ರಾಜ್ಯ ಸುದ್ದಿ

ಹಿಂದೂ ಹೆಣ್ಣು ಮಕ್ಕಳನ್ನು ಮುಟ್ಟಿದವರ ಕೈ ತೆಗೆಯಿರಿ: ಮತ್ತೆ ನಾಲಗೆ ಹರಿಯಬಿಟ್ಟ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ

ವರದಿಗಾರ (ಜ.27): ಹಿಂದೂ ಸಮಾಜದ ಹೆಣ್ಣು ಮಕ್ಕಳನ್ನು ಯಾರಾದ್ರೂ ಮುಟ್ಟಿದರೆ ಅಂಥವರ ಕೈ ಇರಬಾರದು. ಹಿಂದೂ ಸಂಘಟನೆಯ ಕಾರ್ಯಕರ್ತರು ಅಂಥವರ ಕೈ ತೆಗೆದು ಇತಿಹಾಸ ನಿರ್ಮಿಸಿಎಂದು ಕೇಂದ್ರ ಸಚಿವ ಅನಂತ್ ಕುಮಾರ ಹೆಗಡೆ ಮತ್ತೆ ತನ್ನ ನಾಲಗೆಯನ್ನು ಹರಿಯಬಿಟ್ಟು ಸಮಾಜವನ್ನು ಒಡೆಯಲು ಪರೋಕ್ಷವಾಗಿ ಕರೆ ನೀಡಿದ್ದಾರೆ.

ಅವರು ಕೊಡಗು ಜಿಲ್ಲೆಯ ಮಾದಾಪುರದಲ್ಲಿ ಭಾನುವಾರ ಕಲ್ಲುಕೋರೆಯ ಚೌಡಿಯಮ್ಮ ಮತ್ತು ಗುಳಿಗಪ್ಪ ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಾ ಮೇಲಿನ ಹೇಳಿಕೆಯನ್ನು ನೀಡಿದ್ದಾರೆ.

ಮಸೀದಿಗಳು ಬಿದ್ದರೆ ರಾಜ್ಯ ಸರ್ಕಾರದ ಮಂತ್ರಿಗಳು ಓಡಿ ಬರುತ್ತಾರೆ. ಮರು ನಿರ್ಮಿಸಲು ನೆರವು ನೀಡುತ್ತಾರೆ. ಅದೇ ಹಿಂದೂಗಳ ದೇವಸ್ಥಾನಗಳು ಬಿದ್ದರೆ ಯಾರೂ ನೋಡುವುದಿಲ್ಲ. ಹಿಂದೂ ಸಂಘಟನೆಗಳೇ ದುರಸ್ತಿ ಮಾಡಿಕೊಳ್ಳುವ ಸ್ಥಿತಿಯಿದೆಎಂದೂ ಈ ಸಂದರ್ಭ ಅನಂತ್ ಕುಮಾರ್ ಹೇಳಿಕೊಂಡಿದ್ದು, ಇತಿಹಾಸವನ್ನೇ ಪ್ರಶ್ನಿಸುವಂತೆ ಮಾಡಿದ್ದಾರೆ.

 

 

To Top
error: Content is protected !!
WhatsApp chat Join our WhatsApp group