ಹನಿ ಸುದ್ದಿ

ಸಿಬಿಐ ನ್ನು ರಾಜಕೀಯವಾಗಿ ಬಳಸಿದ್ದು ಬಿಜೆಪಿ ಮಾತ್ರ: ಅಖಿಲೇಶ್ ಯಾದವ್ 

‘ಕೇಂದ್ರ ಸರಕಾರ ಸಿಬಿಐ ನ್ನು ದುರ್ಬಳಕೆ ಮಾಡುತ್ತಿದೆ’

ವರದಿಗಾರ (ಫೆ.04): ಪಶ್ಚಿಮ ಬಂಗಾಳದಲ್ಲಿ ನಡೆದಂತೆ ಇತರ ರಾಜ್ಯಗಳಲ್ಲಿಯೂ ಇಂತಹ ಘಟನೆಗಳು ನಡೆಯುತ್ತಿವೆ. ಬಿಜೆಪಿ ಮತ್ತು ಕೇಂದ್ರ ಸರ್ಕಾರ  ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಿಬಿಐನ್ನು ದುರ್ಬಳಕೆ ಮಾಡುತ್ತಿವೆ ಸಮಾಜವಾದಿ ಪಕ್ಷದ ಮುಖ್ಯಸ್ಥ  ಅಖಿಲೇಶ್ ಯಾದವ್ ಕೇಂದ್ರ ಸರಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಸಂಸತ್ ನ ಬಳಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಮೇಲಿನ ಹೇಳಿಕೆಯನ್ನು ಅಖಿಲೇಶ್ ಯಾದವ್ ನೀಡಿದ್ದಾರೆ.

ಕೇವಲ ನಾನು ಅಥವಾ ಸಮಾಜವಾದಿ ಪಕ್ಷ ಮಾತ್ರ ಈ ಮಾತನ್ನು ಹೇಳುತ್ತಿಲ್ಲ. ಬದಲಾಗಿ ಎಲ್ಲ ರಾಜಕೀಯ ಪಕ್ಷಗಳು ಇದನ್ನು ಹೇಳುತ್ತಿವೆ .ಸಿಬಿಐ ನಿರ್ದೇಶಕರ ಬಗ್ಗೆ ಕೇಂದ್ರ ಭಯ ಪಟ್ಟಿತ್ತು. ಆದರೆ ಈಗ ಕೇಂದ್ರ ಸರ್ಕಾರ ಸಿಬಿಐನ್ನು ಬಳಸಿ ಎಲ್ಲರನ್ನೂ ಹೆದರಿಸುತ್ತಿದೆ. ಇಲ್ಲಿಯವರೆಗೆ ಯಾರಾದರೂ ಈ ಸಂಸ್ಥೆಯನ್ನು ದುರ್ಬಳಕೆ ಮಾಡಿದ್ದಾರಾ? ಈ ಸಂಸ್ಥೆಯನ್ನು ರಾಜಕೀಯವಾಗಿ ಬಳಸಿದ್ದು ಎಂದರೆ ಅದು ಬಿಜೆಪಿ ಮಾತ್ರ ಎಂದು ಅಖಿಲೇಶ್ ಹೇಳಿರುವುದಾಗಿ ಎಎನ್‍ಐ ಸುದ್ದಿಸಂಸ್ಥೆ ವರದಿ ಮಾಡಿದೆ.

To Top
error: Content is protected !!
WhatsApp chat Join our WhatsApp group