ರಾಜ್ಯ ಸುದ್ದಿ

‘ಮೂಕನಾಯಕ ಪ್ರಶಸ್ತಿ’ ಅಹಿಂದ ವರ್ಗಕ್ಕೆ ಸಿಕ್ಕಿದ ಗೌರವ: ಡಾ.ಸಿ.ಎಸ್. ದ್ವಾರಕನಾಥ್

ವರದಿಗಾರ (ಫೆ.12): ‘ಡಾ.ಬಿ.ಆರ್. ಅಂಬೇಡ್ಕರ್ ಮೂಕನಾಯಕ ಪ್ರಶಸ್ತಿ 2018’ ಸ್ವೀಕರಿಸಿರುವ ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷ, ಹಿರಿಯ ಅಂಕಣಕಾರರು, ನ್ಯಾಯವಾದಿ, ಪ್ರಗತಿಪರ ಚಿಂತಕ ಡಾ.ಸಿ.ಎಸ್. ದ್ವಾರಕನಾಥ್, ಮೂಕನಾಯಕ ಪ್ರಶಸ್ತಿಯು ಅಹಿಂದ ವರ್ಗಕ್ಕೆ ಸಿಕ್ಕಿದ ಗೌರವವೆಂದು ಹೇಳಿದ್ದಾರೆ.

ಸೋಮವಾರ ಬೆಂಗಳೂರಿನ ವಸಂತನಗರದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಹಮ್ಮಿಕೊಂಡಿದ್ದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದ ಬಳಿಕ ‘ವರದಿಗಾರ’ದೊಂದಿಗೆ ಮಾತನಾಡುತ್ತ ಮೇಲಿನ ಹೇಳಿಕೆಯನ್ನು ನೀಡಿದ್ದಾರೆ.

ಡಾ.ಸಿ.ಎಸ್. ದ್ವಾರಕನಾಥ್ ವರದಿಗಾರ ದೊಂದಿಗೆ ಮಾತನಾಡುತ್ತಾ, “ನನಗೆ ಬೇರೆಲ್ಲಾ ಪ್ರಶಸ್ತಿಗಳಿಗಿಂತಲೂ ಈ ಪ್ರಶಸ್ತಿ ಬಹುಮುಖ್ಯ ಹಾಗೂ ನನಗೆ ತುಂಬಾ ಸಂತೋಷವಾಗಿದೆ. ಯಾಕೆಂದರೆ ಮೂಕನಾಯಕ ಎಂಬುವುದನ್ನು ಮೊದಲು ಆರಂಭಿಸಿದವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ರವರಾಗಿದ್ದಾರೆ. ಅವರು ತಂದ ಪತ್ರಿಕೆಯ ಹೆಸರಲ್ಲಿ ನಾನು ಪ್ರಾರಂಭ ಮಾಡಿದ್ದೇನೆ. ಅದೇ ಹೆಸರಿನಲ್ಲಿ ಪ್ರಶಸ್ತಿ ದೊರೆತಿರುವುದು ತುಂಬಾನೇ ಸಂತೋಷ ತಂದಿದೆ. ಮತ್ತು ಹಿಂದುಳಿದ ಸಮುದಾಯಗಳಾದ ಅಲ್ಪಸಂಖ್ಯಾತರು, ದಲಿತರು ಹಾಗೂ ಇನ್ನಿತರ ತಳ ಸಮುದಾಯಗಳ ಬಗ್ಗೆ ಬರೆದ ಅಂಕಣಕ್ಕೆ ಪ್ರಶಸ್ತಿಯು ಬಂದಿರುವುದು ತುಂಬಾನೇ ಮನಸ್ಸಿಗೆ ಖುಷಿ ತಂದಿದೆ. ಇದು ಅಹಿಂದ ವರ್ಗಕ್ಕೆ ಸಿಕ್ಕಿದ ಗೌರವ” ಎಂದು ಡಾ.ಸಿ.ಎಸ್. ದ್ವಾರಕನಾಥ್ ತನ್ನ ಸಂತೋಷದ ಕ್ಷಣವನ್ನು ಹಂಚಿಕೊಂಡಿದ್ದಾರೆ.

ಡಾ.ಸಿ.ಎಸ್. ದ್ವಾರಕನಾಥ್ ರವರು ಕಳೆದ ಹಲವು ವರ್ಷಗಳಿಂದ ಶೋಷಿತ, ದಮನಿತ, ಅಲ್ಪಸಂಖ್ಯಾತ, ದಲಿತರ  ಬಗ್ಗೆ ಧ್ವನಿ ಎತ್ತುತ್ತಲೇ ಬಂದಿದ್ದು, ಶೋಷಣೆಗೊಳಪಡುತ್ತಿರುವ ಅವರನ್ನು ಮೇಲೆಕ್ಕೆತ್ತುವಂತಹ ಹಲವು ಜನಪರ ಕಾರ್ಯ ಯೋಜನೆಗಳನ್ನು ರೂಪಿಸುತ್ತಾ ಅವಿರತವಾದ ಹೋರಾಟಗಳಲ್ಲಿ ತನ್ನನ್ನು ತೊಡಗಿಸಿಕೊಂಡು ನಿಸ್ವಾರ್ಥವಾದ ಪ್ರಯತ್ನದಲ್ಲಿ ತೊಡಗಿಸಿಕೊಂಡಿದ್ದಾರೆ.

To Top
error: Content is protected !!
WhatsApp chat Join our WhatsApp group