ಸುತ್ತ-ಮುತ್ತ

ಪಾಪೆಮಜಲು : ಗಂಗಾ ಕಲ್ಯಾಣ ಯೋಜನೆಯ ಅನುದಾನದ ನೀರಿನ ಟ್ಯಾಂಕಿ ಒಡೆದ ಸ್ಥಳಕ್ಕೆ ಎಸ್ಡಿಪಿಐ ನಿಯೋಗ ಭೇಟಿ, ಸ್ಥಳ ಪರಿಶೀಲನೆ ; ಸಂತ್ರಸ್ತ ಕುಟುಂಬಕ್ಕೆ ಪರಿಹಾರಕ್ಕೆ ಆಗ್ರಹ

ಪುತ್ತೂರು: ಪಾಪೆಮಜಲು ಎಂಬಲ್ಲಿ ಸುಮಾರು ಎಂಟು ವರ್ಷಗಳ ಹಿಂದೆ ಕೆಂಪು ಕಲ್ಲಿನಿಂದ ಕಟ್ಟಿದ ನೀರಿನ ಟ್ಯಾಂಕ್ ವೊಂದರಲ್ಲಿ ನೀರು ತುಂಬಿದ ಬಳಿಕ ದಿಢೀರ್ ಒಡೆದು ಸ್ಥಳದಲ್ಲಿದ್ದ ವ್ಯಕ್ತಿಯೋರ್ವರು ಮೃತಪಟ್ಟು ಇನ್ನೋರ್ವರ ಕಾಲು ಮುರಿತಕ್ಕೊಳಗಾದ ಘಟನೆ ಅರಿಯಡ್ಕ ಗ್ರಾಮದ ಪಾಪೆಮಜಲು ಎಂಬಲ್ಲಿ  ಜನವರಿ 26ರಂದು ತಡರಾತ್ರಿ ನಡೆದಿದೆ. ಈ ಹೃದಯ ವಿದ್ರಾಯಕ ಘಟನೆ ನಡೆದ ಸ್ಥಳಕ್ಕೆ ಸೋಷಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ನಿಯೋಗ ತಂಡವು ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನವನ್ನು ಹೇಳಿ ಘಟನಾ ಸ್ಥಳವನ್ನು ವೀಕ್ಷಿಸಿ ಒಡೆದ ಟ್ಯಾಂಕನ್ನು ಪರಿಶೀಲನೆ ನಡೆಸಿ ಸಂಬಂಧಪಟ್ಟ ಇಲಾಖೆಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಹಾಗೂ ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿ ಇಲಾಖಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸುದೆಂದು ಹಾಗೂ ಸಂಬಂಧಪಟ್ಟ ಇಲಾಖೆಯಿಂದ ಸಂಪೂರ್ಣ ಮಾಹಿತಿಯನ್ನು ಪಡೆಯುವುದೆಂದು ತೀರ್ಮಾನಿಸಲಾಯಿತು. ಸಂಬಂಧಪಟ್ಟ ಇಲಾಖಾಧಿಕಾರಿಗಳು ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದರೆ ಸಂಬಂಧಪಟ್ಟ ಇಲಾಖೆ ಮುಂಭಾಗದಲ್ಲಿ ಉಗ್ರ ಹೋರಾಟವನ್ನು ಮಾಡುವುದೆಂದು ಎಸ್ಡಿಪಿಐ ನಿಯೋಗ ತಂಡವು ಘಟನಾ ಸ್ಥಳದಲ್ಲಿ ತೀರ್ಮಾನಿಸಿದರು.

ಈ ವಿಷಯವನ್ನು ಸಂಬಂಧಿಸಿ ಪುತ್ತೂರು ವಿಧಾನ ಸಭಾ ಕ್ಷೇತ್ರ ಸಮಿತಿ ಸದಸ್ಯರಾದ ಅಬ್ದುಲ್ ಹಮೀದ್ ಹಾಗೂ ನಾಗೇಶ್ ಕುರಿಯ ಮಾತನಾಡಿದರು. ಮತ್ತು ಎಸ್ ಡಿಪಿಐ ಕುಂಬ್ರ ವಲಯಾಧ್ಯಕ್ಷರಾದ ರಿಯಾಝ್, ವಲಯ ಸಮಿತಿ ಸದಸ್ಯರಾದ ಶರೀಫ್ ಕೆಎಂ,ಎಸ್.ಎಂ ಮಹಮ್ಮದ್, ಇರ್ಷಾದ್ ಅರಿಯಡ್ಕ, ಅಲ್ತಾಫ್ ಸಾರೆಪುಣಿ, ಇಮ್ರಾನ್ ತಿಂಗಳಾಡಿ ಹಾಗೂ ಅರಿಯಡ್ಕ ಗ್ರಾಮ ಸಮಿತಿ ಕಾರ್ಯದರ್ಶಿ ನಝೀರ್ SP ಉಪಸ್ಥಿತರಿದ್ದರು.

To Top
error: Content is protected !!
WhatsApp chat Join our WhatsApp group