ಹಳೆ ವಿದ್ಯಾರ್ಥಿ ಸಂಘದ ನೂತನ ಸಮಿತಿ ರಚನೆ
ವರದಿಗಾರ (ಫೆ.03): ಪುತ್ತೂರು ತಾಲೂಕಿನ ಬಜತ್ತೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳು ತಮಗೆ ಶಿಕ್ಷಣ ನೀಡಿದ ಶಾಲೆಯ ಸಂಪೂರ್ಣ ಅಭಿವೃದ್ಧಿಗಾಗಿ ಶ್ರಮಿಸುವ ನಿರ್ಧಾರವನ್ನು ಇಂದು ಕರೆದಿದ್ದ ಹಳೆ ವಿದ್ಯಾರ್ಥಿ ಸಭೆಯಲ್ಲಿ ಕೈಗೊಂಡಿದ್ದು ತಮ್ಮ ಜೀವನಕ್ಕೆ ಆಸರೆಯಾದ ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗೆ ಹೆಗಲು ನೀಡಲು ಪ್ರಯತ್ನಿಸಿದ್ದಾರೆ.
ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಾಸು ದಡ್ಡು ಅಧ್ಯಕ್ಷತೆಯಲ್ಲಿ ನಡೆದ ಸಭೆಗೆ ಕಾರ್ಯದರ್ಶಿ ಸರ್ಫುರಾಝ್ ಅಬ್ಬಾಸ್ ಸಭೆಯ ಉದ್ಧೇಶ ಮತ್ತು ಹಿಂದಿನ ಸಭೆಯ ನಿರ್ಧಾರಗಳ ಬಗ್ಗೆ ಮಾಹಿತಿ ನೀಡಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ವಿಲ್ಫ್ರೆಡ್ ಡಿಸೋಜ, ಖಾಸಗಿ ಶಾಲೆಗಳ ಕುರಿತು ಮಕ್ಕಳ ಪೋಷಕರಿಗೆ ಇರುವ ಆಕರ್ಷಣೆ ಸರಕಾರಿ ಶಾಲೆಗಳ ಅವನತಿಗೆ ಕಾರಣವಾಗುತ್ತಿದೆ. ಎಲ್ಲ ಶೈಕ್ಷಣಿಕ ಸೌಲಭ್ಯಗಳು ಇದ್ದರೂ ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿಲ್ಲ. ಇದು ಅತ್ಯಂತ ಖೇಧಕರ ಸಂಗತಿಯಾಗಿದೆ ಎಂದು ಅವರು ವಿಷಾಧ ವ್ಯಕ್ತಪಡಿಸಿದರು. ಶತ ಮಾನೋತ್ಸವ ಆಚರಿಸಿದ ವಳಾಲು ಶಾಲೆಯ ಗತ ವೈಭವವನ್ನು ವಿವರಿಸಿದ ಅವರು, ಶಿಕ್ಷಕ ವೃಂದ, ಪೋಷಕರು, ಹಳೆ ವಿದ್ಯಾರ್ಥಿಗಳು ಮತ್ತು ಊರಿನ ಯುವ ಶಕ್ತಿ ಮನಸ್ಸು ಮಾಡಿದರೆ ಆ ಗತ ವೈಭವ ಮರುಕಳಿಸುವಂತೆ ಮಾಡಬಹುದೆಂದು ಅವರು ಹೇಳಿದರು.
ಹಿರಿಯರಾದ ಶೇಡಿ ಗುತ್ತು ದಾಮೋದರ ಗೌಡರು ಮಾತನಾಡಿ, ಈ ಶಾಲೆಗೆ ತುಂಬಾ ಒಳ್ಳೆಯ ಹೆಸರಿದೆ. ನಾವೆಲ್ಲರೂ ಸೇರಿ ಅದನ್ನು ಕಾಪಾಡೋಣ ಎಂದರು. ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಹೇಂದ್ರ ಜೈನ್ ಮಾತನಾಡಿ, ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲರೂ ಸಹಕರಿಸಬೇಕು ಎಂದು ವಿಜ್ಞಾಪಿಸಿದರು. ಈ ಸಂದರ್ಭ ಶಾಲೆಯ ಅಭಿವೃದ್ಧಿಗೆ ಹಳೆ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯಗಳು ಮತ್ತು ಸಲಹೆಗಳನ್ನು ನೀಡಿದರು.
ಸಭೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ನೂತನ ಸಮಿತಿಯನ್ನು ರಚಿಸಲಾಯಿತು. ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರ ವಿವರ ಈ ಕೆಳಗಿನಂತಿದೆ.
ಗೌರವಾಧ್ಯಕ್ಷರುಗಳಾಗಿ ವಿಲ್ಫ್ರೆಡ್ ಡಿಸೋಜ, ದಾಮೋದರ ಸೇಡಿ, ವಿಶ್ವನಾಥ ಗೌಡ ಪಿಜಕ್ಕಳ. ನೂತನ ಅಧ್ಯಕ್ಷರಾಗಿ ಧನಂಜಯ ಬಾರಿಕೆ, ಉಪಾಧ್ಯಕ್ಷರಾಗಿ ಉಮೇಶ್ ವಾಡ್ರಪಾಲ್, ಹನೀಫ್ ವಿ.ಪಿ, ಪ್ರಧಾನ ಕಾರ್ಯದರ್ಶಿಯಾಗಿ ಸರ್ಫುರಾಝ್ ಅಬ್ಬಾಸ್ ವಳಾಲ್, ಕಾರ್ಯದರ್ಶಿಯಾಗಿ ಹಮೀದ್ ಹೆಚ್, ದಿನಕರ ಗೌಡ ಎಂಜಿರಡ್ಕ, ಸೀತಾರಾಮ ಶೇಡಿ, ಕೋಶಾಧಿಕಾರಿಯಾಗಿ ವಾಸು ದಡ್ಡು, ಕ್ರೀಡಾ ಕಾರ್ಯದರ್ಶಿಯಾಗಿಧರ್ಣಪ್ಪ ಗೌಡ ಮುದ್ಯ, ಸಾಂಸ್ಕೃತಿಕ ಕಾರ್ಯದರ್ಶಿ ಜಗದೀಶ್ ಬಾರಿಕೆ, ಕಾನೂನು ಸಲಹೆಗಾರ ನಝೀರ್ ಬೆದ್ರೋಡಿ ಯವರನ್ನು ಆಯ್ಕೆ ಮಾಡಲಾಗಿದೆ ಎಂದು ಹಳೆ ವಿದ್ಯಾರ್ಥಿ ಸಂಘದ ಪ್ರಕಟಣೆ ತಿಳಿಸಿದೆ.
ಧನಂಜಯ ಬಾರಿಕೆ ಸರ್ಫುರಾಝ್ ಅಬ್ಬಾಸ್ ವಳಾಲ್
ನೂತನ ಅಧ್ಯಕ್ಷ ಪ್ರಧಾನ ಕಾರ್ಯದರ್ಶಿ

