ರಾಜ್ಯ ಸುದ್ದಿ

ಶೋಷಿತ ಜನತೆಯ ಪರ ನಾವು ನಿಲ್ಲೋಣ, ಅವರ ಧ್ವನಿಯಾಗೋಣ: ನಟ ಚೇತನ್ ಅಹಿಂಸಾ

ರಕ್ತದಾನ ಶಿಬಿರ ಹಮ್ಮಿಕೊಳ್ಳುವ ಮೂಲಕ ಹುಟ್ಟುಹಬ್ಬ ಆಚರಿಸಿ ಮಾದರಿಯಾದ ನಟ

ವರದಿಗಾರ (ಫೆ.24):  ಸೋಶಿಯಲ್ ಸ್ಟಾರ್, ಜನಪರ ಹೋರಾಟಗಾರ, ಹಿಂದುಳಿಯಲ್ಪಟ್ಟ, ಶೋಷಿತ ಜನಸಮುದಾಯದ ಧ್ವನಿಯಾಗಿರುವ ನಟ ಚೇತನ್ ಅಹಿಂಸಾ ರವರು ತನ್ನ ಹುಟ್ಟು ಹಬ್ಬದ ದಿನದ ಪ್ರಯುಕ್ತ ದಾನದಲ್ಲಿ ಶ್ರೇಷ್ಠ ದಾನವಾದ ‘ರಕ್ತದಾನ’ ಶಿಬಿರವನ್ನು ಹಮ್ಮಿಕೊಳ್ಳುವುದರ ಮೂಲಕ ಮಾದರಿಯಾಗಿದ್ದು, ಶೋಷಿತ ಜನತೆಯ ಪರ ನಾವು ನಿಲ್ಲೋಣ, ಅವರ ಧ್ವನಿಯಾಗೋಣ ಎಂದು ಸೌಹಾರ್ದ ಸಮಾಜಕ್ಕೆ ಕರೆ ನೀಡಿದ್ದಾರೆ.

ಅವರು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ತನ್ನ ಹುಟ್ಟುಹಬ್ಬದ ಪ್ರಯುಕ್ತ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದರು.

ವೀಡಿಯೋ ವೀಕ್ಷಿಸಿ:

ಈ ಸಂದರ್ಭದಲ್ಲಿ ಮಾತನಾಡಿದ ಚೇತನ್, ನಾನು ಹುಟ್ಟು ಹಬ್ಬವನ್ನು ಆಚರಿಸಿಲ್ಲ, ಆಚರಿಸುವುದೂ ಇಲ್ಲ. ಸ್ನೇಹಿತರು ತಿಳಿಸಿದಂತೆ ನಮ್ಮಿಂದ ಸಮಾಜಕ್ಕೇನಾದರೂ ನೀಡುವ. ಅ ನೆಲೆಯಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದೇವೆ. ಈ ಸಮಾಜ ನಮಗೆ ಎಲ್ಲವನ್ನು ನೀಡಿದೆ. ಅದಕ್ಕಾಗಿ ನಾವೂ ಹಂತ ಹಂತವಾಗಿ ಈ ಸಮಾಜಕ್ಕೆ ವಾಪಾಸ್ ನೀಡೋಣ ಎಂದು ಹೇಳಿದ್ದಾರೆ.

‘ನಾವು ಅಪಾಯಕಾರಿ ಸ್ಥಿತಿಯಲ್ಲಿದ್ದೇವೆ. ಸಮಾಜಸೇವೆ ಮಾಡುವುದನ್ನೂ ದೇಶಭಕ್ತಿಯ ಹೆಸರಿನಲ್ಲಿ ಅಲೆಯಲಾಗುತ್ತಿದೆ. ನಮ್ಮ ದೇಶಪ್ರೇಮವನ್ನು ಪ್ರಶ್ನಿಸಲಾಗುತ್ತಿದೆ’ ಎಂದು ಅವರು ಇದೇ ಸಂದರ್ಭ ಆತಂಕ ವ್ಯಕ್ತಪಡಿಸಿದ್ದಾರೆ.

ರಕ್ತದಾನ ಶಿಬಿರದಲ್ಲಿ ಹಲವು ಚೇತನ್ ಅಭಿಮಾನಿಗಳು ರಕ್ತದಾನವನ್ನು ಮಾಡಿದ್ದಾರೆ. ಬಹಳಷ್ಟು ಹೋರಾಟಗಾರರು ಈ ಸಂದರ್ಭ ಅವರನ್ನು ಅಭಿನಂದಿಸಿ, ಹೋರಾಟಗಳಲ್ಲಿ ಜೋತೆಯಾಗುವುದಾಗಿ ಬೆಂಬಲ ಸೂಚಿಸಿದ್ದಾರೆ.

To Top
error: Content is protected !!
WhatsApp chat Join our WhatsApp group