್ಕಾಗಿ ಈ ನಟನೆಯನ್ನು ಪ್ರಧಾನಿ ಮೋದಿ ಮಾಡಿದ್ದಾರೆ. ಮೋದಿ ಒಬ್ಬ ಜಾದೂಗಾರ, ನಾಟಕಗಾರ, ಬಡವರ ವಿರೋಧಿ, ಶೂದ್ರ ವಿರೋಧಿ. ಇಂತಹ ಪ್ರಧಾನಿ ಭಾರತದಲ್ಲಿ ಇದುವರೆಗೂ ಆಗಿಲ್ಲ ಮತ್ತು ಮುಂದೆ ಆಗುವುದೂ ಇಲ್ಲ ಎಂದು ಅತ್ಯಂತ ಪ್ರಾಮಾಣಿಕವಾಗಿ ಹೇಳುತ್ತೇನೆ. ಇಂಡಿಯಾ ನೆವರ್ ಫೈಂಡ್ಸ್ ಲೈಕ್ ದಿಸ್ ಅ್ಯಂಟಿ ದಲಿತ್ ಪ್ರೈಮ್ ಮಿನಿಸ್ಟರ್. ಪ್ರಧಾನಿ ಮೋದಿ ಜನಸಾಮಾನ್ಯರೊಂದಿಗಿಲ್ಲ ಬದಲಾಗಿ ಮಲ್ಟಿ ನ್ಯಾಷನಲ್ ಕಂಪನೆಗಳಾದ ಅದಾನಿ, ಅಂಬಾನಿ ಜೊತೆಗಿದ್ದಾರೆ. ಶ್ರೀಮಂತರನ್ನು, ಮೇಲ್ವರ್ಗದ ಜನತೆಯನ್ನು ಮಾತ್ರ ತಮ್ಮ ಜೊತೆ ಇಟ್ಟುಕೊಂಡಿದ್ದಾರೆಯೇ ಹೊರತು ರೈತರು, ಕಾರ್ಮಿಕರು, ಮಹಿಳೆಯರು, ಬಡವರು, ದುರ್ಬಲರನ್ನು ಜೊತೆಗಿಟ್ಟುಕೊಂಡಿಲ್ಲ. ಇವತ್ತು ಮೋದಿಯವರ ಮೆದುಳು ಸಾಂಸ್ಕೃತಿಕ ಮತ್ತು ಸಾಮ್ರಾಜ್ಯಶಾಹಿಯಾಗಿರುವ ಆರೆಸ್ಸೆಸ್ಸಿನ ನಿಯಂತ್ರಣದಲ್ಲಿದೆ. ಮೋದಿಯವರ ಶರೀರ ಬಂಡವಾಳಶಾಹಿ ಕಂಪನೆಗಳ ನಿಯಂತ್ರಣದಲ್ಲಿದೆ. ಅವರ ದೇಹವನ್ನು ಬಹುರಾಷ್ಟ್ರೀಯ ಕಂಪನೆಗಳ ಜೊತೆಗೆ ಅಡವಿಟ್ಟಿದ್ದಾರೆ. ಹಾಗಾಗಿ ಇಂತಹ ಹೃದಯ ಹೀನ ಪ್ರಧಾನಿ ನಮಗೆ ಬೇಡ. ಹೃದಯ ಹೀನ ಪ್ರಧಾನಿ ಎಂದು ಹೇಳಲು ನೂರಾರು ಉದಾಹರಣೆಗಳನ್ನು ಕೊಡಬಲ್ಲೆ’ ಎಂದು ಫ್ರೋ.ಮಹೇಶ್ ಚಂದ್ರಗುರು ಹೇಳಿದ್ದಾರೆ.

ಮೇಲ್ಜಾತಿಗಳಿಗೆ ನೀಡಿದ ಮೀಸಲಾತಿ ಸಂವಿಧಾನದ ಮೇಲೆ ಬಿಜೆಪಿ ಮಾಡಿದ ಸವಾರಿಯಾಗಿದೆ: ಇಲ್ಯಾಸ್ ಮುಹಮ್ಮದ್

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ, ಮೇಲ್ಜಾತಿಗಳಿಗೆ ನೀಡಿದ ಮೀಸಲಾತಿ ಸಂವಿಧಾನದ ಮೇಲೆ ಬಿಜೆಪಿ ಮಾಡಿದ ಸವಾರಿಯಾಗಿದೆ. ಯಾವುದೇ ಅಧ್ಯಯನ, ವರದಿ, ಚರ್ಚೆಯಿಲ್ಲದೆ 5 ದಿನಗಳ ಒಳಗೆ ಕಾನೂನು ಜಾರಿ ಮಾಡಿ ತ್ವರಿತವಾಗಿ ಜಾರಿ ಮಾಡಿದ ಈ ಮೀಸಲಾತಿಯು ಸರ್ವ ಸಂಪೂರ್ಣವಾಗಿ ಸಂವಿಧಾನ ವಿರೋಧಿಯೂ, ಪ್ರಜಾಪ್ರಭುತ್ವ ವಿರೋಧಿಯೂ ಆಗಿದೆ ಎಂದು ಹೇಳಿದ್ದಾರೆ.

ಈ ಸಂದರ್ಭ ಮೂಕ ನಾಯಕ ಪ್ರಶಸ್ತಿ ವಿಜೇತ, ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕನಾಥ್, ಫ್ರೋ.ಹಾ.ರಾ.ಮಹೇಶ್, ದೇವನೂರು ಪುಟ್ಟನಂಜಯ್ಯ, ರೇವತಿರಾಜ್, ಹೂಡಿ ವೆಂಕಟೇಶ್, ಡಾ.ಮೆಹಬೂಬ್ ಷರೀಫ್, ಅಡ್ವಕೇಟ್ ಬಾಲನ್, ರಿಯಾಝ್ ಫರಂಗಿಪೇಟೆ, ಎನ್.ವೆಂಕಟೇಶ್, ಪ್ರಸನ್ನ ಚಕ್ರವರ್ತಿ, ಅಬ್ರಾರ್ ಅಹಮದ್, ಕುಮಾರಸ್ವಾಮಿ ಮತ್ತಿತರ ಪ್ರಗತಿಪರ ಚಿಂತಕರು ಉಪಸ್ಥಿತರಿದ್ದರು.

To Top
error: Content is protected !!
WhatsApp chat Join our WhatsApp group