ರಾಜ್ಯ ಸುದ್ದಿ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹತ್ಯೆಯ ಘಟನೆಯನ್ನು ಮರುಸೃಷ್ಟಿಸಿ ಸಂಭ್ರಮಾಚರಣೆಗೆ ಎಸ್.ಡಿ.ಪಿ.ಐ ಪ್ರತಿಕ್ರಿಯೆ: ರಾಜ್ಯವ್ಯಾಪಿ ಗೋಡ್ಸೆಯ ಪ್ರತಿಕೃತಿ ನೇಣುಕಂಬಕ್ಕೆ ಏರಿಸಿ ಪ್ರತಿಭಟಿಸಲು ಎಸ್.ಡಿ.ಪಿ.ಐ ಕರೆ

ವರದಿಗಾರ (ಜ.31): ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹತ್ಯಾದಿನವಾದ ಜನವರಿ 30 ರಂದು ಗಾಂಧೀಜಿಯ ಸಿದ್ಧಾಂತ, ಸಂದೇಶ, ತ್ಯಾಗದ ಬಗ್ಗೆ ದೇಶ ವಿದೇಶಗಳಲ್ಲಿ ಸ್ಮರಣೆ ನಡೆಯುತ್ತಿರುವ ಸಂದರ್ಭದಲ್ಲಿ ದೇಶಕ್ಕೆ ಅವಮಾನವಾಗುಂವತಹ ಘಟನೆ ನಡೆದಿರುವುದು ವಿಪರ್ಯಾಸವೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) ಕರ್ನಾಟಕ ರಾಜ್ಯ ಸಮಿತಿಯು ಪ್ರಕಟಣೆಯಲ್ಲಿ ಪ್ರತಿಕ್ರಿಯಿಸಿದೆ.

ಉತ್ತರ ಪ್ರದೇಶದ ಆಲಿಗಢದಲ್ಲಿ ಹಿಂದೂ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆ ಹಾಗೂ ಇತರ ಅವರ ಸಹಕಾರ್ಯಕರ್ತರು ನಕಲಿ ಬಂದೂಕಿನಿಂದ ರಾಷ್ಟ್ರಪಿತ ಗಾಂಧೀಜಿಯ ಪ್ರತಿಕೃತಿಗೆ ಗುಂಡಿಕ್ಕಿ ಹತ್ಯೆ ಮಾಡುವ ಮೂಲಕ ಮಹಾತ್ಮ ಗಾಂಧೀಜಿ ಹತ್ಯೆಯ ಘಟನೆಯನ್ನು ಮರುಸೃಷ್ಟಿಸಿ ಸಂಭ್ರಮಾಚಸಿದ್ದು, ಹತ್ಯಾ ದಿನವನ್ನು ಶೌರ್ಯ ದಿನವೆಂದು ಆಚರಿಸಿ ಸಿಹಿತಿಂಡಿ ಹಂಚಿ ಗಾಂಧೀಜಿಯನ್ನು ಹತ್ಯೆಗೈದ ಹಂತಕ ಗೋಡ್ಸೆಯ ಪ್ರತಿಕೃತಿಗೆ ಮಾಲಾರ್ಪಣೆ ಮಾಡುವ ಮೂಲಕ ದೇಶದ ಪ್ರಥಮ ಭಯೋತ್ಪಾದನಾ ಕೃತ್ಯವನ್ನು ಮತ್ತೊಮ್ಮೆ ಬೆಂಬಲಿಸಿರುವ ಮತ್ತು ಭಯೋತ್ಪಾದನಾ ಕೃತ್ಯವನ್ನು ನಡೆಸುವಂತೆ ಪರೋಕ್ಷವಾಗಿ ಕರೆ ನೀಡಿರುವ ಘಟನೆಯನ್ನು ಎಸ್‍ಡಿಪಿಐ ಕರ್ನಾಟಕ ರಾಜ್ಯ ಸಮಿತಿಯು ತೀವ್ರವಾಗಿ ಖಂಡಿಸಿದೆ.

ದೇಶವನ್ನೇ ತಲೆತಗ್ಗಿಸುವಂತಹ ಈ ಘಟನೆಯ ಬಗ್ಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) ಕರ್ನಾಟಕ ರಾಜ್ಯ ಸಮಿತಿಯು “ಗೋಡ್ಸೆಯ ಮರುಜನ್ಮ ಅನುಮತಿಸಲಾರೆವು” ಎಂಬ ಘೋಷಣೆಯೊಂದಿಗೆ ರಾಜ್ಯಾದ್ಯಂತ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹಂತಕ ನಾಥೂರಾಮ್ ಗೋಡ್ಸೆಯ ಪ್ರತಿಕೃತಿಯನ್ನು ನೇಣುಕಂಬಕ್ಕೆ ಏರಿಸುವ ಮೂಲಕ ಎಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿಭಟನೆಗೆ ಕರೆ ನೀಡಿದ ಭಾಗವಾಗಿ ವಿವಿಧ ಕಡೆಗಳಲ್ಲಿ ಎಸ್.ಡಿ.ಪಿ.ಐ ಗೋಡ್ಸೆಯ ಪ್ರತಿಕೃತಿಯನ್ನು ದಹಿಸುವ ಮೂಲಕ ತೀಕ್ಷವಾಗಿ ವಿರೋಧ ವ್ಯಕ್ತಪಡಿಸಿದೆ.

To Top
error: Content is protected !!
WhatsApp chat Join our WhatsApp group