ಹನಿ ಸುದ್ದಿ

ಬಿಜೆಪಿಯಂತಹ ಭ್ರಷ್ಟ ಪಕ್ಷ ಬೇರೆ ಯಾವುದೂ ಇಲ್ಲ: ಗುಲಾಂ ನಬಿ

‘ಬಿಜೆಪಿಗೆ ಕಳೆದ 5 ವರ್ಷಗಳಲ್ಲಿ ವಿಪಕ್ಷಗಳನ್ನು ಹೇಗೆ ನಿರ್ಮೂಲನೆ ಮಾಡುವುದು ಎಂಬ ಚಿಂತೆಯಾಗಿತ್ತು’

ವರದಿಗಾರ (ಫೆ.04): ಬಿಜೆಪಿ ವಿರುದ್ಧ ವ್ಯಾಪಕ ಟೀಕೆಗಳು ಬರಲಾರಂಭಿಸಿದ್ದು, ವಿರೋಧ ಪಕ್ಷದ ನಾಯಕರು ಬಿಜೆಪಿ ವಿರುದ್ಧ ಚಾಟಿ ಬೀಸಿದ್ದು, ಬಿಜೆಪಿಯಂತಹ ಭ್ರಷ್ಟ ಪಕ್ಷ ಬೇರೆ ಯಾವುದೂ ಇಲ್ಲವೆಂದು ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಗುಲಾಂ ನಬಿ ಆಜಾದ್ ಬಿಜೆಪಿಯನ್ನು ‘ಭ್ರಷ್ಟ ಪಕ್ಷ’ವೆಂದು ಕರೆದಿದ್ದಾರೆ. ಈ ಬಗ್ಗೆ ಎಎನ್ಐ ವರದಿ ಮಾಡಿದೆ.

ಕೇಂದ್ರದಲ್ಲಿ ಅಧಿಕಾರಕ್ಕೇರಿದಂದಿನಿಂದ ಬಿಜೆಪಿ ದೇಶದ ಅಭಿವೃದ್ಧಿಗಾಗಿ ಗಮನ ಹರಿಸಿದ್ದು ತೀರಾ ಕಡಿಮೆ. ಕಳೆದ 5 ವರ್ಷಗಳಲ್ಲಿ ವಿಪಕ್ಷಗಳನ್ನು ನಿರ್ಮೂಲನೆ ಮಾಡುವುದು ಹೇಗೆ ಎಂಬುದರ ಬಗ್ಗೆಯೇ ಬಿಜೆಪಿ ಹೆಚ್ಚು ಗಮನ ಹರಿಸಿದೆ. ಬಿಜೆಪಿಯಷ್ಟು ಭ್ರಷ್ಟ ಪಕ್ಷ ಬೇರೊಂದಿಲ್ಲ ಎಂದು ಕಾಂಗ್ರೆಸ್ ನೇತಾರ ಗುಲಾಂ ನಬಿ ಆಜಾದ್ ಹೇಳಿದ್ದಾರೆ.

To Top
error: Content is protected !!
WhatsApp chat Join our WhatsApp group