ರಾಜ್ಯ ಸುದ್ದಿ

‘ದ್ವೇಷ ರಾಜಕೀಯ ಸೋಲಿಸಿ’ ಎಂಬ ಘೋಷಣೆಯೊಂದಿಗೆ ಪಾಪ್ಯುಲರ್ ಫ್ರಂಟ್ ಸಂಸ್ಥಾಪನಾ ದಿನಾಚರಣೆ

ವರದಿಗಾರ (ಫೆ 16 ) : ‘ಸಬ್‌ಕಾ ಸಾತ್ ಸಬ್‌ಕಾ ವಿಕಾಸ್’ ಎಂಬ ಘೋಷಣೆಯೊಂದಿಗೆ 2014 ರಲ್ಲಿ ಬಹುಮತಗಳನ್ನು ಪಡೆದು ಅಧಿಕಾರ ಪಡೆದ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಕಳೆದ ನಾಲ್ಕುವರೆ ವರ್ಷಗಳಲ್ಲಿ ದೇಶದ ಅಖಂಡತೆ, ಏಕತೆ, ಸಹೋದರತೆ, ಮತ್ತು ಸಹಬಾಳ್ವೆಯನ್ನು ಕೆಡವಿ ಸಂಘಪರಿವಾರದ ಹಿಂದುತ್ವ ಅಜೆಂಡದೊಂದಿಗೆ ಕಾರ್ಯಾಚರಿಸುತ್ತಿದೆ. ಅಧಿಕಾರಕ್ಕೇರುವ ಸರಕಾರವು  ದೇಶದ ಸರ್ವ ಪ್ರಜೆಗಳ ಮೂಲಭೂತ ಹಕ್ಕುಗಳನ್ನು ರಕ್ಷಣೆ ಮಾಡಬೇಕಾಗಿರುವುದು ರಾಜ ಧರ್ಮ ಮತ್ತು ಸಂವಿಧಾನದ ಆಶಯವಾಗಿದೆ.

ಆದರೆ ಪ್ರಸಕ್ತ ಕೇಂದ್ರ ಸರಕಾರವು ದೇಶದ ಅಲ್ಪಸಂಖ್ಯಾತ, ದಲಿತ, ದಮನಿತ ಸಮುದಾಯಗಳನ್ನು ದಮನಿಸಿ ಸಂಘಪರಿವಾರದ ದ್ವೇಷ ರಾಜಕೀಯವನ್ನು ಪ್ರೋತ್ಸಾಹಿಸುತ್ತಿದೆ. ಜನಪರವಾದ ಯೋಜನೆಗಳನ್ನು ಮತ್ತು ಕಾರ್ಯಗಳನ್ನು ತಂದು ದೇಶದ ಪ್ರಜೆಗಳ ಅಭಿವೃದ್ಧಿಯ ಬಗ್ಗೆ ಕಾಳಜಿ ವಹಿಸಬೇಕಾದ ಕೇಂದ್ರ ಸರಕಾರವು ಮುಸ್ಲಿಮರ ಧಾರ್ಮಿಕ ಹಕ್ಕುಗಳ ಮೇಲೆ ಹಸ್ತಕ್ಷೇಪ ನಡೆಸುವ ಕಾರ್ಯಗಳನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದೆ. ಗೋವಿನ ಹೆಸರಿನಲ್ಲಿ ಮುಹಮ್ಮದ್ ಅಖ್ಲಾಕರಿಂದ ಹಿಡಿದು ಬುಲಂದ್‌ಶಹರ್‌ನ ಪೊಲೀಸ್ ಅಧಿಕಾರಿಯವರೆಗೆ ಹಿಂದುತ್ವ ಶಕ್ತಿಗಳ ‘ಗುಂಪು ಹತ್ಯೆ’ ಗಳಿಗೆ ಬಲಿಯಾಗಿದೆ. ಸಂಘಪರಿವಾರದ ವಿನಾಶಕಾರಿ ಸಿದ್ದಾಂತಗಳನ್ನು ವಿರೋಧಿಸಿದವರನ್ನು ಗುಂಡಿಕ್ಕಿ ಕೊಲ್ಲುವ ಮತ್ತು ವಿರೋಧಿಸುವ ಸಂಘಟನೆಗಳನ್ನು ನಿಶೇಧಿಸುವ ಸರ್ವಾಧಿಕಾರಿ ಪ್ರವೃತ್ತಿಗಳನ್ನು ದೇಶದಲ್ಲೆಡೆ ಮಿತಿಮೀರಿ ನಡೆಸಲಾಗುತ್ತಿದೆ. ಈ ದ್ವೇಷ ರಾಜಕೀಯವನ್ನು ಸೋಲಿಸಬೇಕಾದದ್ದು ದೇಶದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ. ಮುಂಬರುವ ಲೋಕಸಭಾ ಚುಣಾವಣೆಯಲ್ಲಿ ದ್ವೇಷ ರಾಜಕೀಯವನ್ನು ಹರಡುವ ರಾಜಕೀಯ ಪಕ್ಷಗಳನ್ನು ಸೋಲಿಸಿ ಬಹುತ್ವದ ನೆಲೆಗಟ್ಟಿನಲ್ಲಿ ನೆಲೆ ನಿಂತಿರುವ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಲು ದೇಶದ ಜನತೆ ಮುಂದೆ ಬರಬೇಕೆಂದು ಪಾಪ್ಯುಲರ್ ಫ್ರಂಟ್ ಬಯಸುತ್ತದೆ.

ಈ ನಿಟ್ಟಿನಲ್ಲಿ ಕಳೆದ 12 ವರ್ಷಗಳಿಂದ ದೇಶದಾದ್ಯಂತ ಸಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ತನ್ನ 13ನೇ ಸಂಸ್ಥಾಪನಾ ದಿನಾಚರಣೆಯನ್ನು “ದ್ವೇಷ ರಾಜಕೀಯವನ್ನು ಸೋಲಿಸೋಣ” ಎಂಬ ಘೋಷಣೆಯೊಂದಿಗೆ ಇದೇ ಬರುವ ಫೆಬ್ರವರಿ 17 2019 ರಂದು ಆಚರಿಸುತ್ತಿದೆ.

ಇದರ ಭಾಗವಾಗಿ ಕರ್ನಾಟಕ ರಾಜ್ಯದ ಬೆಂಗಳೂರಿನ ಹೊಸಕೋಟೆ ಮತ್ತು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಪಥಸಂಚಲನ, ಐಕ್ಯತಾ ರ‍್ಯಾಲಿಯೊಂದಿಗೆ ಬೃಹತ್ ಸಮಾವೇಶಗಳು ನಡೆಯಲಿದೆ. ಗ್ರಾಮ ಮಟ್ಟದಲ್ಲಿ ಮತ್ತು “ದ್ವೇಷ ರಾಜಕೀಯವನ್ನು ಸೋಲಿಸಿ” ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ರಾಜ್ಯದ ಸರ್ವ ಜನರ ಪಾಲ್ಗೊಳ್ಳುವಿಕೆಯನ್ನು ಬಯಸುತ್ತಾ ಸರ್ವರಿಗೂ ಪಾಪ್ಯುಲರ್ ಫ್ರಂಟಿನ 13ನೇ ಸಂಸ್ಥಾಪನಾ ದಿನದ ಶುಭಾಶಯಗಳನ್ನು ಕೋರುತ್ತೇವೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮಾಧ್ಯಮ ಸಂಯೋಜಕರು ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ

To Top
error: Content is protected !!
WhatsApp chat Join our WhatsApp group